ರಾಷ್ಟ್ರೀಯ

ತೀರಾ ಗಂಭೀರ ಸ್ಥಿತಿಯಲ್ಲಿರುವ ಜಯಲಲಿತಾರಿಗೆ ಅಳವಡಿಸಿರುವ ಹೃದಯಕ್ಕೆ ಸಂಬಂಧಿಸಿದ “ಇಸಿಎಂಒ” ಉಪಕರಣದ ಕುರಿತು ಇಲ್ಲಿದೆ ಮಾಹಿತಿ

Pinterest LinkedIn Tumblr

jaya

ಚೆನ್ನೈ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಭಾನುವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರಿಗೆ “ಎಕ್ಸ್ ಟ್ರಾಕಾರ್ಪೋರೀಲ್ ಮೆಂಬ್ರೇನ್ ಆಕ್ಸಿಜನೇಷನ್” (ಇಸಿಎಂಒ) ಎಂಬ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಹಾಗಿದ್ದರೆ ಈ ಇಸಿಎಂಒ ಉಪಕರಣ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸಣ್ಣ ಮಾಹಿತಿ ಇಲ್ಲಿದೆ.

ಏನಿದು ಇಸಿಎಂಒ?
ಎಕ್ಸ್ ಟ್ರಾಕಾರ್ಪೋರೀಲ್ ಮೆಂಬ್ರೇನ್ ಆಕ್ಸಿಜನೇಷನ್ ಅಥವಾ ಇಸಿಎಂಒ ವ್ಯಕ್ತಿಯ ಅಥವಾ ರೋಗಿಯ ಹೃದಯ ಕೆಲಸ ಮಾಡುವಲ್ಲಿ ವಿಫಲವಾದಾಗ ದೇಹಕ್ಕೆ ಕೃತಕವಾಗಿ ಅಮ್ಲಜನಕವನ್ನು ಪೂರೈಸುವ ಉಪಕರಣವಾಗಿದೆ. ರೋಗಿಯ ಹೃದಯ ಮತ್ತು ಶ್ವಾಸಕೋಶಗಳು ತೀವ್ರ ತೊಂದರೆಗೆ ಒಳಗಾದ ವೇಳೆ ಈ ಯಂತ್ರವನ್ನು ರೋಗಿಯ ದೇಹಕ್ಕೆ ಬಾಹ್ಯವಾಗಿ ಅಳವಡಿಸಲಾಗುತ್ತದೆ. ಯಂತ್ರವು ಹೃದಯ ಮತ್ತು ಶ್ವಾಸಕೋಶದ ಕೆಲಸ ನಿರ್ವಹಿಸುತ್ತದೆ. ರೋಗಿಯ ಹೃದಯ ಬಡಿತ ಅಗತ್ಯ ಪ್ರಮಾಣಕ್ಕಿಂತ ನಿಧಾನವಾದಾಗ ಅಥವಾ ಸ್ಥಗಿತಗೊಂಡಾಗ ವೈದ್ಯರು ಈ ಉಪಕರಣದ ನೆರವಿನಿಂದ ರೋಗಿಯ ದೇಹಕ್ಕೆ ಆಮ್ಲಜನಕವನ್ನು ಪೂರೈಕೆ ಮಾಡುತ್ತಾರೆ.

ಇಸಿಎಂಒ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಮೊದಲು ಹೃದಯದ ಬಡಿತವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಹೃದಯಕ್ಕೆ ಈ ಇಸಿಎಂಒ ಉಪಕರಣದ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. ಈ ಉಪಕರಣವು ರೋಗಿಯ ದೇಹದಲ್ಲಿನ ರಕ್ತವನ್ನು ಬಳಕೆ ಮಾಡಿಕೊಂಡು ಇಂಗಾಲವನ್ನು ಹೊರಗೆಳೆದು ಕೆಂಪುರಕ್ತಕ್ಕೆ ಆಮ್ಲಜನಕವನ್ನು ಪೂರೈಕೆ ಮಾಡಿ ಬಳಿಕ ಮತ್ತೆ ರಕ್ತವನ್ನು ರೋಗಿಯ ದೇಹಕ್ಕೆ ಚಲಿಸುವಂತೆ ಮಾಡುತ್ತದೆ. ಹೀಗೆ ರೋಗಿಯ ದೇಹ ಸೇರಿದ ರಕ್ತದ ನೆರವಿನಿಂದ ನಿಷ್ಕ್ರಿಯಗೊಂಡಿರುವ ಹೃದಯ ಚೈತನ್ಯ ಪಡೆಯುವ ಸಾಧ್ಯತೆಗಳಿವೆ. ಈ ಉಪಕರಣ ಜೀವರಕ್ಷಕವೇ ಆದರೂ ಇದು ರೋಗಿಯಿಂದ ರೋಗಿಗೆ ವ್ಯತ್ಯಾಸವಿರುತ್ತದೆ. ಈ ಉಪಕರಣವನ್ನು ಸಾಮಾನ್ಯವಾಗಿ 12ಗಂಟೆ ಬಳಕೆ ಮಾಡಲಾಗುತ್ತದೆಯಾದರೂ ತೀರಾ ಗಂಭೀರ ಅಥವಾ ಕೆಲವು ವಿಶಿಷ್ಟ ಪ್ರಕರಣಗಳಲ್ಲಿ 5 ದಿನಗಳವರೆಗೂ ಈ ಉಪಕರಣವನ್ನು ಬಳಕೆ ಮಾಡಲಾಗುತ್ತದೆ.

Comments are closed.