ಕರಾವಳಿ

ಪತ್ರಕರ್ತರ ಯಕ್ಷಗಾನಕ್ಕೆ ಅವಮಾನ : ಕನ್ನಡ ಕಟ್ಟೆ ಖಂಡನೆ

Pinterest LinkedIn Tumblr

ಮಂಗಳೂರು: ಹವ್ಯಾಸಿ ಕಲಾವಿದರ ಅದರಲ್ಲೂ ಪತ್ರಕರ್ತರ ವಾರ್ಷಿಕ ಕೌಟುಂಬಿಕ ಕಾರ್ಯಕ್ರಮದಲ್ಲೇ ಈ ರೀತಿ ಯಕ್ಷಗಾನ ನಡೆಯು ವಾಗಲೇ ಮೈಕ್ ಕಿತ್ತು ಕಾರ್ಯಕ್ರಮ ನಿಲ್ಲಿಸಲು ಪ್ರಯತ್ನಿಸುವುದು ವಿದ್ಯುತ್ ಕಡಿತ ಗೊಳಿಸುವುದು ಕರಾವಳಿಯ ಶಿಷ್ಟಾಚಾರಕ್ಕೆ ಶೋಭೆ ತರುವಂತದ್ದಲ್ಲ ಎಂದು ಕನ್ನಡ ಕಟ್ಟೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಏನೇ ರೀತಿ ನೀತಿ ರಿವಾಜು ಗಳಿದ್ದರೂ ಸಹಾ ಕರಾವಳಿಯ ಕಲಾ ಬದುಕಿನ ಹೆಗ್ಗುರುತು ಯಕ್ಷಗಾನಕ್ಕೆ ಅವಮಾನ ಅಪಚಾರ ಮಾಡಬಾರದಿತ್ತು. ಇದನ್ನು ಕನ್ನಡ ಕಟ್ಟೆ ಖಂಡಿಸುತ್ತೆ.

ಹವ್ಯಾಸಿ ಯಕ್ಷಗಾನ ಕಲಾವಿದರು ಕನ್ನಡ ಕಟ್ಟೆಯ ಸದಸ್ಯರು ಹಾಗಾಗಿ ನಾವು ನಿಮ್ಮ ಹಿಂದೆ ನ್ಯಾಯಕ್ಕಾಗಿ ಧ್ವನಿ ಕ್ರೊಡೀಕರಣ ಕನ್ನಡ ಕಟ್ಟೆಯವರು ಮಾಡಿದ್ದಾರೆ ಎಂದು ಸಂಸ್ಥಾಪಕ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಘಟನೆ :

ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಶನಿವಾರ ಮಧ್ಯಾಹ್ನ ಪ್ರೆಸ್‍ಕ್ಲಬ್ ಡೇ ಸಂಭ್ರಮದಲ್ಲಿ ಪತ್ರಕರ್ತರ ಯಕ್ಷಗಾನ ನಡೆಯುತ್ತಿದ್ದ ವೇಳೆ ಮ್ಯಾನೇಜರ್ ಧ್ವನಿವರ್ಧಕ ಮತ್ತು ರಂಗಸ್ಥಳದ ಲೈಟ್ ಆಫ್ ಮಾಡಿ, ಯಕ್ಷಗಾನಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿತ್ತು.

ಪತ್ರಕರ್ತರು ಯಕ್ಷ ಗುರು ರಾಮಚಂದ್ರ ರಾವ್ ಎಲ್ಲೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ನರಕಾಸುರ ವಧೆ, ಮೈಂದ ದ್ವಿವಿಧ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. 1.45 ಗಂಟೆಯ ಯಕ್ಷಗಾನ ಅವಧಿ. ಆದರೆ ಸಭಾ ಕಾರ್ಯಕ್ರಮಗಳು ವಿಳಂಬವಾದ ಕಾರಣ ಮಧ್ಯಾಹ್ನ 1.30ರ ಬಳಿಕ ಯಕ್ಷಗಾನ ಆರಂಭವಾಗಿತ್ತು. 3 ಗಂಟೆಯಾಗುತ್ತಿದ್ದಂತೆಯೇ ಸಭಾಂಗಣದ ಅವಧಿ ಮುಗಿಯಿತು ಎಂದು ಮ್ಯಾನೇಜರ್ ಕೆವಿನ್ ಎಂಬಾತ ಧ್ವನಿವರ್ಧಕ ಬಂದ್ ಮಾಡಿಸಿದರು. ಸಿಬ್ಬಂದಿ ವೇದಿಕೆಯಿಂದ ಮೈಕಗಳನ್ನು ಎಳೆದುಕೊಂಡು ಹೋದರು.

ಮಹಿಳಾ ಭಾಗವತರು ಮೈಕ್ ಇಲ್ಲದೆಯೂ ಎದೆಗುಂದದೆ ಭಾಗವತಿಕೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಲೈಟ್ ಕೂಡಾ ಆಫ್ ಮಾಡಿದರು. ನೋವಾದರೂ ತೋರಿಸದ ಪತ್ರಕರ್ತರು ಧ್ವನಿವರ್ಧಕ, ಲೈಟ್ ಇಲ್ಲದೆಯೂ 20 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿ, ಮಂಗಲ ಹಾಡಿದರು.

Comments are closed.