ಕರ್ನಾಟಕ

ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಹುಬ್ಬಳ್ಳಿ ಬಾಲಕಿ ! ವಿದ್ಯುತ್‌ ಅವಘಡದ ವೇಳೆ ಸಹೋದರನನ್ನು ರಕ್ಷಿಸಿದ್ದಕ್ಕಾಗಿ ಪ್ರಶಸ್ತಿ

Pinterest LinkedIn Tumblr

siya

ಹುಬ್ಬಳ್ಳಿ: ವಿದ್ಯುತ್‌ ಅವಘಡದಿಂದ, ತನ್ನ ನಾಲ್ಕು ವರ್ಷದ ಸಹೋದರನನ್ನು ರಕ್ಷಿಸಿದ್ದ ಇಲ್ಲಿನ ಬಾಲಕಿ ಸಿಯಾ ವಾಮನಸಾ ಖೋಡೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

‘ವಿದ್ಯುತ್‌ ತಂತಿ ತಾಗಿದ್ದ ಮನೆಯ ಗ್ರಿಲ್‌ ಅನ್ನು ನಾಲ್ಕು ವರ್ಷದ ಬಾಲಕ ಯಲ್ಲಪ್ಪ ಹಿಡಿದುಕೊಂಡಿದ್ದರಿಂದ ಅಪಾಯಕ್ಕೆ ಸಿಲುಕಿದ್ದ. ಸಿಯಾ ಧೈರ್ಯ ಮಾಡಿ ಆತನನ್ನು ರಕ್ಷಿಸಿದ್ದಳು. ಹೀಗಾಗಿ ಈ ಪ್ರಶಸ್ತಿ ಸಂದಿದೆ’ ಎಂದು ಸಿಯಾ ತಂದೆ ವಾಮನಸಾ ಯಲ್ಲಪ್ಪ ಖೋಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನನ್ನ ತಮ್ಮ ಅಳುತ್ತಿದ್ದಾಗ ಏನು ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ. ನಾನು ಕೂಡ ಗೊತ್ತಿಲ್ಲದೆ ಗ್ರಿಲ್‌ ಮುಟ್ಟಿದಾಗ ವಿದ್ಯುತ್‌ ತಗುಲಿತು. ಆದರೂ ತಕ್ಷಣ ಆತನನ್ನು ಜೋರಾಗಿ ಎಳೆದೆ. ಆಗ ಗ್ರಿಲ್‌ನಿಂದ ಆತ ಬೇರ್ಪಟ್ಟ’ ಎಂದು ಸಿಯಾ ತನ್ನ ಅನುಭವವನ್ನು ಈ ಹಂಚಿಕೊಂಡಳು.

ಈ ಘಟನೆ 2014ರ ಏಪ್ರಿಲ್‌ 15ರಂದು ನಡೆದಿತ್ತು. ಘಟನೆ ನಡೆದಾಗ ಸಿಯಾಗೆ 10 ವರ್ಷ. ಇಲ್ಲಿನ ದಾಜಿಬಾನ್‌ ಪೇಟೆಯ ಹರಪನಹಳ್ಳಿ ಓಣಿಯ ವಾಮನಸಾ ಯಲ್ಲಪ್ಪ ಮತ್ತು ವಿಜಯಶ್ರೀ ದಂಪತಿ ಪುತ್ರಿ.

‘ಈ ಹಿಂದೆ ರಾಜ್ಯ ಪ್ರಶಸ್ತಿ ಬಂದಿತ್ತು. ಈಗ ರಾಷ್ಟ್ರ ಪ್ರಶಸ್ತಿಯೂ ಬಂದಿದೆ. ಈ ಪ್ರಶಸ್ತಿಯನ್ನು ಎಲ್ಲ ಮಕ್ಕಳಿಗೆ ಅರ್ಪಿಸುತ್ತೇನೆ’ ಎಂದು ಸಿಯಾ ಸುದ್ದಿಗಾರರಿಗೆ ತಿಳಿಸಿದಳು.

ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Comments are closed.