ಮನೋರಂಜನೆ

ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದ ಹುಚ್ಚು ಅಭಿಮಾನಿ ಬಗ್ಗೆ ಶಾರೂಕ್ ಖಾನ್ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ತನ್ನ ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ್ದ ಅಭಿಮಾನಿಯೊಬ್ಬನ ಹುಚ್ಚಿನ ಕಥೆಯನ್ನು ತಿಳಿಸಿದ್ದಾರೆ.

ನನ್ನ ಬದುಕಿನಲ್ಲಿ ಎಲ್ಲ ರೀತಿಯ ಅಭಿಮಾನಿಯನ್ನು ನೋಡಿದ್ದೇನೆ. ಆದರೆ ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬ ನೇರವಾಗಿ ನನ್ನ ಮನ್ನತ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದಿದ್ದ. ಆಟೋಗ್ರಾಫ್, ಫೋಟೋಗ್ರಾಫ್ ಪಡೆಯದೇ ಬಟ್ಟೆ ಬಿಚ್ಚಿ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದಿದ್ದು ಯಾಕೆ ಎಂದು ಕೇಳಿದ್ದಕ್ಕೆ ಶಾರೂಕ್ ಸ್ನಾನ ಮಾಡಿದ್ದ ನೀರಿನಲ್ಲಿ ಸ್ನಾನ ಮಾಡಬೇಕೆಂದು ನಾನು ಬಯಸಿದ್ದೆ. ಹೀಗಾಗಿ ನಾನು ಪೂಲ್‍ನಲ್ಲಿ ಬಿದ್ದೆ ಎಂದು ಉತ್ತರಿಸಿದ್ದ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾರೆ.

ಆ ವ್ಯಕ್ತಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೀಳುತ್ತಿದ್ದ ಹಾಗೇ ಸೆಕ್ಯೂರಿಟಿ ಪ್ರಶ್ನಿಸಿದ್ದಾಗ ಆತನ ಉತ್ತರ ಕೇಳಿ ಸ್ವತಃ ನನಗೆ ಶಾಕ್ ಆಯ್ತು ಎಂದು ಹುಚ್ಚು ಅಭಿಮಾನಿಯ ಕಥೆಯನ್ನು ಕಿಂಗ್ ಖಾನ್ ಬಿಚ್ಚಿಟ್ಟರು.

Comments are closed.