ಕರಾವಳಿ

ಶ್ರೀರಾಮನ ಅವಹೇಳನ : ಸಾಹಿತಿ ಭಗವಾನ್‌ರನ್ನು ಬಂಧಿಸಲು ವಿ‌ಎಚ್‌ಪಿ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ .08: ಸಾಹಿತಿ ಭಗವಾನ್‌ ತಮ್ಮ ಪುಸ್ತಕದಲ್ಲಿ ಶ್ರೀರಾಮನನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ಹಾಗೂ ಭಗವಾನ್ ಬಂಧನಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಲಾಯಿತು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಎಚ್‌ಪಿ ಮುಂಖಡ ಶರಣ್ ಪಂಪ್‌ವೆಲ್, ರಾಮ ಮಂದಿರ ಏಕೆ ಬೇಡ ಎನ್ನುವ ಕೃತಿಯಲ್ಲಿ ಸಾಹಿತಿ ಭಗವಾನ್‌ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ನೋವಾಗಿದೆ ಈ ಹಿನ್ನೆಲೆಯಲ್ಲಿ ಭಗವಾನ್‌ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಜೊತೆಗೆ ಈ ಪುಸ್ತಕವನ್ನು ನಿಷೇಧಿಸಬೇಕು. ಪುಸ್ತಕವನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ವಿಎಚ್‌ಪಿ ಮುಂಖಡರಾದ ಶಿವಾನಂದ ಮೆಂಡನ್, ಆಶಾ ಜಗದೀಶ್‌ಚಂದ್ರ, ಮಧು ಸೂಧನ ಮೊದಲಾದವರು ಮಾತನಾಡಿದರು.

Comments are closed.