ಕರ್ನಾಟಕ

ಸ್ಮಾರ್ಟ್ ಜನರ ಸ್ಮಾರ್ಟ್ ಯುಗದಲ್ಲಿ ಶಿಕ್ಷಣಕ್ಕಾಗಿ ಅಪ್‍ಗಳ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ.

Pinterest LinkedIn Tumblr

education_apps_1

ಮಂಗಳೂರು: ಇದು ಡಿಜಿಟಲ್ ಯುಗ . ನಮ್ಮ ಎಲ್ಲ ಸಂವೇದನಾ ಶಕ್ತಿಯು ಟೆಕ್ನಾಲಜಿಯ ಮೇಲೆ ಅವಲಂಭಿತವಾಗಿದೆ. ಮೆಸೇಜಿಂಗ್, ಚಾಟಿಂಗ್ , ಗೇಮಿಂಗ್ ನಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ತಾಂತ್ರಿಕ ಸಂಶೋಧನೆ , ಕಾರ್ಯಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಹಭಾಗಿತ್ವ ಟೆಕ್ನಾಲಜಿಯದ್ದಾಗಿದೆ.

ಟೆಕ್ನಾಲಜಿಯಿಲ್ಲದ ಬದುಕನ್ನು ಇಂದು ಮಾನವ ಕ್ಷಣದ ಮಟ್ಟಿಗೂ ಊಹಿಸಲಾರ. ದಿನ ನಿತ್ಯವೂ ಹೊಸ ಅವಿಷ್ಕಾರದೊಂದಿಗೆ ನೂತನ ತಂತ್ರಾಂಶಗಳನ್ನು ಕಂಡು ಹಿಡಿದು ತನ್ನ ಕಾರ್ಯಕ್ಷಮತೆಯನ್ನು ಅಲ್ಪ ಸಮಯದಲ್ಲಿ ವಿಶಾಲವಾಗಿ ಪ್ರಕಟಿಸುತ್ತ ಅವಿನಾಭಾವ ಸಾಧನೆ ಮಾಡುತ್ತಿರುವ ಮಾನವ ಮಿದುಳಿಗೆ ಎಷ್ಟು ಸಲಾಂ ಹೇಳಿದರೂ ಸಾಲದು. ಇಂದು ಸ್ಮಾರ್ಟ್ ಪೋನ್ ಎಂಬ ಸಣ್ಣ ವಸ್ತುವಿನಲ್ಲಿ ಇಡೀ ಜಗತ್ತಿನ ಎಲ್ಲ ವಿಚಾರಗಳನ್ನು ಬಚ್ಚಿಟ್ಟುಕೊಳ್ಳ ಬಹುದು . ಹೆಬ್ಬೆರಳಿನ ತುತ್ತ ತುದಿಯಿಂದ ಟ್ಯಾಪ್ ಮಾಡುವ ಮೂಲಕ ಊಹೆಗೂ ನಿಲುಕದ ಹೊಸ ವಿಶ್ವವನ್ನೇ ನಾವು ಕಾಣಬಹುದು.

ಟೆಕ್ನಿಕಲ್ ಆಗಿ ಹೇಳಿದರೆ “ಇದು ಸ್ಮಾರ್ಟ್ ಜನರ ಸ್ಮಾರ್ಟ್ ಯುಗ” . ವಿದ್ಯಾರ್ಥಿಯಿಂದ ಹಿಡಿದು ಮುಪ್ಪಿನ ದಿನಗಳನ್ನು ಕಳೆಯುವ ವೃದ್ಧರು ಸಹ ತಮ್ಮ ದೈನಂದಿನ ಜೀವನಕ್ಕೆ ಸ್ಮಾರ್ಟ್ ಮೆರಗು ನೀಡಲು ದಿನ ನಿತ್ಯವೂ ಕಸರತ್ತು ಮಾಡುತ್ತಾರೆ .ಸಾಮಾನ್ಯವಾಗಿ ಹಿರಿಯರು “ನಿಮ್ಮ ಮನೆಯಲ್ಲಿ ಫೋನ್ ಇದೆಯಾ ?” ಎಂಬ ಪ್ರಶ್ನೆ ಕೇಳುತಿದ್ದ ಕಾಲ ಒಂದಿತ್ತು . ಆದರೆ ಇಂದು ಕಿರಿಯರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಶೈಲಿಯಲ್ಲಿ ಸ್ಟೈಲ್ ಆಗಿ “ನಿನ್ ಹತ್ರಾ ವಾಟ್ಸ್ ಅಪ್ ಇದೆಯಾ ?ಎಂಬ ಪ್ರಶ್ನೆ ಕೇಳುವ ಕಾಲ ಬಂದಿದೆ.

