ಪ್ರಮುಖ ವರದಿಗಳು

ಇಂದೋರಿನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ವಿವಾದಿತ ದೇವಮಾನವ ಭಯ್ಯೂಜೀ ಮಹಾರಾಜ್‌ ಆತ್ಮಹತ್ಯೆ

Pinterest LinkedIn Tumblr

ಇಂದೋರ್‌ : ವಿವಾದಾತ್ಮಕ ದೇವಮಾನವ ಮತ್ತು ಆಧ್ಯಾತ್ಮಿಕ ಸಲಹೆಗಾರ ಭಯ್ಯೂಜೀ ಮಹಾರಾಜ್‌ ಅವರು ಇಂದು ಮಂಗಳವಾರ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಭಯ್ಯೂಜೀ ಅವರನ್ನು ಒಡನೆಯೇ ಇಂದೋರ್‌ನ ಬಾಂಬೆ ಹಾಸ್ಪಿಟಲ್‌ ಗೆ ಒಯ್ಯಲಾಯಿತಾದರೂ ಅಲ್ಲಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಭಯ್ಯೂಜೀ ಅವರ ಮೂಲನಾಮ ಉದಯ್‌ ಸಿಂಗ್‌ ದೇಶ್‌ಮುಖ್‌. ಇಂದು ಮಂಗಳವಾರ ಮಧ್ಯಾಹ 1.57ರ ಸುಮಾರಿಗೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಅವರು ಈ ಕೆಳಗಿನ ಟ್ವೀಟ್‌ ಮಾಡಿದ್ದರು.

ಹಲವು ರಾಜಕಾರಣಿಗಳ ಆಧ್ಯಾತ್ಮಿಕ ಸಲಹೆಗಾರರಾಗಿದ್ದ ಭಯ್ಯೂಜೀ ಅವರು ಈಚೆಗೆ ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಮತ್ತು ಅಸಂತುಷ್ಟಿ ಅನುಭವಿಸುತ್ತಿದ್ದರು ಎನ್ನಲಾಗಿದೆ.

ರಾಜ್ಯ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಈಚೆಗೆ ಭಯ್ಯೂಜೀ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದರು; ಆದರೆ ಅವರದನ್ನು ತಿರಸ್ಕರಿಸಿದ್ದರು.

Comments are closed.