ಕರ್ನಾಟಕ

ನವಜಾತ ಶಿಶುವಿನ ಕೋಮಲ ಚರ್ಮದ ಆರೈಕೆಯ ಬಗ್ಗೆ ತಿಳಿಯಿರಿ.

Pinterest LinkedIn Tumblr

new_baby_massag1

ಮಂಗಳೂರು: ಮಗುವಿನ ದೇಹ ಅತ್ಯಂತ ಕೋಮಲ, ಅಂತೆಯೇ ಚರ್ಮ ಸಹಾ. ಮಗುವಿನ ಆರೈಕೆಯಲ್ಲಿ ತಾಯಂದಿರು ಹೆಚ್ಚಿನ ಕಾಳಜಿ ವಹಿಸಬೇಕಾ ಗುತ್ತದೆ. ಇದು ಚರ್ಮದ ಆರೈಕೆಗೂ ಅನ್ವಯವಾಗುತ್ತದೆ. ಏಕೆಂದರೆ ಚರ್ಮ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಮತ್ತು ಒಂದು ವೇಳೆ ಕೊಂಚ ಬಿಸಿ ಅಥವಾ ಉರಿಯಾದರೆ ಮಕ್ಕಳು ಅಳುವಿನ ವಿನಃ ಬೇರೆ ಯಾವುದೇ ರೀತಿಯಲ್ಲಿ ತಿಳಿಸಲು ಅಸಮರ್ಥರಿರುವುದರಿಂದ ತಾಯಿಗೆ ತನ್ನ ಮಗುವಿನ ಚರ್ಮ ಯಾವ ಬಗೆಯದ್ದೆಂದು ತಿಳಿದುಕೊಂಡು ಆ ಪ್ರಕಾರ ಸೂಕ್ತವಾದ ಆರೈಕೆಯನ್ನು ನೀಡಬೇಕಾಗುತ್ತದೆ.

ಒಂದು ವೇಳೆ ಕೊಂಚ ಎಡವಟ್ಟಾದರೂ, ಅಥವಾ ಈ ಆರೈಕೆಗೆ ಬಳಸಲಾದ ಎಣ್ಣೆ ಅಥವಾ ಪ್ರಸಾಧನ ಮಗುವಿನ ಚರ್ಮಕ್ಕೆ ಅಲರ್ಜಿ ಉಂಟು ಮಾಡು ವಂತಿದ್ದರೆ ಕಲೆ ಅಥವಾ ಗೀರುಗಳು ಉಂಟುಮಾಡಬಹುದು. ಆದ್ದರಿಂದ ಯಾವುದೇ ತಪ್ಪಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ಮಗುವಿಗೆ ಯಾವುದೇ ಪ್ರಸಾಧನವನ್ನು ಹಚ್ಚುವ ಮೊದಲು ಕಾಲಿಗೆ ಅಥವಾ ಮೊಣಕೈಗೆ ಕೊಂಚವೇ ಹಚ್ಚಿ ಅಲರ್ಜಿಯಾಗುವುದಿಲ್ಲವೆಂದು ದೃಢಪಡಿಸಿಕೊಂಡಬಳಿಕವೇ ಮುಂದುವರೆಯಿರಿ.

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

ಮಗುವಿನ ಚರ್ಮದ ಗೌರವರ್ಣ ಹೆಚ್ಚಿಸಲು ಕೃತಕ ಪ್ರಸಾಧನಗಳ ಬಳಕೆಯನ್ನು ಆದಷ್ಟು ತಪ್ಪಿಸಿರಿ. ನಿಮ್ಮ ಮಗು ಈ ರಾಸಾಯನಿಕಗಳನ್ನು ಸಹಿಸುವಷ್ಟು ಬೆಳೆಯುವವರೆಗೆ ಪ್ರಸಾದನಗಳನ್ನು ಬಳಸದಿರುವುದೇ ಉತ್ತಮ. ಹಾಗಾದರೆ ಅಲ್ಲಿಯವರೆಗೆ ನಿಮ್ಮ ಮಗುವಿನ ಆರೈಕೆ ಹೇಗೆ?

new_baby_massag2

 ಉಗುರುಬೆಚ್ಚನೆಯ ಎಣ್ಣೆಯಿಂದ ಮಸಾಜ್ ಮಾಡಿ:
ಮಗುವಿಗೆ ಕೊಂಚವೇ ಬಿಸಿಯಿರುವ ನೈಸರ್ಗಿಕ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡಿ. ಕೊಬ್ಬರಿ ಎಣ್ಣೆ ಉತ್ತಮ. ಮಾರುಕಟ್ಟೆಯಲ್ಲಿ ಮಗುವಿಗಾಗಿಯೇ ವಿಶೇಷವಾದ ಆಯುರ್ವೇದೀಯ ತೈಲ ಲಭ್ಯವಿದೆ. ಇದನ್ನೂ ಬಳಸಬಹುದು. ಮಗು ಸಾಮಾನ್ಯವಾಗಿ ಮಲಗುವ ಸಮಯಕ್ಕೆ ಸುಮಾರು ಒಂದು ಗಂಟೆ ಮೊದಲು ಎಣ್ಣೆಯಿಂದ ಮಸಾಜ್ ಮಾಡಿ ಬಳಿಕ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿಸಿ ಮಲಗಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಈ ವಿಧಾನವನ್ನು ವಾರಕ್ಕೊಂದು ಅಥವಾ ಎರಡು ಬಾರಿ ಆಚರಿಸಿ.