ನಿಜಕ್ಕೂ ಟೆಕ್ನಾಲಾಜಿ ನಮ್ಮ ಬದುಕಿನ ರೂಪು ರೆಷೆಯನ್ನು ಬದಲಿಸುತ್ತಾ ದೈನಂದಿನ ಜೀವನಕ್ಕೆ ಹೊಸ ಆಯಾಮ ನೀಡುತ್ತಿದೆ ಎಂದರೆ ತಪ್ಪಾಗಲಾರದು . ಅದೇ ರೀತಿ ಸ್ಮಾರ್ಟ್ ಫೋನ್ ಗಳಲ್ಲಿ APP ಗಳ ಬಳಕೆ ಕೂಡ.

APP ಅಥವಾ ಅಪ್ಲಿಕೆಶನ್ ನಲ್ಲಿ ಹಲವು ವಿಧಗಳಿವೆ . ಪ್ರಸ್ತುತ ನಾವು ಶಿಕ್ಷಣಕ್ಕೆ ಸಮಬಂಧ ಪಟ್ಟ APP ಗಳ ಬಗ್ಗೆ ಚರ್ಚಿಸುತ್ತಿದ್ದೇವೆ.ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಮತ್ತು ಹೆಚ್ಚು ಜನಪ್ರಿಯವಾದ ಕೆಲವು ಮೊಬೈಲ್ APP ಗಳ ಬಗ್ಗೆ ಇಲ್ಲಿ ಸರಳವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.

1. Dropbox(ಡ್ರಾಪ್ ಬಾಕ್ಸ್ ):
ಕಂಪ್ಯೂಟರ್ ಕ್ಲೌಡಿಂಗ್ ನ ಅತ್ಯುತ್ತಮ ಅವಿಷ್ಕಾರ ಅಂದ್ರೆ ಅದು ಡ್ರಾಪ್ ಬಾಕ್ಸ್ ಎಂದೇ ಹೇಳ ಬೇಕು. ಪ್ರಾಧ್ಯಾ ಪಕರು ಗಲಿಬಿಲಿಯಲ್ಲಿ ತಮ್ಮ ಅಮೂಲ್ಯವಾದ ಡಿಜಿಟಲ್ ಡಾಕ್ಯುಮೆಂಟ್ಸ್(ಪೆನ್ ಡ್ರೈವ್ ,ಸಿ.ಡಿ ) ಗಳನ್ನು ಮರೆತು ಬಿಟ್ಟಲ್ಲಿ, ಡ್ರಾಪ್ ಬಾಕ್ಸ್ ಮೂಲಕ ಸಂಪರ್ಕದಲ್ಲಿರುವ ಕಂಪ್ಯೂಟರ್ ನಿಂದ ತಮ್ಮ ನೋಟ್ಸ್ ಗಳನ್ನೂ ಸುರಕ್ಷಿತವಾಗಿ ಬಳಸಿಕೊಳ್ಳ ಬಹುದು, ಅಷ್ಟೇ ಅಲ್ಲದೆ ತಮ್ಮ ಪರ್ಸನಲ್ ಡಾಕ್ಯುಮೆಂಟ್ ಗಳನ್ನೂ ಸುರಕ್ಷಿತವಾಗಿ ಡ್ರಾಪ್ ಬಾಕ್ಸ್ ನಲ್ಲಿ ಸೇವ್ ಮಾಡಿಟ್ಟು ಕೊಳ್ಳಬಹುದು !

