ಕರಾವಳಿ

ಮಹಿಳೆಯರು ಕೂಡ ದೇವರ ಮಕ್ಕಳು. ಶಬರಿಮಲೆ ಪ್ರವೇಶಿಸಿದರೆ ಯಾವೂದೇ ತಪ್ಪಿಲ್ಲ : ಪೂಜಾರಿ

Pinterest LinkedIn Tumblr

ಮಂಗಳೂರು, ಜನವರಿ.08 ಮಹಿಳೆಯರು ಕೂಡ ದೇವರ ಮಕ್ಕಳು. ಹಾಗಾಗಿ ಮಹಿಳೆಯರು ಶಬರಿಮಲೆ ಪ್ರವೇಶಿಸಿದರೆ ಯಾವೂದೇ ತಪ್ಪಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಎಲ್ಲಾ ಮಹಿಳೆಯರಿಗೂ ಪ್ರವೇಶ ನೀಡಲು ಕೇರಳ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಮಂಗಳೂರಿನ ಶ್ರೀ ಗೋಕರ್ಣಾನಾಥ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯಪ್ಪ ಮಹಿಳೆಯರ ಪ್ರವೇಶ ಬೇಡ ಎನ್ನಲಿಲ್ಲ. ಎಲ್ಲಾ ಮಹಿಳೆಯರನ್ನು ಪ್ರವೇಶ ಮಾಡಿಸಿ ಇದರಿಂದ ದೇವರು ಮೆಚ್ಚುತ್ತಾನೆ. ವಿರೋಧಿಸುವವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.

ಈಗಾಗಲೇ ಶಬರಿಮಲೆಯಲ್ಲಿ ಮಹಿಳೆಯರು ಪ್ರವೇಶ ಮಾಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ.ಅವರು ಕೂಡ ದೇವರ ಮಕ್ಕಳಲ್ಲವೇ ? ಎಂದು ಪ್ರಶ್ನಿಸಿದ ಪೂಜಾರಿ ವಿರೋಧಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Comments are closed.