ಕರ್ನಾಟಕ

ಸಿಎಂ ಸಿದ್ದರಾಮಯ್ಯ ಡ್ಯಾನ್ಸ್ ವೈರಲ್ ! ಅಸಲಿಯತ್ತು ಬಹಿರಂಗ …

Pinterest LinkedIn Tumblr

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಹಾಡಿಗೆ ಸಿಎಂ ಸಿದ್ದರಾಮಯ್ಯ ಡಾನ್ಸ್ ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

ಆದರೆ ಈ ವಿಡಿಯೋದಲ್ಲಿ ನಿಜವಾಗಿ ಸಿಎಂ ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಲ್ಲ. ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯನವರನ್ನು ಹೋಲುವ ವ್ಯಕ್ತಿಯೊಬ್ಬರು ಈ ರೀತಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ವಿಚಾರವನ್ನು ತಿಳಿಯದ ಜನ ಸಿದ್ದರಾಮಯ್ಯನವರೇ ಡ್ಯಾನ್ಸ್ ಮಾಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಅಣೆಕಟ್ಟೆ ವಿಶ್ವನಾಥ್ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

“ಬಿಜೆಪಿ ಭಕ್ತರು ಹಸಿ ಸುಳ್ಳಿಗೆ ಇದೊಂದು ಸ್ಪಷ್ಟ ಉದಾಹರಣೆ, ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ರೈತರೊಬ್ಬರು ನೃತ್ಯ ಮಾಡಿದ್ದರು. ಅದನ್ನು ನಾನು ಲೈವ್ ಮಾಡಿದ್ದೆ. ಇದನ್ನು ಕದ್ದು ಶಿರಸಿಯ ಅನಂತರ ಭಕ್ತರು ತಮ್ಮ ಪೇಜ್ ನಲ್ಲಿ ಸಿದ್ದರಾಮಯ್ಯನವರು ನೃತ್ಯ ಮಾಡಿದ್ದಾರೆ ಎಂದು ಅಪ ಪ್ರಚಾರ ಮಾಡಿದ್ದಾರೆ. ಆ ರೈತರ ಜೀವನೋತ್ಸಾಹ ನೋಡಿ ನಾನು ಇದಕ್ಕೆ ಕುಣಿದಿದ್ದೆ. ಬಿಜೆಪಿ ಅಂದರೆ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಬರೆದು ಕೊಂಡಿದ್ದಾರೆ.

Comments are closed.