ಕರಾವಳಿ

ಪಾಕಿಸ್ಥಾನದ ಸೆರೆಯಲ್ಲಿರುವ ಭಾರತೀಯ ಕೈದಿಗಳ ಬಿಡುಗಡೆಗೆ ಯತ್ನ : ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

Pinterest LinkedIn Tumblr

ಮಂಗಳೂರು: ಪಾಕಿಸ್ಥಾನದ ಸೆರೆಯಲ್ಲಿರುವ ಯುದ್ಧ ಕೈದಿಗಳ ಬಿಡುಗಡೆಗೆ ಭಾರತ ಸರಕಾರದಿಂದ ಪ್ರಯತ್ನಗಳು ನಡೆದಿದ್ದು, ಕೈದಿಗಳಾಗಿರುವ ಎಲ್ಲ ಭಾರತೀಯರ ಬಿಡುಗಡೆಗೂ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನಗರದ ಹೊಟೇಲ್‌ ಓಶಿಯನ್‌ ಪರ್ಲ್ನಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಾಕ್‌ ಜೈಲುಗಳಲ್ಲಿರುವ ಬಹಳಷ್ಟು ಯುದ್ಧ ಕೈದಿಗಳು ಬಿಡುಗಡೆಯಾಗಿ ಬಂದಿದ್ದಾರೆ. ಇನ್ನುಳಿದವರ ಬಿಡುಗಡೆ ಬಗ್ಗೆ ಮಾತುಕತೆ ಚಾಲನೆಯಲ್ಲಿದೆ. 74 ಮಂದಿ ಬಂಧಿತರ ಬಿಡುಗಡೆಗೆ ವಿವಿಧ ಹಂತದಲ್ಲಿ ಪ್ರಯತ್ನ ನಡೆಯುತ್ತಿದೆ.ಇದೊಂದು ನಿರಂತರ ಪ್ರಕ್ರಿಯೆ ಎಂದರು.

ಪುಲ್ವಾಮ ಘಟನೆ ಬಳಿಕ ಪಾಕಿಸ್ತಾನದ‌ ಜತೆ ಕ್ರಿಕೆಟ್ ಸಂಬಂಧ ಕಡಿದು ಹಾಕಬೇಕು ಎಂಬ ಬೇಡಿಕೆ ಕುರಿತು‌ ಯಾವುದೇ ನಿರ್ಧಾರ ಆಗಿಲ್ಲ ಎಂದು ಹೇಳಿದ ಅವರು, ಮುಂಬರುವ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಲಿದೆಯೇ ಎಂಬ ಪ್ರಶ್ನೆಗೆ ಇದನ್ನು ಭಾರತೀಯ ಕ್ರಿಕೆಟ್‌ ಮಂಡಳಿ ನಿರ್ಧರಿಸಬೇಕಾಗಿದೆ ಎಂದು ಉತ್ತರಿಸಿದರು.

Comments are closed.