ಕರಾವಳಿ

ದೇಹದ ಯಾವ ಭಾಗಕ್ಕಾದರೂ ಗಾಯಗಳು ಆದ ತಕ್ಷಣ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ

Pinterest LinkedIn Tumblr

ಸಮಾನ್ಯವಾಗಿ ದೇಹದ ಯಾವ ಭಾಗಕ್ಕಾದರೂ ಗಾಯಗಳು ಆದ ತಕ್ಷಣ ಕೆಲವು ಜನ ಪಕ್ಕದಲ್ಲಿ ತಕ್ಷಣಕ್ಕೆ ಏನು ಸಿಗುತ್ತೋ ಅದನ್ನೇ ಗಾಯದಿಂದ ರಕ್ತ ಬರದಂತೆ ತಡೆಯಲು ಹಾಕುತ್ತಾರೆ. ಅಚ್ಚರಿ ಏನಂದ್ರೆ ಕೆಲವರು ಮಣ್ಣನ್ನು ಕೂಡ ರಕ್ತ ಬರದಂತೆ ತಡೆಯಲು ಹಾಕುವುದಂಟು.ಇದು ತಪ್ಪು.ಇದರಿಂದ ಬೇರೆ ಬೇರೆ ತೆರನಾದ ಖಾಯಿಲೆಗಳು ಬರಲು ಆಸ್ಪದವಾಗುತ್ತದೆ.

ಹಾಗಾದ್ರೆ ನಿಮ್ಗೆ ಏನಾದ್ರೂ ಗಾಯಗಳು ಆದ ತಕ್ಷಣ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ…

ಕತ್ತರಿಸಿದ ಗಾಯಗಳಾಗಿದ್ದರೆ ಹೀಗೆ ಮಾಡಿ…

ಆ ಜಾಗವನ್ನು ಸೋಪು ಮತ್ತು ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಮಣ್ಣು ಇದ್ದರೆ ಹುಷಾರಾಗಿ ತೊಳೆಯಿರಿ.
ಗಾಯದ ಮೇಲೆ ರಕ್ತ ನಿಲ್ಲುವವರೆಗೆ ನೇರವಾಗಿ ಒತ್ತಡಹಾಕಿ
ಗಾಯಕ್ಕೆ ಸ್ಟೆರೈಲ್ ಬ್ಯಾಂಡೇಜು ಹಾಕಿ.
ಗಾಯವು ಆಳವಾಗಿದ್ದರೆ ಕೂಡಲೇ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ

ತರಚಿದ ಗಾಯಗಳಾಗಿದ್ದರೆ…
ಸೋಪು ಮತ್ತು ಬೆಚ್ಚಗಿನ ನೀರಿನಿಂದ ಗಾಯವನ್ನು ತೊಳೆಯಿರಿ.
ಅದರಿಂದ ರಕ್ತ ಸುರಿಯುತ್ತಿದ್ದರೆ, ಒಸರುತ್ತಿದ್ದರೆ ಅದನ್ನು ಸೋಂಕಿನಿಂದ ರಕ್ಷಿಸಲು ಬ್ಯಾಂಡೇಜು ಹಾಕಿ.

ಒಂದು ವೇಳೆ ನಿಮ್ಮ ಗಾಯಕ್ಕೆನಾದ್ರೂ ಸೋಂಕು ತಗಲಿದ್ದರೆ ಈ ಲಕ್ಷಣಗಳು ಇರುತ್ತವೆ…
ಬಾವು
ಕೆಂಪಾಗುವುದು
ನೋವು
ಜ್ವರ ಬರಬಹುದು
ಕೀವು ಆಗ ಬಹುದು

Comments are closed.