ಪ್ರಮುಖ ವರದಿಗಳು

ಅದೃಷ್ಟ ಹೇಗಿದೆ ನೋಡಿ…ಟ್ಯಾಕ್ಸಿ ಡ್ರೈವರ್‍ನ ಜನ್‍ಧನ್ ಅಕೌಂಟಿಗೆ ಬಂತು 9,806 ಕೋಟಿ ರೂ. !

Pinterest LinkedIn Tumblr

money

ಪಟಿಯಾಲಾ : ನಿಮ್ಮ ಬ್ಯಾಂಕ್‌ಉಳಿತಾಯ ಖಾತೆಗೆ ಇದ್ದಕ್ಕಿದ್ದಂತೆಯೇ 9,806 ಕೋಟಿ ರೂ. ಜಮೆಯಾದರೆ ಆ ಕ್ಷಣದಲ್ಲಿ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ? ನಿಮಗದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಾದೀತೇ ? ಇಂತಹ ಒಂದು ವಿಲಕ್ಷಣ ಅನುಭವ ಕೆಲ ದಿನಗಳ ಹಿಂದೆ ಪಂಜಾಬ್‌ನ ಓರ್ವ ಟ್ಯಾಕ್ಸಿ ಚಾಲಕನ ಪಾಲಿಗೆ ಬಂತೆಂಬುದು ಗಮನಾರ್ಹ.

ಬಲವೀಂದರ್‌ಸಿಂಗ್‌ಎಂಬವರು ವೃತ್ತಿಯಲ್ಲಿ ಪಂಜಾಬಿನಲ್ಲಿ ಓರ್ವ ಟ್ಯಾಕ್ಸಿ ಚಾಲಕ. ಇವರು ಈಚೆಗೆ ಪ್ರಧಾನ್‌ಮಂತ್ರಿ ಜನಧನ್‌ಯೋಜನೆಯಡಿ ಪಟಿಯಾಲಾದಲ್ಲಿನ ಎಸ್‌ಬಿಐ ಶಾಖೆಯಲ್ಲಿ ಜನಧನ್‌ಉಳಿತಾಯ ಖಾತೆಯನ್ನು ತೆರೆದಿದ್ದರು. ಇವರ ಈ ಖಾತೆಯಲ್ಲಿ ಸಾಮಾನ್ಯವಾಗಿ ಇರುವ ಹಣ 3,000ರೂ.

ಕಳೆದ ನವೆಂಬರ್‌4ರಂದು ಬೆಳಗ್ಗೆ ಬಲವೀಂದರ್‌ಸಿಂಗ್‌ಅವರು ನಿದ್ದೆಯಿಂದ ಎದ್ದಾಗ ತಮ್ಮ ಜನಧನ್‌ಖಾತೆಯಲ್ಲಿ 9,806 ಕೋಟಿ ರೂ. ಜಮೆಯಾಗಿರುವ ಮೊಬೈಲ್‌ಸಂದೇಶ ಕಂಡು ಅವರು ಹೌಹಾರಿದರು. ಅವರ ಖಾತೆಗೆ ಬರೋಬ್ಬರಿ 98,05,95,12,231 ರೂ. ಜಮೆಯಾಗಿತ್ತು. ಇದನ್ನು ಕಂಡು ಬಲವೀಂದರ್‌ವಸ್ತುತಃ ಬೆಚ್ಚಿ ಬಿದ್ದರು !

ಬಲವೀಂದರ್‌ಅವರು ಅಂದೇ ತಮ್ಮ ಬ್ಯಾಂಕ್‌ಶಾಖೆಗೆ ತೆರಳಿ ಅಲ್ಲಿ ತಮ್ಮ ಪಾಸ್‌ಬುಕ್‌ಎಂಟ್ರಿ ಮಾಡಲು ಕೊಟ್ಟರು. ಅವರಿಗೆ ಮರುದಿನ ಬರುವಂತೆ ಹೇಳಲಾಯಿತು.

