ಕರಾವಳಿ

ಕೂಳೂರು‌ ಸೇತುವೆ ಬಳಿ ಬೈಕ್ ಅಪಘಾತ : ನದಿಗೆ ಬಿದ್ದು ಬೈಕ್ ಸವಾರರಿಬ್ಬರು ಜಲಸಮಾಧಿ

Pinterest LinkedIn Tumblr

ಮಂಗಳೂರು, ನವೆಂಬರ್. 22: ಬೈಕ್ ನಲ್ಲಿ ಚಲಿಸುತ್ತಿದ್ದ ಸ್ನೇಹಿತರ ಬೈಕ್ ಗಳು ಪರಸ್ಪರ ಢಿಕ್ಕಿಯಾಗಿ ಒಂದು ಬೈಕ್ ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಬೈಕ್ ಸವಾರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ.

ಮೃತ ದುರ್ದೈವಿಗಳನ್ನು ಆಕಾಶ್ ಭವನ ನಿವಾಸಿ ನಿಖಿಲ್ (21) ಹಾಗೂ ಕುಳೂರಿನ ವಿಜೇಶ್ (22) ಎಂದು ಗುರುತಿಸಲಾಗಿದೆ.

ನಾಲ್ವರು ಯುವಕರು ಎರಡು ಬೈಕ್​ ಗಳಲ್ಲಿ ಕೂಳೂರು ಸೇತುವೆಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುವ ವೇಳೆ ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ನಿಯಂತ್ರಣ ತಪ್ಪಿದ ಒಂದು ಬೈಕ್​ ಇಬ್ಬರು ಯುವಕರ ಸಮೇತಾ ನೀರಿಗೆ ಬಿದ್ದಿದೆ. ಈ ವೇಳೆ ನೀರಿನಲ್ಲಿ ‌ಮುಳುಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯ ಮುಳುಗು ತಜ್ಞರು ಬೈಕ್ ಸವಾರರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.