ಕರ್ನಾಟಕ

ಪ್ರೀತಿಸುವ ಪ್ರೇಮಿಗಳಗಳಿಗೆ ಒಂದು ಕಿವಿ ಮಾತು ಓಮ್ಮೆ ಈ ಲೇಖನ ಓದಿ ….ಸರಿನಾ… ತಪ್ಪಾ ನೀವೇ ಹೇಳಿ

Pinterest LinkedIn Tumblr

lovers_dateing_1

ಮಂಗಳೂರು: ಮನೋವೈದ್ಯರು ಹೇಳುವ ಪ್ರಕಾರ ಪ್ರೀತಿಸಿ ವಿಫಲರಾಗಿ ಕೊನೆಗೆ ಖಿನ್ನತೆಗೊಳಗಾಗಿ ಆಸ್ಪತ್ರೆಗೆ ಬರುವ ಇಂದಿನ ಯುವಜನರಿಗೆ ಅವರು ಹೇಳುವ ವಾಸ್ತವ, ಮೊದಲು ಮಾತು, ಪ್ರೀತಿಸಿದವರೆಲ್ಲಾ ಮದುವೆಯಾಗಲು ಸಾಧ್ಯವಿಲ್ಲ ಎಂದು.

ಅವರು ಹೀಗೆ ಹೇಳುತ್ತಿರುವುದಿಕ್ಕೆ ಕಾರಣವೂ ಇದೆ. ಜೀವಕ್ಕೆ ಜೀವ ಕೊಡುವಂತೆ ಪರಸ್ಪರ ಪ್ರೀತಿಸುವ ಬಹಳಷ್ಟು ಹುಡುಗ-ಹುಡುಗಿಯರು ಮದುವೆಯಾಗುವ ಹಂತಕ್ಕೆ ಬಂದಾಗ ವೈಫಲ್ಯರಾಗುತ್ತಾರೆ. ಕೊನೆಗೆ ಅದರಿಂದ ಹೊರಬರಲಾರದೆ ಆತ್ಮಹತ್ಯೆಗೂ ಮುಂದಾಗುತ್ತಾರೆ ಅಥವಾ ಖಿನ್ನತೆಗೊಳಗಾಗುತ್ತಾರೆ. ಆದರೆ ಹೀಗೆಲ್ಲಾ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರೆನಿಸಿಕೊಂಡ ಹೆತ್ತವರು, ಸಹೋದರ-ಸಹೋದರಿಯರು, ಸ್ನೇಹಿತರು ಕೂಡ ಮಾನಸಿಕ ಹಿಂಸೆ ಅನುಭವಿಸುತ್ತಾರೆ.

ಇದಕ್ಕೆಲ್ಲಾ ಆಸ್ಪದ ಕೊಡಬಾರದು ಎಂಬ ಭಾವನೆಯುಳ್ಳವರು ನೀವಾಗಿದ್ದರೆ ಒಮ್ಮೆ ಈ ಲೇಖನವನ್ನು ಓದಿ. ಇದು ಪ್ರೇಮಿಗಳ ನಡುವೆ ನಡೆಯುವಂತ ಕೆಲವು ಮಾತುಗಳ ತುಣುಕು.

ಉದಾಹರಣೆ 1: ‘ನಾನು ಇಷ್ಟಪಟ್ಟ ಹುಡುಗ ನನ್ನಿಂದ ದೂರವಾದ. ತಂದೆ-ತಾಯಿಗಳ ಬಲವಂತಕ್ಕೆ ಮದುವೆಯಾಗಿ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಮನಸ್ಸು ಒಬ್ಬರಿಗೆ ಕೊಟ್ಟು, ಮೈಯ್ಯನ್ನು ಇನ್ನೊಬ್ಬರಿಗೆ ಕೊಟ್ಟು ಬದುಕುವ ಸ್ಥಿತಿ ನನ್ನ ಶತ್ರುವಿಗೂ ಬೇಡ’ ಎನ್ನುತ್ತಾರೆ ಪ್ರೇಮಿಗಳು.

