ಗಲ್ಫ್

ಮಧುಮೇಹ, ಬಿಪಿ, ಕ್ಯಾನ್ಸರ್ ಇದ್ದರೆ ಇನ್ನು ಕುವೈತ್‌ನಲ್ಲಿ ಕೆಲಸವಿಲ್ಲ !

Pinterest LinkedIn Tumblr

ಕುವೈತ್: ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಇತರ ಹಲವಾರು ಸೋಂಕೇತರ ಕಾಯಿಲೆಗಳಿಂದ ಬಳಲುತ್ತಿರುವ ವಿದೇಶೀಯರಿಗೆ ಇನ್ನು ಮುಂದೆ ವಾಸ್ತವ್ಯ ಪರ್ಮಿಟ್‌ಗಳನ್ನು ನೀಡುವುದನ್ನು ಕುವೈತ್ ನಿಷೇಧಿಸಿದೆ.

ವಿದೇಶೀಯರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ನೂತನ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ‘ಅಲ್ ವತನ್’ ಅರೇಬಿಕ್ ದೈನಿಕ ವರದಿ ಮಾಡಿದೆ.

ಕುವೈತ್‌ನ ಆರೋಗ್ಯ ಸಚಿವಾಲಯವು 22 ಕಾಯಿಲೆಗಳ ಪಟ್ಟಿಯೊಂದನ್ನು ಪ್ರಕಟಿಸಿದ್ದು, ಈ ರೋಗಗಳಿರುವವರು ಕುವೈತ್‌ನಲ್ಲಿ ವಾಸ್ತವ್ಯ ಪರ್ಮಿಟ್‌ಗೆ ಅರ್ಜಿ ಹಾಕುವಂತಿಲ್ಲ.

ಕಿಡ್ನಿ ವೈಫಲ್ಯ, ಮೂತ್ರನಾಳ ವೈಫಲ್ಯ, ದೃಷ್ಟಿ ದೋಷ ಹಾಗೂ ಇತರ ಹಲವಾರು ಕಾಯಿಲೆಗಳು ನಿಷೇಧಿತ ರೋಗಗಳ ಪಟ್ಟಿಯಲ್ಲಿವೆ.

ಕುವೈತ್‌ಗೆ ಕೆಲಸಕ್ಕೆ ಬರುವ ವಿದೇಶೀಯರು ದೈಹಿಕ ಕ್ಷಮತೆ ಹೊಂದಿರುವುದನ್ನು ಖಾತರಿಪಡಿಸಲು ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವಾಲಯದಲ್ಲಿ ಸಾಮಾನ್ಯ ಆರೋಗ್ಯ ವ್ಯವಹಾರಗಳ ಸಹಾಯಕ ಅಧೀನ ಕಾರ್ಯದರ್ಶಿ ಮಜೀದಾ ಅಲ್ ಕತ್ತನ್ ಹೇಳಿದರು.

Comments are closed.