2. Documents To Go (ಡಾಕ್ಯು ಮೆಂಟ್ಸ್ ಟು ಗೋ )
ಇದು ಎಲ್ಲಾ ಸ್ಮಾರ್ಟ್ಫೋನ್ ಹಾಗೂ PDA ಪ್ಲಾಟ್ ಫಾರ್ಮ್ ನಲ್ಲಿ ಲಭ್ಯ. ಈ APP ಮೈಕ್ರೋಸಾಫ್ಟ್ ಆಫೀಸ್ ನ ಎಲ್ಲಾ ಕಾರ್ಯಕ್ರಮಗಳನ್ನು ಹೊಂದಿದೆ, ಜೊತೆಗೆ ಡಿವೈಸ್ ನಲ್ಲಿ ಸೇವ್ ಮಾಡಲಾಗುವ ಕಡತಗಳನ್ನು ಉಳಿಸುವಲ್ಲಿ ಹಾಗೂ ಇತರೆ ಡಿವೈಸ್ ಗೆ ಹೊಂದಿಕೊಂಡು ಪ್ರವರ್ತಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

3. Lab Guru (ಲ್ಯಾಬ್ ಗುರು)
ಇದು ಐಪ್ಯಾಡ್ ಒಡೆತನದ ಅತ್ಯಂತ ಜನಪ್ರಿಯ APP . ವಿಜ್ಞಾನ ಪ್ರಾಧ್ಯಾಪಕರ ಪ್ರಯೋಗಗಳ ರಚನೆ ಮತ್ತು ನಿರ್ವಹಣೆಯ ಜೊತೆಗೆ ವಿಧ್ಯರ್ಥಿಗಳೊಂದಿಗೆ ಶೇರ್ ಮಾಡುವಲ್ಲಿ ಮತ್ತು ನೋಟ್ ಮಾಡಲು ಸಹಕಾರಿಯಾಗಿದೆ .

4. Attendance (ಅಟೆಂಡೆನ್ಸ್)
ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ನಿಗಾವಹಿಸಲು ಮತ್ತು ಗಮನಕೇಂದ್ರೀಕರಿಸಲು ಈ APP ಸಹಕಾರಿಯಾಗಿದೆ . ಇದು ಇಡೀ ಶಿಕ್ಷಣ ಸಂಸ್ಥೆಯ ಒಟ್ಟಾರೆ ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ನಿಖರವಾದ ಮಾಹಿತಿಯನು ನೀಡುತ್ತದೆ

5. Evernote (ಎವರ್ ನೋಟ್)
ಆಯಾ ವಿಷಯಗಳಿಗೆ ಸಂಬಂಧ ಪಟ್ಟ ಡಿಜಿಟಲ್ ಕಡತಗಳನ್ನು ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು ಒಂದೆಡೆ ಶೇಖರಿಸಿ ನಿರ್ಧಿಷ್ಟ ಸ್ಥಳದಲ್ಲಿ ಲಭ್ಯವಾಗಿಸುವುದು ಈ APP ನ ವಿಶೇಷ . ಇದು ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ APP ಆಗಿದೆ

6. The Elements: A Visual Exploration (ಡಿ ಎಲಿಮೆಂಟ್ಸ್: ಅ ವಿಶುಯಲ್ ಎಕ್ಸ್ ಪ್ಲೋರೆಶನ್ ) ವನ್ನು ಇಷ್ಟಪಡದೆ ಇರುವವರು ಸಹ ಇದನ್ನು ಇಷ್ಟ ಪಡುತ್ತಾರೆ. ಪ್ರಸ್ತುತ APPನಲ್ಲಿ ರಸಾಯನಶಾಸ್ತ್ರದ ಬಗ್ಗೆ ಸಂಪೂರ್ಣವಾದ ವಿವರವಾದ ಫೋಟೋಗಳ ಜೊತೆಗೆ ದೈನಂದಿನ ಜೀವನದಲ್ಲಿ ಬಳಸುವ ಎಲ್ಲಾ ಮೂಲಭೂತ ಅಂಶಗಳನ್ನು ಮತ್ತು ವಸ್ತು ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಆವರ್ತಕ ಕೋಷ್ಟಕದಲ್ಲಿ ವಿವರಿಸುತ್ತದೆ.

