ಉಡುಪಿ: ಕಾರ್ಕಳ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಕೌಡೂರು ಗ್ರಾಮದ ಗಣೇಶ್ ಪೂಜಾರಿ(48) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಸ್ವರೂಪ ಟಿ.ಕೆ. ಎ.4ರಂದು ಗಣೇಶ್ ಪೂಜಾರಿ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ. ಆರೋಪಿಯನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.
ಗಣೇಶ್ ಪೂಜಾರಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ 4 ಕೊಲೆಯತ್ನ ಒಂದು ದರೋಡೆ, ಮೂರು ಹಲೈ ಒಂದು ಅಕ್ರಮ ಕೂಟ, ಒಂದು ಜೂಜಾಟ ಹಾಗೂ ಒಂದು ಇತರ ಪ್ರಕರಣಗಳು ಸೇರಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಒಂದು ಪ್ರಕರಣದಲ್ಲಿ ಸಜೆ, 7 ಪ್ರಕರಣಗಳಲ್ಲಿ ಖುಲಾಸೆ, ಒಂದು ಪ್ರಕರಣದಲ್ಲಿ ನ್ಯಾಯಾಂಗ ವಿಚಾರಣೆ, ಉಳಿದ 2 ಪ್ರಕರಣಗಳು ತನಿಖೆಯಲ್ಲಿವೆ.
Comments are closed.