ಪ್ರಮುಖ ವರದಿಗಳು

ಚಹಾ ಮಾರುವವನ ಬಳಿ ಇದ್ದ ₹10.5 ಕೋಟಿ ಮೌಲ್ಯದ ಅಕ್ರಮ ಸಂಪತ್ತು!

Pinterest LinkedIn Tumblr

note

ಸೂರತ್‌: ಫೈನಾನ್ಶಿಯರ್‌ಆಗಿ ಬದಲಾಗಿದ್ದ ಚಹಾ ಮಾರುವವನ ಬಳಿ ಇದ್ದ ₹10.5 ಕೋಟಿ ಮೌಲ್ಯದ ಅಕ್ರಮ ಸಂಪತ್ತನ್ನು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಸೂರತ್‌ನಲ್ಲಿ ಜಪ್ತಿ ಮಾಡಿದ್ದಾರೆ.

ಚಹಾ ಮಾರಾಟಗಾರನಿಗೆ ಸೇರಿದ ಸ್ಥಳಗಳಲ್ಲಿ ಶನಿವಾರ ತಪಾಸಣೆ ನಡೆಸಿದ್ದ ಐಟಿ ಅಧಿಕಾರಿಗಳು ₹1.45 ಕೋಟಿ ನಗದು (₹1.05 ಕೋಟಿ ಹಣ ಹೊಸ ನೋಟುಗಳಲ್ಲಿತ್ತು), ₹1.49 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ತು, ₹4.92 ಕೋಟಿ ಮೌಲ್ಯದ ಚಿನ್ನಾಭರಣ, ₹1.39 ಕೋಟಿ ಮೌಲ್ಯದ ಇತರೆ ಆಭರಣಗಳು ಮತ್ತು ₹1.28 ಕೋಟಿ ಮೌಲ್ಯದ ಬೆಳ್ಳಿ ಗಟ್ಟಿ ವಶಪಡಿಸಿಕೊಂಡಿದ್ದಾರೆ.

‘ವಶಪಡಿಸಿಕೊಳ್ಳಲಾಗಿರುವ ಒಟ್ಟು ಸಂಪತ್ತಿನ ಮೊತ್ತ ₹10.5 ಕೋಟಿ’ ಎಂದು ಐಟಿ ಮೂಲಗಳು ಹೇಳಿವೆ. ಆದರೆ, ತನಿಖೆ ನಡೆಯುತ್ತಿರುವುದರಿಂದ ಚಹಾ ಮಾರಾಟಗಾರನ ಗುರುತು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ಆತನಿಗೆ ಸೇರಿದ 13 ಬ್ಯಾಂಕ್‌ಲಾಕರ್‌ಗಳನ್ನು ತೆರೆಯಲಾಗಿದೆ. ಇನ್ನೂ ನಾಲ್ಕು ಲಾಕರ್‌ಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಸಂಪತ್ತಿನ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ನೊಯಿಡಾದಲ್ಲಿ ₹18 ಲಕ್ಷ ವಶ: ನೊಯಿಡಾದ ಸೆಕ್ಟರ್‌57 ಪ್ರದೇಶದಲ್ಲಿ ಹೊಸ ₹ 2 ಸಾವಿರ ನೋಟುಗಳಲ್ಲಿದ್ದ ₹18 ಲಕ್ಷ ನಗದನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ಪಡೆ ಮತ್ತು ಆದಾಯ ತೆರಿಗೆ ಇಲಾಖೆಯ ಜಂಟಿ ತಂಡವು ವಶಪಡಿಸಿಕೊಂಡಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.

‘ಸಿದ್ಧತೆ ಮಾಡಿಕೊಂಡಿಲ್ಲ’ (ಕೊಯಮತ್ತೂರು ವರದಿ): ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದಕ್ಕೂ ಮೊದಲು ಹಣಕಾಸು ಸಚಿವಾಲಯ ಸಾಕಷ್ಟು ಸಿದ್ಧತೆ ಮಾಡಿಕೊಳ್ಳದೇ ಇದ್ದುದು ನಗದು ಕೊರತೆ ಉಂಟಾಗಲು ಕಾರಣ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ಸ್ವಾಮಿ ಹೇಳಿದ್ದಾರೆ.

Comments are closed.