7. TED (ಟಿ.ಇ.ಡಿ)
ಸಾಮಾನ್ಯವಾಗಿ ಈ APP ನ್ನು ಎಲ್ಲ ಶಿಕ್ಷಕರು ಇಷ್ಟಪಡುತ್ತಾರೆ. ಪ್ರಸ್ತುತ APP ನಲ್ಲಿ ಅಸಂಖ್ಯಾತ ವಿಷಯಗಳು ಹೊಂದಿದೆ. ಶಿಕ್ಷಕರು ತಮ್ಮ ತರಗತಿಯ ಪಾಠಗಳನ್ನು, ಉಪನ್ಯಾಸಗಳನ್ನು ಪೂರಕವಾಗಿ ಟೆಡ್ ನಲ್ಲಿ ಶೇಖರಿಸ ಬಹುದು. ಅಷ್ಟೇ ಅಲ್ಲದೆ ತಮ್ಮಗೆ ತಿಳಿದಿರದ ವಿಷಯಗಳ ಬಗ್ಗೆ TED ಮೂಲಕ ತಿಳಿದು ಕೊಳ್ಳ ಬಹುದು

9. Twitter (ಟ್ವಿಟರ್)
ವಿದ್ಯಾರ್ಥಿಗಳಿಗೆ ಪರೀಕ್ಷೆ ಯ ಬಗ್ಗೆ ಮುನ್ಸೂಚನೆ ನೀಡುವುದು ಅಥವಾ ನೆನಪಿಸುವುದು, ಆನ್ ಲೈನ್ ಮೂಲಕ ಅಧ್ಯಯನ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದರಲ್ಲಿ, ತರಗತಿಯ ಅತ್ಯಗತ್ಯ ವಿಚಾರಗಳನ್ನು ಬಳಸುವಲ್ಲಿ ಟ್ವಿಟರ್ ಸದಾ ಮೊದಲ ಆದ್ಯತೆಯನ್ನು ಪಡೆಯುತ್ತದೆ.

10. Science 360 (ಸೈನ್ಸ್ 360)
ಆಂಡ್ರಾಯ್ಡ್ ಮತ್ತು ಐ ಫೋನ್ ಬಳಕೆದಾರರು ವಿಜ್ಞಾನಕ್ಕೆ ಸಂಬಂಧ ಪಟ್ಟ ಆಡಿಯೋ ಕ್ಲಿಪ್ ಮತ್ತು ವಿಡಿಯೋ ಕ್ಲಿಪ್ ಗಳನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೆ ವೈಯಕ್ತಿಕವಾಗಿ ತಮ್ಮ ಜ್ಞಾನ ಉತ್ತೇಜಿಸಲು ಈ APP ಅನ್ನು ಬಳಸಬಹುದು .

11. Quick Graph (ಕ್ವಿಕ್ ಗ್ರಾಫ್)
ಗಣಿತ ವಿಷಯದ ಪ್ರಾಧ್ಯಾಪಕರು ಕ್ವಿಕ್ ಗ್ರಾಫ್ ನ ಮೂಲಕ ಎರಡು ಮತ್ತು ಮೂರು ಆಯಾಮಗಳಲ್ಲಿ ಸಮೀಕರಣಗಳನ್ನು ಸಂಕ್ಷಿಪ್ತ ವಾಗಿ ತಿಳಿಸಲು ಈ ಅಪ್ಲಿಕೇಶನ್ ಬಳಸಬಹುದು.ಅಷ್ಟೇ ಅಲ್ಲದೆ ಇದರಲ್ಲಿ ಕಂಪ್ಯು ಟಿಂಗ್ ನೊಂದಿಗೆ ಅತ್ಯಂತ ಕ್ಲಿಷ್ಟಕರವಾದ ಲೆಕ್ಕಗಳನ್ನು ದೃಶ್ಯಗಳ ಮೂಲಕ ವಿವರವಾಗಿ ತಿಳಿಸಬಹುದು .

12. Keynote (ಕೀ ನೋಟ್)
ಸಮ್ಮೇಳನಗಳಲ್ಲಿ, ಅಥವಾ ಉಪನ್ಯಾಸಗಳನ್ನು ನೀಡುವ ಸಂದರ್ಭದಲ್ಲಿ ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ನ ನೆರವಿಲ್ಲದೆ ಮಲ್ಟಿ ಮೀಡಿಯದೊಂದಿಗೆ ಈ APP ಮೂಲಕ ತಮ್ಮ ವಿಷಯವನ್ನು ಪ್ರಸ್ತುತ ಪಡಿಸಬಹುದು.

