ಕ್ರೀಡೆ

ಕೆಕೆಆರ್‌ ವಿರುದ್ಧ ಸುಲಭದ ಗೆಲುವು ಸಾಧಿಸಿದ ಸನ್‌ರೈಸರ್ಸ್‌

Pinterest LinkedIn Tumblr

ಕೋಲ್ಕತ್ತ: ಸನ್‌ರೈಸರ್ಸ್ ಹೈದರಾಬಾದ್ ತಂಡ ಶನಿವಾರದ ಎರಡನೇ ಪಂದ್ಯದಲ್ಲಿ ಐದು ವಿಕೆಟ್‌ ಗಳಿಂದ ಗೆದ್ದಿತು.

 ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 139 ರನ್‌ಗಳ ಸವಾಲನ್ನು ಪಡೆದ ಸನ್‌ರೈಸರ್ಸ್‌ ಹೈದರಾಬಾದ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 139 ರನ್ ಗಳಿಸಿತು.

ನಾಯಕ ಕೇನ್ ವಿಲಿಯಮ್ಸ್ 50 ರನ್, ಶಾಕೀಬ್ ಅಲ್ ಹಸನ್ 27 ರನ್, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 24 ರನ್ ಗಳಿಸಿದರು.

 ದೀಪಕ್ ಹೂಡಾ ಔಟಾಗದೆ 5ರನ್, ಮತ್ತು ಯೂಸುಫ್ ಪಠಾಣ್ ಔಟಾಗದೆ 17 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ಕೋಲ್ಕತಾ ನೈಟ್ ರೈಡರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಕೋಲ್ಕತ್ತ ನೈಟ್ ರೈಡರ್ಸ್‌: 20 ಓವರ್‌ಗಳಲ್ಲಿ 8ಕ್ಕೆ 138 (ಕ್ರಿಸ್ ಲಿನ್‌ 49, ಕಾರ್ತಿಕ್‌ 29; ಭುವನೇಶ್ವರ್‌ ಕುಮಾರ್‌ 26ಕ್ಕೆ3, ಸ್ಟಾನ್‌ಲೇಕ್ 21ಕ್ಕೆ2, ಶಕೀಬ್‌ ಅಲ್ ಹಸನ್‌ 21ಕ್ಕೆ2); ಸನ್‌ರೈಸರ್ಸ್ ಹೈದರಾಬಾದ್‌: 19 ಓವರ್‌ಗಳಲ್ಲಿ 5ಕ್ಕೆ 139 (ವಿಲಿಯಮ್ಸ್‌ 50, ಶಕೀಬ್‌ 27). ಫಲಿತಾಂಶ: ಸನ್‌ರೈಸರ್ಸ್‌ಗೆ 5 ವಿಕೆಟ್ ಜಯ.

Comments are closed.