ಕರಾವಳಿ

ದ.ಕ.ಜಿಲ್ಲೆಯಲ್ಲಿ ಬಂದ್‌ಗೆ ನಿರಸ ಪ್ರತಿಕ್ರಿಯೆ : ಮಂಗಳೂರಿಗೆ ತಟ್ಟದ ಬಂದ್ ಬಿಸಿ

Pinterest LinkedIn Tumblr

ಮಂಗಳೂರು, ಜನವರಿ.08 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಮಂಗಳೂರಿನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ ಯಾವೂದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಕಾರ್ಮಿಕರೇ ಹೆಚ್ಚಾಗಿ ಕಾರ್ಯನಿರ್ವಾಹಿಸುತ್ತಿರುವ ನಗರದ ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ಇಂದು ಕೂಡ ವ್ಯಾಪಾರ ವಹಿವಾಟುಗಳು ಸರಾಗವಾಗಿ ನಡೆದಿದೆ. ಉಳಿದಂತೆ ಹೆಚ್ಚಿನ ಅಂಗಡಿ, ಹೊಟೇಲ್ ಹಾಗೂ ಇತರ ಮಳಿಗೆಗಳು ತೆರೆದಿವೆ. ಅಟೋ ರಿಕ್ಷಾ ಸಂಚಾರದಲ್ಲಿ ಯಾವೂದೇ ವ್ಯತ್ಯಾಯವಾಗಿಲ್ಲ. ಕೆಲವು ಸಿಟಿ ಬಸ್ ಗಳು ಮಾತ್ರ ರಸ್ತೆಗಿಳಿಯಲ್ಲ. ಆದರೆ ಹೆಚ್ಚಿನ ಕಡೆಗಳಲ್ಲಿ ಸಿಟಿ ಬಸ್ ಗಳು ಎಂದಿನಂತೆ ಓಡಾಟ ನಡೆಸಿವೆ. ಮೊದಲೇ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜನ ಸಂಚಾರ ವಿರಳವಾಗಿದೆ.

ನಗರದ ಮತ್ಸ್ಯ ವ್ಯಾಪರ ಕೇಂದ್ರವಾದ ಬಂದರು ದಕ್ಕೆಯಲ್ಲಿ ಎಂದಿನಂತೆ ಮೀನು ವ್ಯಾಪಾರ ಜೋರಾಗಿಯೇ ಮುಂದುವರಿದಿದೆ. ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿರುವ ದಕ್ಕೆಯಲ್ಲಿ ಎಲ್ಲಾ ವ್ಯವಹಾರಗಳು ಸರಾಗವಾಗಿ ನಡೆಯುತ್ತಿರುವುದರಿಂದ ಬಂದ್ ಬಿಸಿ ತಟ್ಟಿಲ್ಲ.

ಉಡುಪಿಯಲ್ಲಿ ಮಾತಿನ ಚಕಮಕಿ :

ಎರಡು ದಿನ ಭಾರತ್ ಬಂದ್ ವಿಚಾರಕ್ಕೆ ಸಂಬಂಧಿಸಿದ ಉಡುಪಿಯಲ್ಲಿ ಕಾರ್ಮಿಕ ಸಂಘಟನೆ ಮತ್ತು ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸ್ಥಳಕ್ಕೆ ಕೆಎಸ್.ಆರ್.ಪಿಪಿ ಪೊಲೀಸ್ ತಂಡ ಹಾಗು ಉಡುಪಿ ನಗರ ಠಾಣೆ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ಆಟೋ ಓಡಾಟಕ್ಕೆ ಬಸ್ ಚಾಲಕ, ನಿರ್ವಾಹಕರು ಆಕ್ಷೇಪಿಸಿದ್ದು ಮಾತಿನ ಚಕಮಕಿಗೆ ಕಾರಣ ಎಂದು ತಿಳಿದುಬಂದಿದೆ.

Comments are closed.