ಉದಾಹರಣೆ 2: ‘ನೀನಿಲ್ಲದೆ ನನಗೇನಿದೆ. ಯಾರೇ ವಿರೋಧ ಮಾಡಿದರೂ ಲೆಕ್ಕಿಸದೆ ಮದುವೆ ಮಾಡಿಕೊಳ್ಳೋಣ ಎಂದಳು/ಎನ್ನುವನು. ಏನಾಯಿತೋ ಏನೋ ಒಂದು ದಿನ ನನ್ನಲ್ಲಿಗೆ ಬಂದು, ನನ್ನನ್ನು ಮರೆತುಬಿಡು. ನನಗಿಂತ ಒಳ್ಳೆಯ ಹುಡುಗಿ/ಹುಡುಗನನ್ನು ಆಯ್ಕೆ ಮಾಡಿಕೊಂಡು ಸುಖವಾಗಿರು ಎಂದು ನನ್ನ ಉತ್ತರಕ್ಕೂ ಕಾಯದೆ ಹೋದಳು/ ಹೋಗುವನು/.
ಅವನಿಗೆ/ ಅವಳಿಗೆ ಮದುವೆಯಾಯಿತು. ಸಂತೋಷವಾಗಿದ್ದಳೋ, ಇಲ್ಲವೋ ತಿಳಿದಿಲ್ಲ. ನಾನು ಅವಳ/ಅವನ ನೆನಪಿನಲ್ಲೇ ಬದುಕಿದ್ದೇನೆ. ಕೋಪ, ದುಃಖ ನನ್ನ ಮನಸ್ಸಿನಲ್ಲಿ ತುಂಬಿವೆ’ ಎನ್ನುತ್ತಾರೆ.

ಉದಾಹರಣೆ 3: ‘ಪ್ರೀತಿಸಿ ಹೇಗೋ ಕಷ್ಟಪಟ್ಟು ಮದುವೆ ಆದೆವು. ಒಂದು ಮಗುವೂ ಆಗಿದೆ, ಅವಳ ಮನೆಯವರು, ನೆಂಟರು, ನಮ್ಮ ಮನೆಯವರು, ನೆಂಟರು ನಮ್ಮನ್ನು ಮಾತನಾಡಿಸುವುದಿಲ್ಲ. ಕಷ್ಟಸುಖ ಕೇಳುವುದಿಲ್ಲ. ಮಾಡಬಾರದ ಅಪರಾಧ ಮಾಡಿರುವ ಅಪರಾಧಿಗಳಂತೆ ನಮ್ಮನ್ನು ಕಾಣಲಾಗುತ್ತಿದೆ. ಒಬ್ಬಿಬ್ಬ ಸ್ನೇಹಿತರು, ಸಹೋದ್ಯೋಗಿಗಳು ಮಾತ್ರ ನಮಗೆ ಸಪೋರ್ಟ್ ಮಾಡುತ್ತಾರೆ. ಬದುಕು ಒಂದು ರೀತಿ ಅಸಹನೀಯವಾಗಿದೆ. ಹೇಗೋ ಸಹಿಸಿಕೊಂಡು ಹೋಗುತ್ತಿದ್ದೇವೆ. ಮಾನಸಿಕ ಒತ್ತಡದಿಂದ ಸುಸ್ತಾಗಿದ್ದೇವೆ’ ಎಂದವರು ರಾಬರ್ಟ್ ಹಾಗೂ ಮೀರಾ.

ಸಮಾಜದಲ್ಲಿ ಇಂತಹ ನೈಜ ಘಟನೆಗಳು, ಉದಾಹರಣೆಗಳು ನಿಮಗೆ ಬಹಳಷ್ಟು ಸಿಗುತ್ತವೆ. ಹೀಗೆ ಪ್ರೀತಿ, ಜೀವನ ಸಂಗಾತಿಯ ಆಯ್ಕೆ, ಮದುವೆ ವಿಚಾರದಲ್ಲಿ ಪ್ರಕ್ಷುಬ್ಧವಾಗಿದ್ದರೆ, ಅದನ್ನು ನಿಭಾಯಿಸುವ ಕೌಶಲ ಮಾರ್ಗವನ್ನು ಕಂಡುಕೊಳ್ಳಬೇಕು.

ಹದಿವಯಸ್ಸಿನಲ್ಲಿ, ಪ್ರೌಢವಯಸ್ಸಿನಲ್ಲಿ, ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರೀತಿಯ ಭಾವನೆಗಳನ್ನು ಬೆಳೆಸಿಕೊಂಡಾಗ ಭಾವನೆಗಳು ಸಹಜವಾಗಿ ತೀವ್ರವಾಗಿ ಇರುತ್ತವೆ. ಜೊತೆಗೆ ಸಿನಿಮಾ, ಟೀವಿ, ಕಥೆ-ಕಾದಂಬರಿಗಳು, ಪೌರಾಣಿಕ ಅಥವಾ ಚಾರಿತ್ರಿಕ ಪಾತ್ರಗಳು, ಸಹವಯಸ್ಕರ ಒತ್ತಾಸೆಗಳು, ಪ್ರೀತಿಗಾಗಿ ಏನೆಲ್ಲ ಕಷ್ಟವನ್ನು ಅನುಭವಿಸಲು ಅಥವಾ ಪ್ರೀತಿಸಿದ ವ್ಯಕ್ತಿಯನ್ನು ಶತಾಯಗತಾಯ ಪಡೆಯಲೇಬೇಕೆಂಬ ಛಲದಿಂದ ನಿರ್ಧಾರ ಕೈಗೊಳ್ಳಲು ಮನಸ್ಸು ರೆಡಿಯಾಗುತ್ತದೆ. ಆದರೆ ಇಲ್ಲಿ ಹುಡುಗ-ಹುಡುಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ವಾಸ್ತವಿಕತೆಯನ್ನು, ನಮ್ಮ ಬಲಾಬಲಗಳನ್ನು ವಿಶ್ಲೇಷಿಸಿ, ಅದರ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಬೇಕು.

