ಕರಾವಳಿ

ಮಂಗಳೂರು : ಶತಾಯುಷಿ ತಾಯಿಯ ಹುಟ್ಟುಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲೇ ಮಗಳು ಮೃತ್ಯು

Pinterest LinkedIn Tumblr

ಮಂಗಳೂರು, ಎಪ್ರಿಲ್. 2: ತಾಯಿಯ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಮಗಳು ಮೃತಪಟ್ಟಿರುವ ಮನಮಿಡಿ ಯುವ ಘಟನೆಯೊಂದು ಸೋಮವಾರ ಮಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗ್ಲೋರಿಯಾ ಲೋಬೊ (75) ಎಂದು ಹೆಸರಿಸಲಾಗಿದೆ.

ಅವರು ತನ್ನ ತಾಯಿ ಗ್ಲಾಡಿಸ್ ಡಿಸೋಜಾ ಅವರ 100ನೇ ವರ್ಷದ ಹುಟ್ಟ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಗ್ಲೋರಿಯಾ ಅವರ ಮಗಳು, ಸಹೋದರ ಮತ್ತು ಸಂಬಂಧಿಕರು ಹಾಜರಿದ್ದರು.

ತಾಯಿಯ ಹುಟ್ಟು ಹಬ್ಬಕ್ಕಾಗಿ ತಯಾರಿಸಲಾಗಿದ್ದ ಕೇಕ್‌ನ್ನು ಕತ್ತರಿಸಿ ತಾಯಿಯ ಪರವಾಗಿ ನುಡಿಗಳನ್ನು ಆಡುತ್ತಿದ್ದಾಗ ಗ್ಲೋರಿಯಾ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಗ್ಲೋರಿಯಾ ಅವರು ತಾಯಿಯ ಹುಟ್ಟು ಹಬ್ಬ ಆಚರಿಸಲೆಂದೇ ಕೆನಡಾದಿಂದ ಕೆಲವು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು.

Comments are closed.