13. TeacherKit (ಟೀಚರ್ ಕಿಟ್)
ಇದು ಕೇವಲ ಐ ಫೋನ್ ನಲ್ಲಿ ಮಾತ್ರ ಲಭ್ಯ. ಈ ಅಪ್ಲಿಕೇಶನ್ ಒಬ್ಬ ಶಿಕ್ಷಕನ ಸಹಾಯಿಯಂತೆ ಕಾರ್ಯ ನಿರ್ವಹಿಸುತ್ತದೆ ಕೆಲಸಕ್ಕೆ ಸಂಬಂಧ ಪಟ್ಟ ದಾಖಲೆಯ ಶ್ರೇಣಿಗಳನ್ನು ಮತ್ತು ಹಾಜರಾತಿ, ಮತ್ತು ಸಾಕಷ್ಟು ವಿಷಯಗಳನ್ನು ಇದು ಹೊಂದಿದೆ. ಶಿಕ್ಷಕ ತನ್ನ ಅಗತ್ಯಕ್ಕೆ ತಕ್ಕ ಹಾಗೆ ಟೀಚರ್ ಕಿಟ್ APP ನ್ನು ಬಳಸಬಹುದು

14. Teacher Aide Pro (ಟೀಚರ್ ಎಡ್ ಪ್ರೊ )
ಟೀಚರ್ ಕಿಟ್ ಬಳಸಲು ಆಗದವರು ಆಂಡ್ರಾಯಿಡ್ ನ ಟೀಚರ್ ಎಡ್ ಪ್ರೊ ಬಳಸಬಹುದು.ಈ APP ಟೀಚರ್ ಕಿಟ್ ನಲ್ಲಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ

15. Google Apps (ಗೂಗಲ್ APPs)
ಒಂದರ ಬದಲಿಗೆ ಅನೇಕ ಅಪ್ಲಿಕೇಶನ್ ಗಳನ್ನು ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಬಳಸಬಹುದು , ಆಂಡ್ರಾಯ್ಡ್, ಐಪ್ಯಾಡ್, ಐಫೋನ್, ಬ್ಲಾಕ್ ಬೆರ್ರಿ , ವಿಂಡೋಸ್ ಫೋನ್, ಅಥವಾ ಯಾವುದೇ ಮೊಬೈಲ್ ಗ್ಯಾಜೆಟ್ ಇರಲಿ, ಗೂಗಲ್ APPs ನ ಸಹಾಯದೊಂದಿಗೆ ಹಲವು APP ಗಳ ಲಾಭ ಪಡೆಯಬಹುದು.

16. Blackboard Mobile Learn (ಬ್ಲ್ಯಾಕ್ ಬೋರ್ಡ್ ಮೊಬೈಲ್ ಲರ್ನ್)
ಬಹಳಷ್ಟು ಕಾಲೇಜ್ ಮತ್ತು ವಿಶ್ವ ವಿದ್ಯಾನಿಲ ಗಳು ಬ್ಲ್ಯಾಕ್ ಬೋರ್ಡ್ ಅಪ್ಲಿಕೇಶನ್ ಮೂಲಕ ಆನ್ ಲೈನ್ ಕೋರ್ಸ್ ಗಳನ್ನು ನಡೆಸುತ್ತದೆ. ತಂತ್ರಜ್ಞಾನದ ಮತ್ತು ಮೊಬೈಲ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಅವಕಾಶ ಈ APP ಒದಗಿಸುತ್ತದೆ.