ಉದಾಹರಣೆಗೆ ಹುಡುಗನಿಗಾಗಲೀ ಹುಡುಗಿಗಾಗಲೀ ಪ್ರತಿರೋಧವನ್ನು ಎದುರಿಸುವ ಮಾನಸಿಕ ದೃಢತೆ ಇಲ್ಲ ಎಂಬ ಅನುಮಾನ ಬಂದಾಗ ಅಥವಾ ನಡೆನುಡಿಗಳ ಮೂಲಕ ಹಿಂಜರಿಕೆ ವ್ಯಕ್ತಪಡಿಸಿದರೆ, ಮುನ್ನುಗ್ಗಿ ಮದುವೆಯಾಗುವ ನಿರ್ಧಾರವನ್ನು ಕೈ ಬಿಡುವುದೇ ಕ್ಷೇಮ ಅಥವಾ ನಿರ್ಧಾರವನ್ನು ಮುಂದೂಡುವುದೇ ಜಾಣತನ.

ಈಗಾಗಲೇ ಹುಡುಗನೋ, ಹುಡುಗಿಯೋ ಯಾವುದೇ ಕಾರಣದಿಂದ ದೂರವಾಗಲು ಅಥವಾ ಬೇರೊಬ್ಬರನ್ನು ಮದುವೆಯಾಗಲು ನಿರ್ಧರಿಸಿದ್ದರೆ, ಇನ್ನೊಬ್ಬ ವ್ಯಕ್ತಿ ತನ್ನ ನಿರಾಶೆಯನ್ನು ನಿಭಾಯಿಸಲು ಸಿದ್ಧವಾಗಬೇಕು. ಅದುವರೆಗಿನ ಸ್ನೇಹ-ಸಂಬಂಧಗಳನ್ನು ನೆನಪಾಗಿಸಿಕೊಳ್ಳಬೇಕು. ಎಲ್ಲಾದರೂ ಇರಲಿ, ಯಾರನ್ನಾದರೂ ಮದುವೆಯಾಗಲಿ ನನ್ನ ಪ್ರಿಯತಮೆ ಚೆನ್ನಾಗಿರಲಿ, ಸಂತೋಷವಾಗಿರಲಿ ಎಂದು ಹಾರೈಸಬೇಕು. ಪ್ರೀತಿ-ಪ್ರೇಮ ಅಮರ, ಪ್ರೀತಿಗಾಗಿ ಪ್ರಾಣ ಎಂಬಿತ್ಯಾದಿ ಅತಿ ರಂಜಿತ ಕಲ್ಪನೆಗಳನ್ನು ಬಿಡಬೇಕು.

ಮನಸ್ಸನ್ನು ಸೃಜನಶೀಲ ಚಟುವಟಿಕೆಗಳು, ಹಿತಕೊಡುವ ಹವ್ಯಾಸಗಳು, ಸಮಾಜಸೇವೆ ಇತ್ಯಾದಿ ಚಟುವಟಿಕೆಗಳತ್ತ ಗಮನಹರಿಸಬೇಕು. ಕಾಲ ಸರಿದಂತೆ ನಿರಾಶೆಯ ಕಾವು ತನಗೆ ತಾನೇ ಕಡಿಮೆಯಾಗುತ್ತದೆ. ಈಗಾಗಲೇ ಮದುವೆಯಾಗಿರದಿದ್ದರೆ, ಮನೆಯವರು ಸಮಾಜದ ವಿರೋಧ ಇನ್ನು ಇದ್ದರೆ, ಅವರನ್ನು ಪ್ರೀತಿಯಿಂದ ಒಲಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಯಬೇಕು. ಪ್ರೀತಿಸಿ ಮದುವೆಯಾದ ಇತರ ದಂಪತಿಗಳನ್ನು ಸಂಪರ್ಕಿಸಿ, ಪರಸ್ಪರ ಆಸರೆ ನೀಡಿ ಪಡೆಯಬೇಕು.

ಈ ಲೇಖನ ನಿಮಗೆ ಇಷ್ಟವಾದರೆ ದಯಮಾಡಿ ಶೇರ್‍ ಮಾಡಿ ಹಾಗೂ  ಪ್ರೇಮಿಗಳು  ಪ್ರೀತಿಯ ನಿಜವಾದ ಅರ್ಥವನ್ನು ತಿಳಿದು ಯಾವುದೇ ತಪ್ಪು ನಿರ್ಧಾರ ಕೈಗೊಳ್ಳದಂತೆ ಸಹಕರಿಸಿ..

Comments are closed.