
ನೋಟು ನಿಷೇಧ ಪರಿಣಾಮ ಹಲವರಿಗೆ ಹಲವು ರೀತಿ ಯಲ್ಲಿ ತಟ್ಟಿದೆ. ಆದ್ರೆ ಉತ್ತರ ಪ್ರದೇಶದ ಅಲಿಗಢದ ದಿನ ಗೂಲಿ ನೌಕರ ಪುರಾನ್‌ಶರ್ಮಾಗೆ ಹೆಚ್ಚಿಗೇ ತಟ್ಟಿದೆ. ನೋಟು ನಿಷೇಧ ಪರಿಣಾಮ ಸಂತಾನ ಶಕ್ತಿಯೇ ಹೋಗಿದೆ! ಅರೆ ಇದೇನಾಯ್ತು.
ಅಂದ್ಕೊಂಡ್ರಾ? ಹಾಂ! ನೋಟು ನಿಷೇಧ ಪರಿಣಾಮ ಹಣವಿಲ್ಲದೇ ಕಂಗಾಲಾದ ಪುರಾನ್‌ಶರ್ಮಾ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡ್ಕೊಂಡ್ರೆ ಹೊಸ ನೋಟಲ್ಲಿ ಪರಿಹಾರ ಕೊಡ್ತಾರೆ ಅಂತ ಅದನ್ನೇ ಮಾಡಿಸ್ಕೊಂಡಿದ್ದಾಗಿ ಹೇಳಿದ್ದಾರೆ. ಆದರೆ ವೈದ್ಯರು ಇದನ್ನುನಿರಾಕರಿಸಿದ್ದು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಹೆಂಡ್ತಿಯನ್ನು ಕರ್ಕೊಂಡು ಬಂದಿದ್ರೂ, ಅವರು ಕಿವುಡಿ ಮತ್ತು ಮೂಗಿ ಆದ್ರಿಂದ ಶಸ್ತ್ರಚಿಕಿತ್ಸೆ ನಿರಾಕರಿಸಿದ್ದಾಗಿ ಹೇಳಿದ್ದಾರೆ. ಆದರೆ ನೋಟು ನಿಷೇಧ ಬಳಿಕ ತುತ್ತು ಅನ್ನಕ್ಕೂ ಸಮಸ್ಯೆಯಾಗಿದ್ದು, ನಮ್ಮೂರಲ್ಲಿ ಹೀಗೆ ಎಲ್ಲರೂ ಮಾಡಿಸ್ಕೋತಿದ್ದಾರೆ ಅಂತ ಪುರಾನ್‌ಶರ್ಮಾ ಅವರ ತಂದೆ ಹೇಳಿದ್ದಾರೆ.
Comments are closed.