ಪ್ರಮುಖ ವರದಿಗಳು

ನೋಟ್ ಬ್ಯಾನ್‍…ಸಂಜೆ ಮೋದಿ ಮಾಡುವ ಭಾಷಣದ ಮೇಲೆ ಜನರಿಗಿರುವ ನಿರೀಕ್ಷೆ ಏನು ಗೊತ್ತಾ..?

Pinterest LinkedIn Tumblr

modi

ನವದೆಹಲಿ: ನೋಟ್ ಬ್ಯಾನ್‍ನಿಂದಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿ ಮೋದಿ ಕೇಳಿದ್ದ ಡೆಡ್‍ಲೈನ್ ಡಿಸೆಂಬರ್ 30ಕ್ಕೆ ಮುಗಿದಿದೆ. ಈ ಸಂಬಂಧ ಇಂದು ಸಂಜೆ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನೋಟ್ ನಿಷೇಧದಿಂದ ಉಂಟಾದ ಪರಿಣಾಮಗಳು, ಭವಿಷ್ಯದ ಯೋಜನೆಗಳು, ನಷ್ಟ ಏನಾಗಿದೆ, ಲಾಭ ಎಷ್ಟಾಗಿದೆ?, ಭ್ರಷ್ಟರ ವಿರುದ್ಧ ಹೇಗೆ ಸಮರ ಮುಂದುವರೆಸಲಾಗುತ್ತೆ ಎಂಬ ಬಗ್ಗೆ ಮೋದಿ ದೇಶಕ್ಕೆ ತಿಳಿಸುತ್ತಾರೆ. ಈ ವೇಳೆ ದೇಶದ ಜನರಿಗೆ ಮೋದಿ ಹೊಸ ವರ್ಷಕ್ಕೆ ಭಾರೀ ಗಿಫ್ಟ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಜನರಿಗೂ ಒಂದಿಷ್ಟು ನಿರೀಕ್ಷೆಗಳು, ಊಹೆಗಳು ಇವೆ.

ಜನರ ನಿರೀಕ್ಷೆಗಳು ಮತ್ತು ಊಹೆಗಳು:
* 2000 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮತ್ತೆ ಹೊಸದಾಗಿ ಸಾವಿರ ರೂ. ನೋಟು ರಿಲೀಸ್ ಆಗುತ್ತಾ ಅನ್ನೋ ಊಹೆ ಇದೆ.
* ಸದ್ಯ ಚಲಾವಣೆಯಲ್ಲಿರುವ 10, 20 ಹಾಗೂ 50 ರೂ. ಕಾಗದದ ನೋಟು ಬದಲಿಗೆ ಪ್ಲಾಸ್ಟಿಕ್ ಕರೆನ್ಸಿ ಬರಲಿದೆಯಾ?
* ಜನರ ಸಮಸ್ಯೆ ನೀಗಿಸಲು ಹೆಚ್ಚು ಹೆಚ್ಚು ಹೊಸ ನೋಟುಗಳ ಚಲಾವಣೆ ಬಿಡುವಂತೆ ಸೂಚನೆ ನೀಡುತ್ತಾರೆ ಅನ್ನೋ ನಿರೀಕ್ಷೆ.
* ಬರದ ನಡುವೆ ಸಾಲದ ಸುಳಿಯಲ್ಲಿ ಸಿಕ್ಕಿರುವ ಅನ್ನದಾತರ ಸಂಪೂರ್ಣ ಸಾಲ ಮನ್ನಾ?
* `ಜೀರೋ’ ಬ್ಯಾಲೆನ್ಸ್ ನ ಜನ್‍ಧನ್ ಖಾತೆಗಳಿಗೆ ಕೇಂದ್ರದಿಂದ 10 ಸಾವಿರ ರೂಪಾಯಿ ಗಿಫ್ಟ್ ಸಿಗಲಿದೆಯಾ ಎಂಬ ನಿರೀಕ್ಷೆ.
* ಬೇನಾಮಿ ಆಸ್ತಿದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಂಬಂಧ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇವೆ.

Comments are closed.