ಟೆಹರಾನ್: ಟರ್ಕಿಯ ಖಾಸಗಿ ಪ್ರಯಾಣಿಕ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದ್ದು, ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಟರ್ಕಿಯ ಬಂಬಾರ್ಡಿಯರ್ ಸಿಎಲ್604 ಎಂಬ ವಿಮಾನ ಇರಾನ್ ನ ಶಹರ್-ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ಪತನವಾಗಿದ್ದು, ಸ್ಥಳೀಯರು ನೀಡಿರುವ ಮಾಹಿತಿ.ಯಂತೆ ವಿಮಾನಕ್ಕೆ ಆಗಸದಲ್ಲೇ ಬೆಂಕಿ ಹೊತ್ತಿಕೊಂಡಿತ್ತು. ಭೂಮಿಗೆ ಅಪ್ಪಳಿಸುತ್ತಲೇ ವಿಮಾನ ಸ್ಫೋಟವಾಯಿತು ಎಂದು ಹೇಳಿದ್ದಾರೆ. ಅಧಿಕಾರಿಗಳು ತಿಳಿಸಿರುವತೆ ಬಂಬಾರ್ಡಿಯರ್ ಸಿಎಲ್604 ವಿಮಾನ ಶಾರ್ಜಾದಿಂದ ಇಸ್ತಾನ್ ಬುಲ್ ಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಇಸ್ತಾನ್‌ಬುಲ್‌ಗೆ ತೆರಳುತ್ತಿದ್ದ ವಿಮಾನ ಮಿರೇಟ್ಸ್‌ನ ಶಾರ್ಜಾದಿಂದ ಹೊರಟು 400 ಕಿಮೀ ದೂರದ ದಕ್ಷಿಣ ಟೆಹರಾನ್‌ನ ಶಹರ್-ಇ ಕಾರ್ಡ್ ನಗರದಲ್ಲಿ ಪತನಗೊಂಡಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.