ಕರಾವಳಿ

ಅಹಿತಕರ ಘಟನೆ ಹಿನ್ನೆಲೆ :ಮಂಗಳೂರು ಕಾರಾಗೃಹಕ್ಕೆ ಪೊಲೀಸರ ದಿಢೀರ್‌ ದಾಳಿ – ಪರಿಶೀಲನೆ

Pinterest LinkedIn Tumblr

ಮಂಗಳೂರು: ಮಂಗಳೂರು ಜೈಲಿನಲ್ಲಿರುವ ಕೈದಿಗಳು ಗಾಂಜಾ, ಮೊಬೈಲ್ ಬಳಸುತ್ತಿರುವ ಬಗ್ಗೆ ಪದೇ ಪದೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಶನಿವಾರ ಮಂಗಳೂರು ಜೈಲಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಮಂಗಳೂರು ಡಿಸಿಪಿ ಹನುಮಂತರಾಯ್ ಮತ್ತು ಉಮಾಪ್ರಶಾಂತ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಕಳೆದ ಹಲವು ದಿನಗಳಿಂದ ಮಂಗಳೂರು ಜೈಲಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ದಾಳಿಯಲ್ಲಿ 50 ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು.

ಪೊಲೀಸರ ದಾಳಿಯ ವೇಳೆ ಮಂಗಳೂರು ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಸಿಗರೇಟ್, ಬೀಡಿ, ತಂಬಾಕು, ಲೈಟರ್, ಕಟ್ಟರ್, ಗಾಂಜಾ ಪ್ಯಾಕೇಟ್, ಸಿಮ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ದಾಳಿಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಬರ್ಕೆ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

Comments are closed.