ರಾಷ್ಟ್ರೀಯ

ಭುಗಿಲೆದ್ದ ತಂದೆ– ಮಗನ ನಡುವಿನ ರಾಜಕೀಯ ಜಟಾಪಟಿ; ಸಮಾಜವಾದಿ ಪಕ್ಷದಿಂದ ಅಖಿಲೇಶ್‌ ಯಾದವರನ್ನು ಉಚ್ಛಾಟಿಸಿದ ಮುಲಾಯಂ ಸಿಂಗ್‌ ಯಾದವ್‌

Pinterest LinkedIn Tumblr

akhilesh-yadav

ಲಖನೌ: ಸಮಾಜವಾದಿ ಪಕ್ಷದಲ್ಲಿ ತಂದೆ– ಮಗನ ನಡುವಿನ ರಾಜಕೀಯ ಜಟಾಪಟಿ ಹೆಚ್ಚಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ಯಾದವ್‌ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್‌ಯಾದವ್‌ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಪಕ್ಷದಲ್ಲಿ ಅಶಿಸ್ತು ತೋರಿದ ಕಾರಣದಿಂದ ಅಖಿಲೇಶ್‌ಯಾದವ್‌ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್‌ಯಾದವ್‌ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಹೊರಗಿಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುಲಾಯಂ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಆದರೆ, ಅಖಿಲೇಶ್‌ಯಾದವ್‌ಅವರು ಗುರುವಾರ 235 ಮಂದಿ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಇದರಿಂದ ಅಸಮಾಧಾನಗೊಂಡಿರುವ ಮುಲಾಯಂ ಅವರು ಅಖಿಲೇಶ್‌ಮತ್ತು ರಾಮಗೋಪಾಲ್‌ಅವರನ್ನು ಪಕ್ಷದಿಂದ ಹೊರಗಿಡುವ ನಿರ್ಧಾರ ಕೈಗೊಂಡಿದ್ದಾರೆ.

‘ಅಖಿಲೇಶ್‌ಯಾದವ್‌ಗೆ ಇದೆಲ್ಲಾ ಅರ್ಥವಾಗುವುದಿಲ್ಲ. ರಾಮಗೋಪಾಲ್‌ಅಖಿಲೇಶ್‌ನನ್ನು ಕುಗ್ಗಿಸಲು ಯತ್ನಿಸುತ್ತಿದ್ದಾನೆ’ ಎಂದು ಮುಲಾಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಪಕ್ಷವನ್ನು ಉಳಿಸುವ ಉದ್ದೇಶದಿಂದ ಅಖಿಲೇಶ್‌ಮತ್ತು ರಾಮಗೋಪಾಲ್‌ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ’ ಎಂದು ಮುಲಾಯಂ ಹೇಳಿದ್ದಾರೆ.

‘ಒಂದು ವೇಳೆ ಅಖಿಲೇಶ್‌ಕ್ಷಮೆ ಕೇಳಿದರೆ ನಿಮ್ಮ ನಿರ್ಧಾರ ಬದಲಾಗಲಿದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಲಾಯಂ, ‘ಅವನೇನು ಕ್ಷಮೆ ಕೇಳುತ್ತಾನೆ. ಅವನು ಗುದ್ದಾಡುತ್ತಾನೆ. ಅವನು ನನ್ನನ್ನು ತಂದೆ ಎಂದು ಒಪ್ಪಿದರೆ ನೋಡೋಣ’ ಎಂದಿದ್ದಾರೆ.

ಶನಿವಾರ ಶಾಸಕರ ಸಭೆ
ಪಕ್ಷದಿಂದ ತಮ್ಮನ್ನು ಉಚ್ಛಾಟಿಸಿದ ಬೆನ್ನಲ್ಲೇ ಅಖಿಲೇಶ್‌ಶನಿವಾರ ಬೆಳಿಗ್ಗೆ 9ಗಂಟೆಗೆ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ.

‘ಲಖನೌನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನಾನು ಗಮನಿಸುತ್ತಿದ್ದೇನೆ. ಸದ್ಯದ ಬೆಳವಣಿಗೆಗಳು ಸಮಾಜವಾದಿ ಪಕ್ಷದ ಆಂತರಿಕ ವಿಷಯಕ್ಕೆ ಸಂಬಂಧಿಸಿದ್ದಾಗಿವೆ’ ಎಂದು ಉತ್ತರ ಪ್ರದೇಶದ ರಾಜ್ಯಪಾಲ ರಾಮ್‌ನಾಯ್ಕ್‌ತಿಳಿಸಿದ್ದಾರೆ.

ಬೆಂಬಲಿಗರ ಪ್ರತಿಭಟನೆ
ಪಕ್ಷದಿಂದ ಅಖಿಲೇಶ್‌ಅವರನ್ನು ಉಚ್ಛಾಟಿಸಿದ ಸುದ್ದಿ ಹೊರಬಿದ್ದ ಬಳಿಕ ಅವರ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ನೂರಾರು ಮಂದಿ ಅಖಿಲೇಶ್‌ಬೆಂಬಲಿಗರು ಲಖನೌನಲ್ಲಿರುವ ಅವರ ನಿವಾಸದ ಎದುರು ಜಮಾಯಿಸಿದ್ದಾರೆ.

Comments are closed.