new_baby_massag3

ಕಿತ್ತಳೆ, ಸೇಬು, ದ್ರಾಕ್ಷಿಹಣ್ಣಿನ ರಸಗಳನ್ನು ಕುಡಿಸಿ:
ಮಗುವಿನ ಆಹಾರದಲ್ಲಿ ಕಿತ್ತಳೆ ರಸ, ಸೇಬಿನ ರಸ, ಹಸಿರು ದ್ರಾಕ್ಷಿಹಣ್ಣಿನ ರಸಗಳನ್ನು ಸೇರಿಸಿ ಆಗಾಗ ತಿನ್ನಿಸುತ್ತಿರಿ. ಇವು ಮಗುವಿನ ಚರ್ಮದ ಕಾಂತಿ ಮತ್ತು ಗೌರವರ್ಣವನ್ನು ಹೆಚ್ಚಿಸುತ್ತದೆ.

5turmeric

 ಅರಿಶಿನ-ಚಂದನದ ಲೇಪನ ಹಚ್ಚಿ:
ಒಂದು ಟೀ.ಚಮಚ ಚಂದನದ ಪುಡಿ (ಚಂದನದ ಕೊರಡನ್ನು ತೇದಿ ತೆಗೆದ ಲೇಪ ಅತ್ಯುತ್ತಮ), ಅರ್ಧ ಟೀಚಮಚ ಅರಿಶಿನ ಪುಡಿ ಮತ್ತು ಕೆಲವು ಹನಿ ಹಾಲು ಸೇರಿಸಿ ನಯವಾದ ಲೇಪನ ತಯಾರಿಸಿ.ಮಗುವಿನ ಸೂಕ್ಷ್ಮಾಂಗಗಳನ್ನು ಹೊರತುಪಡಿಸಿ ಇಡಿಯ ಶರೀರಕ್ಕೆ ಹಚ್ಚಿ. ಕೊಂಚ ಉರಿಯಾಗುವುದ ರಿಂದ ಕೆಲವು ಮಕ್ಕಳು ಅಳುತ್ತವೆ. ಆಗ ಫ್ಯಾನ್ ಜೋರಾಗಿ ಹಾಕಿ ತಣಿಸಿ. ಸುಮಾರು ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಸಿ. ಅರಿಶಿನ ಚರ್ಮದ ಸೋಂಕುಗಳನ್ನು ನಿವಾರಿಸಿದರೆ ಚಂದನ ಮತ್ತು ಹಾಲು ಚರ್ಮಕ್ಕೆ ಸೌಮ್ಯತೆ ಮತ್ತು ಕಾಂತಿ ನೀಡುತ್ತದೆ.

new_baby_massag4

ಆಗಾಗ ಬಿಸಿಲಿಗೆ ಕೊಂಡೊಯ್ಯಿರಿ:
ಆಗಾಗ ಅಂದರೆ ವಾರಕ್ಕೊಂದು ಅಥವಾ ಎರಡು ಬಾರಿ ಮಗುವಿನ ಇಡಿಯ ಮೈ ಬಿಸಿಲಿಗೆ ಒಡ್ಡುವಂತೆ ಮಾಡಿ. ಇದಕ್ಕೆ ಸೂಕ್ತವಾದ ಸಮಯ ಮತ್ತು ಅವಧಿಯನ್ನು ಮಕ್ಕಳ ವೈದ್ಯರು ಸಲಹೆ ನೀಡಬಲ್ಲರು. ಸಾಮಾನ್ಯವಾಗಿ ಸೂರ್ಯೋದಯದ ಕಿರಣಗಳು ಮಕ್ಕಳ ಶರೀರಕ್ಕೆ ಉತ್ತಮವಾಗಿವೆ. ಪ್ರಖರ ಬಿಸಿಲು ಮಕ್ಕಳ ಚರ್ಮಕ್ಕೆ ಹಾನಿಕಾರಕವಾಗಿವೆ. ಸೂರ್ಯನ ಕಿರಣದಿಂದ ವಿಟಮಿನ್ ಡಿ ದೊರಕುವ ಮೂಲಕ ಮೂಳೆಗಳ ದೃಢತೆಗೂ ಉತ್ತಮವಾಗಿದೆ.

new_baby_massag5

ಸೋಪಿನ ಬದಲು ಗುಲಾಬಿ ನೀರು ಉಪಯೋಗಿಸಿ:
ಮಕ್ಕಳ ಮೈಸ್ನಾನ ಮಾಡಿಸಲು ಸೋಪು ಉಪಯೋಗಿಸಬೇಡಿ. ಬದಲಿಗೆ ಗುಲಾಬಿನೀರು ಅಥವಾ ಹಸಿಹಾಲನ್ನು ಉಪಯೋಗಿಸಿ. ಈಗ ಮಾರುಕಟ್ಟೆಯಲ್ಲಿ ಸೌಮ್ಯ ಸಾಬೂನುಗಳು ಲಭ್ಯವಿವೆ. ನಿಮ್ಮ ಮಗುವಿನ ಚರ್ಮಕ್ಕೆ ಯಾವ ಸೋಪು ಉತ್ತಮ ಎಂಬುದನ್ನು ಮಕ್ಕಳ ವೈದ್ಯರ ಸಲಹೆ ಪಡೆದು ಉಪಯೋಗಿ ಸಬಹುದು.

Comments are closed.