ರಾಷ್ಟ್ರೀಯ

ಹೊಸ ವರ್ಷದಿಂದ ಎಟಿಎಂಗಳಲ್ಲಿ ದಿನಕ್ಕೆ ₹4,500 ವಿದ್‌ಡ್ರಾ ಮಾಡಲು ಅವಕಾಶ

Pinterest LinkedIn Tumblr

atm

ನವದೆಹಲಿ: ಜನವರಿ 1ರಿಂದ ಎಟಿಎಂಗಳಿಂದ ಹಣ ವಿದ್‌ಡ್ರಾ ಮಾಡುವ ಮಿತಿಯನ್ನು ಭಾರತೀಯ ರಿಸರ್ವ್‌ಬ್ಯಾಂಕ್‌ಹೆಚ್ಚಿಸಿದೆ. ಹೊಸ ವರ್ಷದಿಂದ ಎಟಿಎಂಗಳಿಂದ ಪ್ರತಿದಿನ ₹4,500 ವಿದ್‌ಡ್ರಾ ಮಾಡಬಹುದು.

ನೋಟು ರದ್ದತಿಯ ಬಳಿಕ ಎಟಿಎಂಗಳಿಂದ ದಿನಕ್ಕೆ ₹2000 ವಿದ್‌ಡ್ರಾ ಮಾಡಲು ಮಾತ್ರ ಅವಕಾಶ ಕಲ್ಪಸಲಾಗಿತ್ತು. ನಂತರದ ದಿನಗಳಲ್ಲಿ ಈ ಮಿತಿಯನ್ನು ₹2,500ಕ್ಕೆ ಹೆಚ್ಚಿಸಲಾಗಿತ್ತು.

ಸದ್ಯ ಬ್ಯಾಂಕ್‌ಗಳ ಮೂಲಕ ವಾರಕ್ಕೆ ₹24 ಸಾವಿರ ವಿದ್‌ಡ್ರಾ ಮಾಡಬಹುದು. ಈ ವಾರದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.