ಮರುದಿನ ಬ್ಯಾಂಕ್‌ಶಾಖೆಗೆ ಹೋದ ಬಲವೀಂದರ್‌ಗೆ ಹೊಸ ಪಾಸ್‌ಬುಕ್‌ಕೊಡಲಾಯಿತು. ಹೊಸ ಪಾಸ್‌ಬುಕ್‌ಎಂಟ್ರಿ ನೋಡಿದಾಗ ಅವರ ಖಾತೆಯಿಂದ ಅಷ್ಟೂ ಹಣ (9,806 ಕೋಟಿ ರೂ.) ಡೆಬಿಟ್‌ಆಗಿ ಹಳೇ ಬ್ಯಾಲನ್ಸ್‌ಮೊತ್ತವೇ ಖಾತೆಯಲ್ಲಿ ವಿರಾಜಿಸುತ್ತಿತ್ತು. ಬಲವೀಂದರ್‌ಗೆ ಏನು ಹೇಳಬೇಕೆಂದೇ ತೋಚಲಿಲ್ಲ ! ಹಾಗೆ ಬಂದ ಕೋಟ್ಯಂತರ ಸಂಪತ್ತು ಹೀಗೆ ಹೋಯಿತಲ್ಲ ಎಂದು ಒಳಗೊಳಗೇ ರೋದಿಸಿದರು.

ಬಲವೀಂದರ್‌ಅವರ ಖಾತೆಗೆ ಇಷ್ಟೊಂದು ದೊಡ್ಡ ಮೊತ್ತ ಅಛಾನಕ್‌ಆಗಿ ಜಮೆಯಾದದ್ದು ಮತ್ತು ಮರುದಿನವೇ ಅದು ಡೆಬಿಟ್‌ಆದದ್ದು ಹೇಗೆ ಎಂಬ ಬಗ್ಗೆ ಲೀಡ್‌ಬ್ಯಾಂಕ್‌ಮ್ಯಾನೇಜರ್‌ಸಂದೀಪ್‌ಗಾರ್ಗ್‌ಹೇಳುವುದು ಹೀಗೆ : ಬಲವೀಂದರ್‌ಅವರ ಖಾತೆಗೆ 200 ರೂ. ಕ್ರೆಡಿಟ್‌ಎಂಟ್ರಿ ಪಾಸ್‌ಮಾಡುವಾಗ ಅಸಿಸ್ಟೆಂಟ್‌ಮ್ಯಾನೇಜರ್‌(ಅಕೌಂಟ್ಸ್‌) ಅವರು 11 ಅಂಕಿಗಳ ಇಂಟರ್ನಲ್‌ಬ್ಯಾಂಕಿಂಗ್‌ಜನರಲ್‌ಲೆಜ್ಜರ್‌ಖಾತೆಯ ಸಂಖ್ಯೆಯನ್ನೇ ಹಣದ ಮೊತ್ತವಾಗಿ ಬಲವೀಂದರ್‌ಖಾತೆಯಲ್ಲಿ ತಪ್ಪಾಗಿ ತೋರಿಸಿದ್ದರು. ಈ ತಪ್ಪನ್ನು ಮರುದಿನವೇ ತಿಳಿಯಲಾಗಿ ಅದನ್ನು ಒಡನೆಯೇ ಸರಿಪಡಿಸಲಾಯಿತು.

ಜನಧನ್‌ಖಾತೆಗೆ ವಿಪರೀತ ಪ್ರಮಾಣದಲ್ಲಿ ಕಪ್ಪುಹಣ ಜಮೆಯಾಗುತ್ತಿರುವುದನ್ನು ಪರಿಶೀಲಿಸುತ್ತಿದ್ದ ಬರ್ನಾಲಾ, ಸಂಗ್ರೂರ್‌ಮತ್ತು ಪಟಿಯಾಲಾದ ಆದಾಯ ತೆರಿಗೆ ಇಲಾಖಾಧಿಕಾರಿಗಳ ತಂಡವು ಅಂದು ಮಧ್ಯರಾತ್ರಿಯ ವರೆಗೂ ಕುಳಿತು ಕಾರ್ಯನಿರ್ವಹಿಸುತ್ತಿತ್ತು. ಬಲವೀಂದರ್‌ಸಿಂಗ್‌ಅವರ ಜನಧನ್‌ಖಾತೆಗೆ ಇಷ್ಟೊಂದು ದೊಡ್ಡ ಮೊತ್ತ ಜಮೆಯಾದುದು ಹೇಗೆಂಬ ಬಗ್ಗೆ ಅವರೂ ತಲೆ ಕೆಡಿಸಿಕೊಂಡಿದ್ದರು ! ಅಂತಿಮವಾಗಿ ಜಿಲ್ಲಾಧಿಕಾರಿ ಭೂಪಿಂದರ್‌ಸಿಂಗ್‌ರಾಯ್‌ಅವರು ಈ ಪ್ರಕರಣದ ಸತ್ಯಾಂಶವನ್ನು ಮಾಧ್ಯಮಕ್ಕೆ ದೃಢಪಡಿಸಿದರು.

Comments are closed.