ಕರಾವಳಿ

ಮಂಗಳೂರಿನಲ್ಲಿ ಮಸಾಜ್ ಸೆಂಟರ್‌‌ಗೆ ದಾಳಿ : ವೇಶ್ಯಾವಾಟಿಕೆ ಆರೋಪದಲ್ಲಿ 11 ಮಂದಿಯ ಬಂಧನ

Pinterest LinkedIn Tumblr

ಮಂಗಳೂರು: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ ಮಸಾಜ್ ಸೆಂಟರ್‌ವೊಂದರ ಮೇಲೆ ಸಿಸಿಬಿ ಪೊಲೀಸರು ಹಾಗೂ ಬಂದರು ಠಾಣೆಯ ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ.

ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಆರ್ಯುವೇದಿಕ್ ಥೆರಾಪಿ ಕ್ಲಿನಿಕ್ ಎಂಬ ಹೆಸರಿನ ಮಸಾಜ್ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ 11 ಮಂದಿಯನ್ನು ಬಂಧಿಸಿದ್ದಾರೆ.

ಬಂಟ್ವಾಳ ಫರಂಗಿಪೇಟೆಯ ಹರೀಶ್ ಶೆಟ್ಟಿ, ಕೇರಳ ಕಣ್ಣೂರಿನ ಸಿ.ಕೆ.ಪಟ್ಟಕಂಡಿ, ಕಣ್ಣೂರು ಕಾಟಿಮಳ್ಳಿಯ ರವೂದ್ ಎಂ.ಕೆ., ಕೇರಳ ನೆಲ್ಲಾಯನ ಸದಖತುಲ್ಲಾ (31), ಮಂಜನಾಡಿಯ ಅಬ್ದುಲ್ ರಹ್ಮಾನ್(37), ಕಣ್ಣೂರಿನ ಸಚೀಂದ್ರ ಎಂ.(43), ಕಣ್ಣೂರಿನ ದಿತಿನ್ ದಾಸ್ (25), ಕಣ್ಣೂರಿನ ಶಿಬೂಕೆ, ಕಣ್ಣೂರು ಕಾಳಿಪುರದ ಅನಸ್, ಪಾಲಕ್ಕಾಡ್ ಮಲಪ್ಪುರಂನ ರಾಜೇಶ್, ಕಣ್ಣೂರು ಚೆರಪಾರಸಿಯ ಸಿಯಾದ್ ಟಿ.ವಿ.(36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 53,400/- ರೂಪಾಯಿ ನಗದು ಹಾಗೂ 13 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಮಸಾಜ್ ಪಾರ್ಲರ್‌ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೇಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಶಾಂತರಾಮ, ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಹಾಗೂ ಸಿಸಿಬಿ ಘಟಕದ ಪಿಎಸ್‌ಐ ಎಚ್.ಡಿ.ಕಬ್ಬಾಳ್ ರಾಜ್ ಹಾಗೂ ಬಂದರು ಠಾಣೆಯ ಪಿಎಸ್‌ಐ ಪ್ರದೀಪ್ ಟಿ.ಆರ್. ಹಾಗೂ ಸಿಸಿಬಿ ಘಟಕದ ಮತ್ತು ಬಂದರು ಠಾಣೆ ಸಿಬ್ಬಂದಿ ಭಾಗವಹಿಸಿದ್ದರು.

Comments are closed.