ರಾಷ್ಟ್ರೀಯ

ಕೋಕಾಕೋಲ, ಮೆಕ್​ ಡೊನಾಲ್ಡ್ ಸ್ಥಾಪಿಸಿದ್ದು ಯಾರು ಗೊತ್ತಾ? ರಾಹುಲ್ ಗಾಂಧಿಯ ಉತ್ತರ ಇಲ್ಲಿದೆ ನೋಡಿ….!

Pinterest LinkedIn Tumblr

ದೆಹಲಿ: “ಇಂದಿನ ಬಹುರಾಷ್ಟ್ರೀಯ ಪಾನೀಯ ಕಂಪನಿ ಕೋಕಾ ಕೋಲಾದ ಸಂಸ್ಥಾಪಕ ಯಾರು ಗೊತ್ತೆ? ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲಿ ಶಿಕಂಜಿ (ನಿಂಬೆ ರಸ) ಮಾರುತ್ತಿದ್ದವ,”…

ಸದಾವಕಾಶಗಳು ಮತ್ತು ಯಶಸ್ಸಿನ ಕುರಿತು ಜನರಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ನೀಡಿರುವ ಉಪಮೆಯೊಂದು ಆಸಕ್ತಿದಾಯಕವಾಗಿದೆ. ದೆಹಲಿಯಲ್ಲಿ ನಡೆದ ಹಿಂದುಳಿದ ವರ್ಗಗಳ ರ‍್ಯಾಲಿಯೊಂದರಲ್ಲಿ ರಾಹುಲ್​ ಗಾಂಧಿ ಅವರು ಈ ಆಂಶವನ್ನು ಹೇಳಿದ್ದಾರೆ.

ರಾಹುಲ್​ ಗಾಂಧಿ ಮಾತನಾಡಿ, ” ಇಲ್ಲಿ ಸೇರಿರುವ ಎಲ್ಲರಿಗೂ ಕೋಕಾ-ಕೋಲಾ ಗೊತ್ತಲ್ಲವೇ? ಹಾಗಾದರೆ ಅದರ ಸಂಸ್ಥಾಪಕ ಯಾರೂ ಹೇಳಿ ನೋಡೋಣ. ಯಾರಾತ? ಇಲ್ಲಿ ಸೇರಿರುವ ಯಾರಿಗಾದರೂ ಗೊತ್ತೆ,” ಎಂದು ಪ್ರಶ್ನಿಸಿರುವ ರಾಹುಲ್​ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ. ಕೋಕಾ ಕೋಲಾ ಸಂಸ್ಥಾಪಕ ಅಮೆರಿಕದಲ್ಲಿ ನಿಂಬೆ ರಸ ಮಾರುವವನಾಗಿದ್ದ. ಆತನ ಅನುಭವ, ಸಾಮರ್ಥ್ಯವನ್ನು ಅಲ್ಲಿ ಗೌರವಿಸಲಾಯಿತು. ಹಾಗಾಗಿಯೇ ಆತ ಕೋಕಾ ಕೋಲಾ ಎಂಬ ಸಂಸ್ಥೆಯನ್ನು ಆವಿಷ್ಕರಿಸಲು ಸಾಧ್ಯವಾಯಿತು ಎಂದರು.

ಮುಂದುವರಿದು ಮೆಕ್​ ಡೊನಾಲ್ಡ್​ ಕಂಪನಿ ಮಾಲೀಕನ ಕುರಿತು ಹೇಳಿರುವ ರಾಹುಲ್​, ” ರಸ್ತೆ ಬದಿಯಲ್ಲಿ ಡಾಬಾ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಮುಂದೊಂದು ದಿನ ಮೆಕ್​ ಡೊನಾಲ್ಡ್​ ಹಾಕಿದ,” ಎಂದಿದ್ದಾರೆ.

ಭಾರತದಲ್ಲಿ ಹೀಗೆ ದೊಡ್ಡ ಸಂಸ್ಥೆಗಳನ್ನು ಸ್ಥಾಪಿಸಿದವರ ಕುರಿತು ಒಂದೇ ಒಂದು ಉದಾಹರಣೆ ನೀಡಲು ಸಾಧ್ಯವೇ ಎಂದೂ ಅವರು ಸವಾಲೆಸೆದಿದ್ದಾರೆ.

Comments are closed.