ಕರಾವಳಿ

ಮತದಾರರರಲ್ಲಿ ಜಾಗೃತಿ ಮೂಡಿಸಲು ಬೀಚ್ ವಾಲಿಬಾಲ್ ಸ್ಪರ್ಧೆ ಹಾಗೂ ಮ್ಯಾರಾಥಾನ್ ಸ್ಪರ್ಧೆ 

Pinterest LinkedIn Tumblr

ಮಂಗಳೂರು ಮಾರ್ಚ್ 21 : ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ದ. ಕ ಜಿಲ್ಲಾಡಳಿತ, ದ. ಕ. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಇದರ ಸಹಯೋಗದಲ್ಲಿ ಮಾರ್ಚ್ 23 ರಂದು ಪೂರ್ವಾಹ್ನ 9.30ಗಂಟೆಗೆ ಪಣಂಬೂರು ಬೀಚ್‍ನಲ್ಲಿ ದಕ. ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಬೀಚ್ ವಾಲಿಬಾಲ್ ( (3ಜನದ ತಂಡ)ಸ್ಪರ್ಧೆಯನ್ನು ನಡೆಸಲಾಗುವುದು. ಭಾಗವಹಿಸುವ ಸ್ಪರ್ಧಾಳುಗಳು ಸದರಿ ದಿನಾಂಕ ಮತ್ತು ಸ್ಥಳದಲ್ಲಿ ಬೆಳಗ್ಗೆ 9 ಗಂಟೆಯೊಳಗೆ ವರದಿಮಾಡಿಕೊಳ್ಳಬೇಕು.

ಮಾರ್ಚ್ 24 ರಂದು, ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ಬೆಳಗ್ಗೆ 7 ಗಂಟೆಗೆ ದ. ಕ. ಜಿಲ್ಲಾ ಮಟ್ಟದ 16ವರ್ಷ ಕೆಳಗಿನವರಿಗೆ ಮತ್ತು 16ವರ್ಷ ಮೇಲ್ಪಟ್ಟವರಿಗೆ ಮ್ಯಾರಾಥಾನ್ (18 ಕಿ.ಮೀ) ಸ್ಪರ್ಧೆ ಹಾಗೂ ಹಿರಿಯ ನಾಗರಿಕರಿಗೆ ಮತದಾನದ ಕಡೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ನಡೆಸಲಾಗುವುದು.

16ವರ್ಷ ಕೆಳಗಿನವರಿಗೆ – ಈ ಸ್ಪರ್ಧೆಯು ಮೂಡಬಿದ್ರೆ ಸ್ವರಾಜ್ ಮೈದಾನದಿಂದ ಪ್ರಾರಂಭಗೊಂಡು – ಮಾರಿಗುಡಿಯ ಎದುರು ಭಾಗದಿಂದ -ನೇರವಾಗಿ ಮೂಡಬಿದ್ರೆ ಮುಖ್ಯರಸ್ತೆಯಾಗಿ- ಹನುಮಾನ್ ದೇವಸ್ಥಾನ- ಹಳೇ ಪೋಲಿಸ್ ಸ್ಟೇಷನ್ ತಲುಪಿ ಅಲ್ಲಿಂದ ಎಡಕ್ಕೆ ತಿರುಗಿ- ಕಾರ್ಕಳ ಮಾರ್ಗವಾಗಿ ಜೈನ್ ಪೇಟೆಯಿಂದ ಮುಂದಕ್ಕೆ – ಅಲಂಗಾರ್ ಅಲ್ಲಿಂದ ಎಡಕ್ಕೆ -ಕೊಡಿಯಡ್ಕ ದೇವಸ್ಥಾನ ರಸ್ತೆಯಾಗಿ- ಮೂಡಬಿದ್ರೆ ರಿಂಗ್ ರೋಡ್ ಮುಖಾಂತರ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಮುಕ್ತಾಯಗೊಳ್ಳಲಿದೆ.

16ವರ್ಷ ಮೇಲ್ಪಟ್ಟವರಿಗೆ – ಸ್ಪರ್ಧೆಯು ಮೂಡಬಿದ್ರೆ ಸ್ವರಾಜ್ ಮೈದಾನದ ಮಾರಿಗುಡಿ ಮುಂಭಾಗದಿಂದ ಪ್ರಾರಂಭವಾಗಿ-ಮೂಡಬಿದ್ರೆ ಮುಖ್ಯರಸ್ತೆ-ಹಳೆ ಪೋಲಿಸ್ ಸ್ಟೇಶನ್-ಜ್ಯೋತಿನಗರ-ಮಹಾವೀರ ಕಾಲೇಜು, ಕೊಡಂಗಲ್,ಜೈನ್ ಕಾಲೇಜು-ಜೈನ್ ಪೇಟೆ-ಅಲಂಗಾರ್ ವೃತ್ತ-ಕೊಡ್ಯಡ್ಕ ರಸ್ತೆ-ಮೂಡಬಿದ್ರೆ ರಿಂಗ್ ರೋಡ್-ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಮುಕ್ತಾಯಗೊಳ್ಳಲಿರುವುದು.
ಹಿರಿಯ ನಾಗರಿಕರಿಗೆ – ಮತದಾನದ ಕಡೆಗೆ ಸೌಹಾರ್ದ ನಡಿಗೆ -2019 ಮೂಡಬಿದ್ರೆ ಮಾರಿಗುಡಿ ಮುಂಭಾಗದಿಂದ ಸಾವಿರ ಕಂಬದ ಬಸದಿವರೆಗೆ ಸಾಗಲಿದೆ.

ಈ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ಶಾಲಾ/ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವವಹಿಸ ಬೇಕು ಮತ್ತು ಭಾಗವಹಿಸುವವರ ಹೆಸರನ್ನು ಮಾರ್ಚ್ 22 ರೊಳಗೆ (Email: adyssdk@yahoo.com) ಅಥವಾ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ. ಕ. ಜಿಲ್ಲೆ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451264, ಅಥವಾ ಮೊ.ಸಂ. 9480146144ವನ್ನು ಸಂಪರ್ಕಿಸಬಹುದು.
ಬೀಚ್ ವಾಲಿಬಾಲ್ ಹಾಗೂ ಮ್ಯಾರಾಥಾನ್ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.