ಕರಾವಳಿ

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ವರ್ಧಂತ್ಯುತ್ಸವ: ದೇವಾಡಿಗ ಮಹೋತ್ಸವ, ಸಮಾಜದ ಹಲವರಿಗೆ ಸನ್ಮಾನ

Pinterest LinkedIn Tumblr

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯೆಗೆ ಬೆಲೆಯಿದೆ. ವಿದ್ಯೆಯಿಂದ ವಿನಯ ಸಿಗುತ್ತದೆ. ಮಕ್ಕಳಿಗೆ ವಿದ್ಯೆಯನ್ನು ನೀಡುವ ಜೊತೆಗೆ ಎಳವಿನಲ್ಲಿಯೇ ಉತ್ತಮ ಸಂಸ್ಕೃತಿ ಸಂಸ್ಕಾರ ಕಲಿಸಿ ಎಂದು ಬಾರಕೂರು ಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿ ಕರೆ ನೀಡಿದರು.

ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಥಮ ವರ್ಧಂತ್ಯುತ್ಸವ ಪ್ರಯುಕ್ತ ಮಂಗಳವಾರ ಸಂಜೆ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    

ಬಾರಕೂರು ಎಲ್ಲ ಸಮುದಾಯದವರ ಆರಾಧ್ಯ ಕೇಂದ್ರವಾಗಿದ್ದು ದೇವಾಲಯಗಳ ಬೀಡಾಗಿದೆ. ಬಾರ್ಕೂರು ಎಂಬ ಈ ಊರು ಮುಂದೆ ಪ್ರವಾಸಿ ತಾಣವಾಗಬೇಕು. ದೇವರ ಪೂಜೆಗೆ ನಾದದ ಆವಶ್ಯಕತೆ ಇದೆ. ವೇದದಿಂದ ನಾದ ಹುಟ್ಟಿದೆ. ಈ ನಾದವನ್ನು ಒಲಿಸಿಕೊಳ್ಳಲು ತಪಸ್ಸು ಮಾಡಬೇಕು. ಅದು ದೇವಾಡಿಗ ಸಮುದಾಯದವರಿಗೆ ಒಲಿದಿದೆ ಎಂದರು.

ದೇವಾಡಿಗ ಮಹೋತ್ಸವದ ಈ ಕಾರ್ಯಕ್ರಮದಲ್ಲಿ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌ ಅಧ್ಯಕ್ಷತೆ ವಹಿಸಿದ್ದರು.

ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ, ಪ್ರಸಿದ್ಧ ನ್ಯೂರೋ ಸರ್ಜನ್‌ ಡಾ| ಕೆ.ವಿ. ದೇವಾಡಿಗ, ಆಕ್ಮೆ ಗ್ರೂಫ್ ಆಫ್ ಕಂಪೇನಿಸ್ ದುಬೈ, ಮಸ್ಕತ್ ಇಲ್ಲಿನ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ದುಬೈ, ಹೊಟೇಲ್‌ ಉದ್ಯಮಿ ಪಿ. ರಾಮಣ್ಣ ಶೇರಿಗಾರ್‌, ಉದ್ಯಮಿಗಳಾದ ಸುರೇಶ್‌ ಡಿ. ಪಡುಕೋಣೆ, ಡಾ. ದೇವರಾಜ್, ರವಿ ದೇವಾಡಿಗ, ಆಲೂರು ರಘುರಾಮ ದೇವಾಡಿಗ, ಎಸ್‌.ಎಂ. ಚಂದ್ರ, ನಾರಾಯಣ ದೇವಾಡಿಗ ದುಬಾೖ, ನಾಗರಾಜ್‌ ಪಡುಕೋಣೆ, ಜನಾರ್ದನ ಎಸ್‌. ದೇವಾಡಿಗ, ರಘುರಾಮ್‌ ದೇವಾಡಿಗ ಶಿವಮೊಗ್ಗ, ನರಸಿಂಹ ದೇವಾಡಿಗ ಉಡುಪಿ, ಹಿರಿಯಡ್ಕ ಮೋಹನದಾಸ್‌ ಮುಂಬಯಿ ಮೊದಲಾದವರು ಉಪಸ್ಥಿತರಿದ್ದರು.

ಸೂರಾಲು ಚಿನ್ಮಯ ಮಿಷನ್‌ನ ದಾಮೋದರ ಚೈತನ್ಯ ಶುಭಾಶಂಸನೆಗೈದರು. ನರಸಿಂಹ ದೇವಾಡಿಗ ಸ್ವಾಗತಿಸಿ, ಜನಾರ್ದನ ಬಿ. ದೇವಾಡಿಗ ಬಾರಕೂರು ಪ್ರಸ್ತಾವನೆಗೈದರು. ಯಾದವ ದೇವಾಡಿಗ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಗಳು- ಅಮಿತ್ ತೆಕ್ಕಟ್ಟೆ, ವಾಲ್ಮೀಕಿ ಸ್ಟುಡಿಯೋ

Comments are closed.