ಕರಾವಳಿ

ಭೋಜನ ಸಂಪೂರ್ಣವಾಗಲು ಇದು ಬೇಕು, ಅದರೆ ಇದನ್ನ ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ಹಾನಿ

Pinterest LinkedIn Tumblr

 ನಮ್ಮ ಭಾರತೀಯರು ಅಲ್ಲದೆ ವಿದೇಶದ ಪ್ರಜೆಗಳಿಗೂ ಸಹ  ಉಪ್ಪಿನ ಕಾಯಿ ಅಂದ್ರೆ ಸಾಕು ಬಾಯಲ್ಲಿ ನೀರೂರಿ ಬರುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನಕಾಯಿ ಇರಲೇ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ತುಂಬಾ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನಕಾಯಿ ಇಲ್ಲ ಅಂದ್ರೆ ಅ ಭೋಜನ ಸಂಪೂರ್ಣ ಆಗಲ್ಲ ಎನ್ನಿಸುತ್ತದೆ. ಅಷ್ಟರ ಮಟ್ಟಿಗೆ ಉಪ್ಪಿನಕಾಯಿ ಜನಪ್ರಿಯವಾಗಿದೆ./

ಉಪ್ಪಿನಕಾಯಿಯಲ್ಲಿ ಹಲವು ಬಗೆಗಳಿವೆ: ಮಾವಿನಕಾಯಿ, ಶುಂಠಿ, ನೆಲ್ಲಿಕಾಯಿ, ನಿಂಬೆಕಾಯಿ, ಎರಳಿಕಾಯಿ, ಬೆಳ್ಳುಳ್ಳಿ, ಹಾಗಲಕಾಯಿ, ಟೊಮೊಟೊ, ಮುಂತಾದವುಗಳಿಂದ ತಯಾರಿಸುವ ಉಪ್ಪಿನಕಾಯಿ ರುಚಿ ಅನುಭವಿಸಿದವರಿಗಷ್ಟೆ ತಿಳಿಯುತ್ತದೆ. ಯಾವುದೇ ಉಪ್ಪಿನಕಾಯಿ ತಿಂದರೂ ಪರವಾಗಿಲ್ಲ. ಆದರೆ ಹಿತಮಿತವಾಗಿರಬೇಕು. ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ಹಾನಿಯುಂಟಾಗಲಿದೆ.

ಭಾರತೀಯರು ಉಪ್ಪಿನಕಾಯಿ ಪ್ರಿಯರು: ದೇಶದ ಎಲ್ಲಾ ಭಾಗಗಳಲ್ಲೂ ಬಗೆಬಗೆಯ ಉಪ್ಪಿನಕಾಯಿಗಳು ಬಳಕೆಯಲ್ಲಿವೆ. ಅವರವರ ರುಚಿಗೆ ತಕ್ಕಂತೆ ತಯಾರಾಗುತ್ತವೆ. ಊಟಕ್ಕೆ ಮಾತ್ರ ಉಪ್ಪಿನಕಾಯಿ ಬಳಸುವುದಷ್ಟೆ ಅಲ್ಲ. ಯಾವುದೇ ತಿಂಡಿ ಜತೆಯಲ್ಲೂ ಬಳಸಬಹುದಾಗಿದೆ. ಇಡ್ಲಿ, ರೊಟ್ಟಿ, ದೋಸೆ, ಮುಂತಾದ ತಿಂಡಿಗಳ ಜತೆಯಲ್ಲೂ ತಿನ್ನಬಹುದು. ಎಷ್ಟೋ ಬಾರಿ ಚಟ್ನಿ ಬದಲಿಗೆ ಉಪ್ಪಿನಕಾಯಿ ತಿಂದರೆ ಒಳ್ಳೆಯದು. ಅದಕ್ಕಿಂತ ಹೆಚ್ಚು ತಿಂದರೆ ಅನಾಹುತಗಳಿಗೆ ಆಹ್ವಾನ ನೀಡಿದಂತೆಯೇ.

ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಉಪ್ಪು, ಮಸಾಲೆಗಳಿರುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಅದು ಬಹಳ ದಿನ ಕೆಡದಂತಿರಲು ಹೆಚ್ಚಿನ ಪ್ರಮಣದಲ್ಲಿ ಎಣ್ಣೆ ಬಳಸುವುದುಂಟು. ಉಪ್ಪಿನಕಾಯಿ ಹೋಳುಗಳು ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಪರಿಸ್ಥಿತಿ ಹೀಗಿರುವಾಗ ನಾವೇನಾದರೂ ಅತಿಯಾಗಿ ಉಪ್ಪಿನಕಾಯಿ ಸೇವಿಸಿದರೆ, ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶವೂ ಅಧಿಕವಾಗಿರುತ್ತದೆ. ಇದೂ ಕೂಡ ಹೃದಯದೊತ್ತಡಕ್ಕೆ ಕಾರಣವಾಗುತ್ತದೆ.

ಹೆಚ್ಚು ಉಪ್ಪು ದೇಹಕ್ಕೆ ಸೇರಿದಲ್ಲಿ ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಆಸ್ಪದವಾಗಿ ಹಲವು ತೊಂದರೆಗಳಿಗೀಡು ಮಾಡುತ್ತದೆ. ಹೃದಯ ಸಂಬಂಧಿ ಖಾಯಿಲೆ ಗಳಿದ್ದವರು, ಉಪ್ಪಿನಕಾಯಿ ಸೇವನೆ ಕುರಿತು ಎಚ್ಚರದಿಂದಿರಬೇಕು. ಹೃದಯದ ಒತ್ತಡದ ಸಮಸ್ಯೆಗಳಿರುವವರು ಇದರ ಬಳಕೆಯಿಂದ ದೂರ ಉಳಿದರೂ ಒಳ್ಳೆಯ ದಾಗುತ್ತದೆ. ಉಪ್ಪಿನಕಾಯಿಯಲ್ಲಿರುವ ಸೋಡಿಯಂ ಲವಣ, ಹೊಟ್ಟೆಯುಬ್ಬರಿಕೆಗೂ ದಾರಿ ಮಾಡಿಕೊಡುತ್ತದೆ. ಈ ಲವಣಾಂಶದಿಂದ ಹೊಟ್ಟೆಯಲ್ಲಿ ನೀರು ಉಳಿದು ಕೊಳ್ಳಲು ಸಾಧ್ಯವಾಗಿ ಕೆಲವು ಆಮ್ಲೀಯ ವಾಯುಗಳು ಉತ್ಪತ್ತಿಯಾಗುತ್ತವೆ.

ಉಪ್ಪಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮೂತ್ರಪಿಂಡಗಳ ಕಾರ್ಯದ ಮೇಲೂ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಉಪ್ಪಿನ ಕಾಯಿಯಲ್ಲಿರುವ ಕೆಲವು ಲವಣಗಳು ಮೂತ್ರಪಿಂಡಗಳ ಕೆಲಸ ಹೆಚ್ಚುವಂತೆ ಮಾಡುವುದರಿಂದ ಅಡ್ಡ ಪರಿಣಾಮಗಳಾಗುತ್ತವೆ. ಆದ್ದರಿಂದ ಉಪ್ಪಿನಕಾಯಿಯನ್ನು ಮಿತವಾಗಿ ಸೇವಿಸಿ, ಆರೋಗ್ಯದ ಸುಧಾರಣೆಗೆ ಗಮನ ಹರಿಸಿ. ಊಟಕ್ಕೆ ತಕ್ಕ ಉಪ್ಪಿನಕಾಯಿಯಷ್ಟೆ ಇರಲಿ. ಹಾಗಿದ್ದಾಗ ಊಟದ ರುಚಿ, ದೈಹಿಕ ಆರೋಗ್ಯವೂ ಚೆಂದವಾಗಿರುತ್ತದೆ.

Comments are closed.