ಕರಾವಳಿ

ಕುಡುಪು ಶ್ರೀ ಕ್ಷೇತ್ರದಲ್ಲಿ ಪಂಚಮಿ ಉತ್ಸವ ಸಂಭ್ರಮ / ಇಂದು ವೈಭವದ ಬ್ರಹ್ಮರಥೋತ್ಸವದೊಂದಿಗೆ ಷಷ್ಟಿ ಮಹೋತ್ಸವ

Pinterest LinkedIn Tumblr

kudupu_pachami_1

ಕುಡುಪು: ಇತಿಹಾಸ ಪ್ರಸಿದ್ಧ ನಾರಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪಂಚಮಿ ಉತ್ಸವ ರವಿವಾರ ಸಂಭ್ರಮದಿಂದ ಜರಗಿತು. ಎರಡು ವರ್ಷಗಳ ಹಿಂದೆ 2 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಗರ್ಭಗೃಹದಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಲಾಯಿತು.

ದೇವತಾ ಪೂಜಾ ಕಾರ್ಯವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಬಳಿಕ ಭಕ್ತಾಧಿಗಳಿಂದ ಅಂಗ ಪ್ರದಕ್ಷಿಣೆ (ಉರುಳು ಸೇವೆ ), ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ವಿವಿಧ ಅರ್ಚನೆಗಳು, ವಿಶೇಷ ಹರಿವಾಣ, ನಾಗಬನದಲ್ಲಿ ವಿಶೇಷ ನಾಗತಂಬಿಲ ಸೇವೆ, ನೈವೇದ್ಯ, ಮಧ್ಯಾಹ್ನ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ಮಹಾಪೂಜೆ ನಡೆಯಿತು.

ಮುಂಜಾನೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ದೇಗುಲದ ಒಳಾಂಗಣದಲ್ಲಿ ಭಕ್ತರಿಂದ ಅಂಗಪ್ರದಕ್ಷಿಣಿ, ತೈಲಾಭ್ಯಂಜನ, ಅಪರಾಹ್ನ ಸರ್ವಾಭರಣ ಭೂಷೀತ ಶ್ರಿ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ವಿಶೇಷ ಮಹಾಪೂಜೆ ಬಳಿಕ ನಡೆದ ಮಹಾಅನ್ನ ಸಂತರ್ಪಣೆಯಲ್ಲಿ ಸುಮಾರು ೨೫ ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

kudupu_pachami_2 kudupu_pachami_3 kudupu_pachami_4 kudupu_pachami_5 kudupu_pachami_6 kudupu_pachami_7 kudupu_pachami_8 kudupu_pachami_9 kudupu_pachami_10 kudupu_pachami_11 kudupu_pachami_12 kudupu_pachami_13 kudupu_pachami_14 kudupu_pachami_15 kudupu_pachami_16 kudupu_pachami_17 kudupu_pachami_18 kudupu_pachami_19 kudupu_pachami_20 kudupu_pachami_21 kudupu_pachami_22 kudupu_pachami_23 kudupu_pachami_24 kudupu_pachami_25 kudupu_pachami_26 kudupu_pachami_27 kudupu_pachami_28 kudupu_pachami_29 kudupu_pachami_30 kudupu_pachami_31 kudupu_pachami_32 kudupu_pachami_33 kudupu_pachami_34 kudupu_pachami_35 kudupu_pachami_36 kudupu_pachami_37

ರಾತ್ರಿ ಸವಾರಿ ಬಲಿ, ಕಟ್ಟೆಪೂಜೆ, ಅಶ್ವವಾಹನೋತ್ಸವ, ಎರಡು ವರ್ಷಗಳ ಹಿಂದೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡ ಅತೀ ವಿಶಿಷ್ಟವೆನಿಸಿದ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ವಿಶೇಷವಾದ ತೆಪ್ಪೋತ್ಸವ, ದೇವರಿಗೆ ಅತ್ಯಂತ ಪ್ರೀತಿಯೆನಿಸಿದ ವಿಶೇಷ ಅಷ್ಟಾವಧಾನ ಸೇವೆ, ತಂಬಿಲ ಪಂಚಾಮೃತ ಸೇವೆ, ಎರಡನೇ ಬಲಿ ಚಂದ್ರ ಮಂಡಲೋತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ, ಹಾಗೂ ಭಕ್ತರಿಂದ ಬಟ್ಟಲು ಕಾಣಿಕೆಯೊಂದಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರಿಗೆ ಬೆಳ್ಳಿಯ ಮೂರ್ತಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಹೊರಾಂಗಣದಲ್ಲಿ ಉರುಳು ಸೇವೆಯೊಂದಿಗೆ ಪಂಚಮಿ ಮಹೋತ್ಸವ ಜರುಗಿತು.

ಆಡಳಿತ ಮಂಡಳಿಯ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಇಂದು ಷಷ್ಠಿ ಬ್ರಹ್ಮರಥೋತ್ಸವ

ಇಂದು ಕುಡುಪು ಶ್ರೀ ಆನಂತಪದ್ಮನಾಭ ದೇಗುಲದಲ್ಲಿ ವೈಭವದ ಷಷ್ಠಿ ಬ್ರಹ್ಮರಥೋತ್ಸವದೊಂದಿಗೆ ಷಷ್ಠಿ ಮಹೋತ್ಸವ ಸಮಾಪನಗೊಳ್ಳಲಿದೆ. ಶ್ರೀ ದೇವರಿಗೆ ಉಷ:ಕಾಲ ಪೂಜೆ, ವಿಶೇಷ ನವಕ ಕಲಾಶಾಭಿಷೇಕ, ಪಂಚಾಮೃತ ಅಭಿಷೇಕ ವಿವಿಧ ಆರ್ಚನೆಗಳೊಂದಿಗೆ ನೆರವೇರಲಿದ್ದು. ಮಧ್ಯಾಹ್ನ ಒಂದು ಗಂಟೆಗೆ ಬಲಿ ಹೊರಟು ರಥಾರೋಹಣ, ಬ್ರಹ್ಮರಥೋತ್ಸವ ಜರಗಲಿದೆ. ನಾಳೆ (ಡಿ.6ರಂದು) ಜೋಡು ದೇವರ ಬಲಿ ಉತ್ಸವ ಸಂಪನ್ನಗೊಳ್ಳಲಿದೆ.

Comments are closed.