17. eClicker Polling System (ಇ ಕ್ಲಿಕ್ಕರ್ ಪೋಲಿಂಗ್ ಸಿಸ್ಟಂ)
ಸಂಕೀರ್ಣವಾದ ಅಥವಾ ವಿಶಾಲವಾದ ಪವರ್ ಪಾಯಿಂಟ್ , ಕೀ ನೋಟ್ ಪ್ರಸ್ತುತಿ, ರೇಖಾ ಚಿತ್ರ , ಪೋಲಿಂಗ್, ಪವರ್ ಪಾಯಿಂಟ್ ಸ್ಲೈಡ್ ಗಳ ರಚನೆ ಮತ್ತು ನಿರೂಪಣೆ ಮತ್ತು ಹಲವು ವೈಶಿಷ್ಟ್ಯ ಗಳನ್ನೂ ಒಳಗೊಂಡ ಈ APP ಅತ್ಯಂತ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

18. Wikipedia (ವಿಕಿ ಪೀಡಿಯಾ)
ತನ್ನಲ್ಲಿನ ವಿಶಾಲ, ಮುಕ್ತ ಸಂಪಾದನೆ, ರಚನೆಯ ಹೊರತಾಗಿಯೂ, ವಿಕಿಪೀಡಿಯ ನಿಖರ ಮತ್ತು ಲಭ್ಯವಿರುವ ನೈಜ ಮಾಹಿತಿಯನ್ನು ನೀಡುತ್ತದೆ. ಪ್ರಾಧ್ಯಾಪಕರುಗಳಿಗೆ ಸಾಕಷ್ಟು ಸಂಶೋಧನೆಗೆ ನೆರವಾಗಿದೆ .

19. CourseSmart (ಕೋರ್ಸ್ ಸ್ಮಾರ್ಟ್)
ಕೋರ್ಸ್ ಸ್ಮಾರ್ಟ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಲಭ್ಯವಾದ APP ಆಗಿದ್ದು, ಈ ಅಪ್ಲಿಕೇಶನ್ ವಿಧ್ಯಾರ್ಥಿಗಳಿಗೆ , ಉಪನ್ಯಾಸಕರಿಗೆ,ಶಿಕ್ಷಕರಿಗೆ ಸಾವಿರಾರು ಪಠ್ಯಪುಸ್ತಕಗಳನ್ನು ಓದಬಹುದಾಗಿದೆ.

20. Bento (ಬೆಂಟೊ)
ಐ ಫೋನ್ ಡಿವೈಸ್ ಗಳಿಗೆ ಮಾತ್ರ ಅಭಿವೃದ್ಧಿ ಪಡಿಸಲಾದ ಈ ಅಪ್ಲಿಕೇಶನ್ ಪ್ರಾಜೆಕ್ಟ್ ಪ್ಲಾನಿಂಗ್ ಮತ್ತು ಅದನ್ನು ರಚಿಸುವ ಪ್ರಕ್ರಿಯೆಗೆ ಉಪಯುಕ್ತವಾಗಿದೆ.

21. Edmodo(ಎಡ್ ಮೊಡೋ)
ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಜಾಲತಾಣ ಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ವಯಕ್ತಿಕವಾಗಿ ಯಾವುದೇ ರೀತಿಯ ತರಗತಿಯ ವಸ್ತುಗಳ ಬಗ್ಗೆ ಚರ್ಚಿಸುವುದಾಗಲಿ ಶೇರ್ ಮಾಡಲು ಸಾಧ್ಯವಿಲ್ಲ ಹಾಗೆ ಗೌಪ್ಯತೆಗೂ ಸಹ ಇಲ್ಲಿ ಆಸ್ಪದವಿಲ್ಲ. ಎಡ್ ಮೊಡೋ APP ನ ಮೂಲಕ ವಿದ್ಯಾರ್ಥಿ ಮತ್ತು ಶಿಕ್ಷಕರು ನಡುವೆ ಪರಸ್ಪರ ತರಗತಿಯ ವಸ್ತುಗಳ ಬಗ್ಗೆ ಸಮಾಲೋಚನೆ ನಡೆಸಬಹುದು.

22 QuickOffice Pro (ಕ್ವಿಕ್ ಆಫೀಸ್ ಪ್ರೊ )
$ 14,99 ಮೌಲ್ಯದ ಈ APP ಐ ಫೋನ್ ಡಿವೈಸ್ ಮತ್ತು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಲಭ್ಯವಾಗಿದೆ . ಈ APP ಮೂಲಕ ಮೈಕ್ರೋಸಾಫ್ಟ್ ಆಫಿಸ್ ನ ಎಲ್ಲ ಟೂಲ್ಸ್ ಗಳನ್ನು ಯಾವುದೇ ಅದೇ ತಡೆ ಇಲ್ಲದೆ ಬಳಸಬಹುದು.

