ಕರಾವಳಿ

ದ.ಕ.ಜಿಲ್ಲೆಯ ಎಲ್ಲಾ ರಸ್ತೆ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಲು ಸಚಿವ ಗಡ್ಕರಿ ಖಡಕ್ ಸೂಚನೆ

Pinterest LinkedIn Tumblr

ಸಂಸದ ನಳಿನ್ ಕುಮಾರ್ ಮನವಿ ಹಿನ್ನೆಲೆ : ದೆಹಲಿಯಲ್ಲಿ ದ.ಕ,ಜಿಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ವಿಶೇಷ ಸಭೆ

ನವದೆಹಲಿ : ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್  ಇವರ ಮನವಿಯ ಮೇರೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಕುರಿತು ವಿಶೇಷ ಸಭೆಯು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ.ನಿತಿನ್ ಗಡ್ಕರಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ರಾಷ್ಟ್ರೀಯ ಹೆದ್ದಾರಿ-77ರಲ್ಲಿ ಬಿ.ಸಿ ರೋಡ್ ನಿಂದ ಅಡ್ಡಹೊಳೆವರೆಗಿನ ಚತುಷ್ಟ್ಪತ ಕಾಮಗಾರಿಯು L&T ಕಂಪನಿಯಿಂದ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಂಸದರ ಮನವಿಯನ್ನು ಪರಿಗಣಿಸಿದ ಸಚಿವರು  L&T ಕಂಪನಿ ಹಾಗೂ ಎನ್.ಎಚ್.ಎ.ಐ ಅಧಿಕಾರಿಗಳಿಗೆ ಕಾಮಗಾರಿಯನ್ನು ಕಾನೂನು ಸಮಸ್ಯೆಗಳನ್ನು ಪರಿಹರಿಸಿ ತ್ವರಿತಗತಿಯಲ್ಲಿ ಮುಂದುವರೆಸುವಂತೆ ಆದೇಶಿಸಿದರು.

ತಲಪಾಡಿ – ಕುಂದಾಪುರ ಚತುಷ್ಟ್ಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಕಾಮಗಾರಿ ಹಾಗೂ ತೊಕ್ಕೊಟ್ಟು ಮತ್ತು ಪಂಪವೆಲ್ ಮೇಲ್ಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಫೆಬ್ರವರಿ ಅಂತ್ಯದೊಳಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ನವಯುಗ ಸಂಸ್ಥೆಗೆ ಸಚಿವರ ಖಡಕ್ ಸೂಚನೆ ನೀಡಿದರು.

ಕುಲಶೇಖರ – ಕಾರ್ಕಳ,  ಬಿ.ಸಿ.ರೋಡ್ – ಕಟೀಲು – ಮೂಲ್ಕಿ ಹಾಗೂ ಮೇಲ್ಕಾರು – ಕೊಣಾಜೆ – ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದರು. ಫೆಬ್ರವರಿ ಅಂತ್ಯದೊಳಗೆ ಈ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ತಲಪಾಡಿ – ಕುಂದಾಪುರ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ  ಅಧಿಕಾರಿಗಳಿಗೆ ತಿಳಿಸಿದರು.

ಈ ಸಭೆಯಲ್ಲಿ ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿದರು. ರಾ.ಹೆ ಸಿ.ಜಿ.ಮ್ ಶ್ರೀ.ಅಲೋಕ್ ದೀಪಾಂಕರ್  ಬೆಂಗಳೂರು  ಆರ್.ಓ ಶ್ರೀ. ಆರ್.ಸಿ ಸೂರ್ಯವಂಶಿ, ಸಚಿವರ ಕಾರ್ಯದರ್ಶಿ ಶ್ರೀ. ವೈಭವ್ ದಾಂಘೆ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.