ಕರಾವಳಿ

ಸುಗಮ ಸಂಚಾರಕ್ಕೆ ಅಗತ್ಯ ಕ್ರಮ : ಪ್ರಮುಖ ರಸ್ತೆ ಕಾಮಗಾರಿಗಳನ್ನು ರಾತ್ರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

ಮಂಗಳೂರು ಮಾರ್ಚ್ 21 ಅಪಘಾತ ವಲಯವನ್ನು ಗುರುತಿಸಿ ನಿಗಾವಹಿಸುವ ಜೊತೆಗೆ ಪ್ರಮುಖ ರಸ್ತೆ ಕಾಮಗಾರಿಗಳ ರಿಪೇರಿಯನ್ನು ರಾತ್ರಿ ವೇಳೆ ಮಾಡಿ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳ, ಹಾಲಿ ಅಸ್ತಿತ್ವದಲ್ಲಿರುವ ಹೊಸ ರಸ್ತೆಗಳ ನಿರ್ಮಾಣ, ರಸ್ತೆ ರಿಪೇರಿ, ಅಭಿವೃದ್ಧಿ ರಸ್ತೆಗಳ ವಿಸ್ತರಣಾ ಕಾರ್ಯದ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತರ ಜೊತೆ ಸವಿವರ ಚರ್ಚೆ ನಡೆಸಿದರು.

ರಸ್ತೆ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ರಿಫ್ಲೆಕ್ಟರ್ಸ್, ಝೀಬ್ರಾ ಕ್ರಾಸಿಂಗ್‍ನಂತಹ ಮೂಲಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಿದರು. ಮೀನು ಲಾರಿಗಳಿಂದ ರಸ್ತೆಯಲ್ಲಿ ನೀರು ಚೆಲ್ಲುವ ಕುರಿತು ಮೀನು ಸಾಗಾಟ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಎಸಿಪಿ ಉಮಾ ಪ್ರಶಾಂತ್ ಅವರಿಗೆ ಸೂಚಿಸಿದರು.

ಅವೈಜ್ಞಾನಿಕ ವೇಗ ನಿಯಂತ್ರಕ, ರಸ್ತೆ ಉಬ್ಬುಗಳಿಗೆ ಬಣ್ಣದ ಗುರುತು, ಮಾರ್ಗಸೂಚಿ ಫಲಕಗಳನ್ನು ಲಗತ್ತಿಸಲು ಸೂಚನೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಈಗಾಗಲೇ ಕಲ್ಪಿಸಲಾಗಿದ್ದರೂ ಅವರು ಅದರ ಬಳಕೆಗೆ ಹಿಂದೇಟು ಹಾಕುತ್ತಿ ದ್ದಾರೆ ಎಂದು ಮಹಾನಗರಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವಿವರಿಸಿದಾಗ, ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, ವಾರದಲ್ಲಿ ಒಂದು ದಿನ ಅವರನ್ನು ನಿಗದಿತ ರಸ್ತೆಯಿಂದ ಎಬ್ಬಿಸಲು ಆರಂಭಿಸಿ ಬಳಿಕ ನಿಧಾನವಾಗಿ ಅವರನ್ನು ಪರ್ಯಾಯ ವ್ಯವಸ್ಥೆಗೆ ಒಗ್ಗಿಕೊಳ್ಳಲು ಅವಕಾಶ ಕಲ್ಪಿಸಿ, ಇದರಿಂದ ವ್ಯಾಪಾರಿಗಳು ಹಾಗೂ ಅವರಲ್ಲಿ ವ್ಯಾಪಾರ ಮಾಡುವವರು ವ್ಯವಸ್ಥೆಗೆ ಹೊಂದಲು ಅವಕಾಶವಾಗಲಿದೆ ಎಂದರು. ಈ ಸಂಬಂಧ ಸಮಿತಿಯೊಂದನ್ನು ರಚಿಸಿ ಅನುಷ್ಠಾನಕ್ಕೆ ತರಲು ಸೂಚಿಸಿದರು.

ಜಿಲ್ಲೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಬುಲೆಟ್ ಟ್ಯಾಂಕ್‍ಗಳಿಗೆ ಸ್ಪೀಡ್ ಗವರ್ನರ್ ಹಾಗೂ ಚಾಲಕರಿಗೆ ಕಟ್ಟು ನಿಟ್ಟಿನ ಆದೇಶಗಳನ್ನು ನೀಡುವ ಜೊತೆಗೆ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಪರ್ಮಿಟ್‍ನ್ನು ರದ್ದುಪಡಿಸುವಂತೆ ಆರ್ ಟಿ ಒ ಕ್ರಮಗಕೈಗೊಳ್ಳುವಂತೆ ಸೂಚಿಸಿದರು.

ಅಡಿಷನಲ್ ಎಸ್ ಪಿ ವಿಕ್ರಮ ಅಮಠೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Comments are closed.