23. Box(ಬಾಕ್ಸ್)
ಯಾವುದೇ ಕಂಪ್ಯೂಟರ್ ಮೂಲಕ ಹೋಸ್ಟ್ ಮಾಡಲಾದ ಫೈಲ್ ಗಳನ್ನು ಪುನರ್ ಬಳಸುವ ಅವಕಾಶದ ಜೊತೆಗೆ ಪ್ರಮುಖ ದಾಖಲೆಗಳ ಗೌಪ್ಯತೆ ಯನ್ನು ಕಾಪಾಡುವ ಅತ್ಯಂತ ಜನಪ್ರಿಯ ಕ್ಲೌಡ್ ಕಂಪ್ಯೂಟಿಂಗ್ APP ಆಗಿದೆ .

24. iAnnotate (ಐ ಅನ್ನೋಟೆಟ್)
ಈ APP ಮೂಲಕ ಶಿಕ್ಷಣಕ್ಕೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡಬಹುದು. ನೋಟ್ ಮಾಡುವುದು,ಟಿಪ್ಪಣಿಗಳು ಬರೆಯುವುದು , ಬುಕ್ ಮಾರ್ಕ್ ಮಾಡುವುದು, ಹೈಲೈಟ್ ಮಾಡುವುದರ ಜೊತೆಗೆ PDF ಫೈಲ್ ಗಳನ್ನೂ ಸಹ ಬಳಸಬಹುದು .

25. Mendeley (ಮೆಂಡೆಲೆ)
ಸಂಶೋಧನೆಗಳಲ್ಲಿ ನಿರತರಾದ ಪ್ರಾಧ್ಯಾಪಕರುಗಳು, ತಮ್ಮ ಸಂಶೋಧನೆಯಾ ಸಂಕಲನ ಮತ್ತು ಸಂಘಟಿಸುವಿಕೆಯ ಬಗ್ಗೆ , ಹಾಗೂ ಇತರ ವೃತ್ತಿಪರ ಹಾಗೂ ಶಿಕ್ಷಕರೊಂದಿಗೆ ಶೇರ್ ಮಾಡುವುದು ಮತ್ತು ದಾಖಲೆಗಳನ್ನು ಅಪ್ಡೇಟ್ ಮಾಡವುದು ಹಾಗು ಸಂಪರ್ಕದ ಹೋದಳು Mendeley ಬಹಳ ಉಪಕಾರಿಯಾಗಿದೆ. ಇದು ಐ ಫೋನ್ ನಲ್ಲಿ ಮಾತ್ರ ಲಭ್ಯ.

26. Popplet (ಪೊಪ್ಲೆಟ್)
ಪೇಪರ್ ಪ್ರೆಸೆಂಟೇಷನ್ ಮಾಡುವ ಮುನ್ನ ತಮ್ಮ ಕಾಲ್ಪನಿಕ ಶಕ್ತಿಯನ್ನು ಸ್ಮರಣೀಯ ಗೊಳಿಸಿ ಚೊಕ್ಕವಾಗಿ , ಪರಿಣಾಮಕಾರಿಯಾದ ಉಪನ್ಯಾಸಗಳನ್ನು ತ್ವರಿತ ರೀತಿಯಲ್ಲಿ ಪ್ರಸ್ತುತ ಪಡಿಸಲು Popplet ಬಹಳ ಉಪಯುಕ್ತವಾದ ಅಪ್ಲಿಕೇಶನ್ ಆಗಿದೆ.

ಓದುವಿಕೆ ಎನ್ನುವುದು ಅತ್ಯುತ್ತಮ ಹವ್ಯಾಸ. ತಕ್ಷಣವೇ ಕ್ಲಿಕ್ ಮಾಡಿ ನಿಮ್ಮನು ಓದುಗರ ಜಗತ್ತಿನಲ್ಲಿ ಕಂಡು ಕೊಳ್ಳಿ ಹಾಗೂ ವಿಧ್ಯಾರ್ಥಿಗಳು ಇದರ ಉಪಯೋಗ ಪಡೆದು ಉತ್ತಮ ಶಿಕ್ಷಣ ಪಡೆಯಿರಿ….

Comments are closed.