ಗುವಾಹಟಿ: ಮುಸಲ್ಮಾನರ ಮನೆಯಲ್ಲಿ ವೇದ ಮಂತ್ರ ಘೋಷ, ಹಿಂದೂ ಸಂಪ್ರದಾಯದಂತೆ ಮುಸ್ಲಿಮರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮ ಜರುಗಿತು.
ಅಸ್ಸಾಂನ ತೇಜ್ ಪುರ್ ನಗರದ ಶೇರ್ ಅಲಮ್ ಎಂಬುವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳು ನೆರವೇರಿದವು. ಶಾಲಾ ಶಿಕ್ಷಕಿಯಾದ 22 ವರ್ಷದ ರೋಸಾ ಅಮಿತ್ ಗುಹಾ ಎಂಬ ಬೆಂಗಾಳಿ ಹಿಂದೂವನ್ನು ಶಾಸ್ತ್ರೋಕ್ತವಾಗಿ ವಿವಾಹವಾದರು. ಈ ಅಪರೂಪದ ವಿವಾಹಕ್ಕೆ ನೆರೆಹೊರೆಯ ಜನ ಸಾಕ್ಷಿಯಾದರು.
ರೋಸಾ ಆರು ತಿಂಗಳ ಮಗುವಾಗಿದ್ದಾಗ ಶೇರ್ ಅಲಂ ಅವರ ಮನೆಗೆ ಪೋಷಕರ ಜೊತೆಗೆ ಬಾಡಿಗೆ ಮನೆಗೆ ಬಂದಿದ್ದರು. ರುಪಾ ಮಿಶ್ರಾ ಮತ್ತು ಹರೇ ಕೃಷ್ಣಾ ಮಿಶ್ರಾ ರೋಸಾ ತಂದೆ ತಾಯಿಯಿರು. ಆರು ತಿಂಗಳ ಮಗುವಿದ್ದಾಗಿನಿಂದಲೂ ರೋಸಾ ಅಲಂ ಮನೆಯಲ್ಲೇ ಬೆಳೆದಳು.
ಹರೇ ಕೃಷ್ಣ ಈ ವರ್ಷದ ಜನವರಿಯಲ್ಲಿ ವಿಧಿವಶರಾದರು, ರೋಸಾ ಹಿಂದು ವಾಗಿದ್ದರು ಅವಳು ನನ್ನ ಮಗಳಂತೆ ಬೆಳೆದಳು, ಅವಳನ್ನು ಒಬ್ಬ ಹಿಂದೂ ವರನವಿಗೆ ಕೊಟ್ಟು ವಿವಾಹ ಮಾಡಬೇಕು ಎಂಬುದು ನನ್ನ ಬಯಕೆಯಾಗಿತ್ತು, ಆದರೆ ಮುಸ್ಲಿಂ ಕುಟುಂಬದಲ್ಲಿ ಬೆಳೆದ ಆಕೆಯನ್ನು ಹಿಂದು ವರ ವಿವಾಹವಾಗುತ್ತಾನೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಅಮಿತ್ ಪೋಷಕರು ರೋಸಾಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಲು ಮುಂದೆ ಬಂದರು ಎಂದು ಶೇರ್ ಅಲಂ ತಿಳಿಸಿದ್ದಾರೆ.
ಆದರೆ ಮದುವೆಯ ಎಲ್ಲಾ ವಿಧಿ ವಿಧಾನಗಳು ಹಿಂದು ಸಂಪ್ರದಾಯದಂತೆಯೇ ನಡೆದವು. ನಾವೆಲ್ಲರೂ ದೇವಲ ಮಕ್ಕಳು, ನಾವು ಮಾನವೀಯತೆಗಾಗಿ ಬದುಕಬೇಕು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಶೇರ್ ಅಲಂ ತಿಳಿಸಿದ್ದಾರೆ.
ಅಲಂ ಅವರ ಸೋದರನ ಮಗ ದುಬೈ ನಿಂದ ಬಂದು ತನ್ನ ಸಹೋದರಿ ವಿವಾಹದಲ್ಲಿ ಪಾಲ್ಗೊಂಡಿದ್ದರು, ನಾವಿಬ್ಬರು ಜೊತೆಯಲ್ಲೇ ಬೆಳೆದವು. ಆದರೆ ಒಂದು ಬಾರಿಯು ಆಕೆ ಹಿಂದು ಎಂಬ ಭಾವನೆ ಬರಲಿಲ್ಲ, ಅವಳು ನಮ್ಮ ಮುದ್ದು ತಂಗಿ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ತನ್ನ ಪತಿಯ ನಿಧನದ ನಂತರ ರೋಸಾ ತಾಯಿ ರುಪಾ, ಮಗುವೆ ವಿಷಯವಾಗಿ ತುಂಬಾ ಹೆದರಿದ್ದರು, ಆದರೆ ಅಲಂ ಕುಟುಂಬಸ್ಥರು ಆಕೆಗೆ ಧೈರ್ಯ ತುಂಬಿ ಮಗಳ ವಿವಾಹವನ್ನು ನೆರವೇರಿಸಿದ್ದಾರೆ.