ಪ್ರಮುಖ ವರದಿಗಳು

ನೋಟು ನಿಷೇಧ ಮಾಡುವಂತೆ ಪ್ರಧಾನಿ ಮೋದಿಗೆ ಐಡಿಯಾ ಕೊಟ್ಟಿದ್ದು ಇವರು….!

Pinterest LinkedIn Tumblr

anil

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ.ಗಳ ಕರೆನ್ಸಿ ನೋಟುಗಳನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಂತ ದಿಢೀರನೆ ರದ್ದು ಪಡಿಸುವ ಮೂಲಕದ ದೇಶದ ಆರ್ಥಿಕ ರಂಗದಲ್ಲಿ ಭಾರೀ ದೊಡ್ಡ ಕ್ರಾಂತಿಕಾರಕ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿರುವುದು ವ್ಯಾಪಕ ಸ್ವಾಗತ, ಪ್ರಶಂಸೆಗೆ ಪಾತ್ರವಾಗಿದೆ.

ಆದರೆ 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ದೇಶದ ಆರ್ಥಿಕತೆಯಿಂದ ರದ್ದು ಪಡಿಸುವ ಮೂಲಕ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಭಾರೀ ವಿಜಯವನ್ನು ಸಾಧಿಸಲು ಸಾಧ್ಯ ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟವರು ಔರಂಗಾಬಾದ್‌ ನ ಓರ್ವ ಚಾರ್ಟರ್ಡ್‌ ಅಕೌಂಟೆಂಟ್‌ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಈ ಚಾರ್ಟರ್ಡ್‌ ಅಕೌಂಟೆಂಟ್‌ ಹೆಸರು ಅನಿಲ ಬೋಕಿಲ್‌. ಇವರು ಈಚೆಗೆ ಕೆಲ ಸಮಯದಿಂದ ದೇಶದ ಆರ್ಥಿಕತೆಯಲ್ಲಿ “ಅರ್ಥ ಕ್ರಾಂತಿ’ಯನ್ನು ತರಬೇಕೆಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇವರ ಸಮೂಹವು, 500 ರೂ. ಮತ್ತು 1,000 ರೂ. ನೋಟುಗಳನ್ನು ದೇಶದ ಆರ್ಥ ವ್ಯವಸ್ಥೆಯಿಂದ ರದ್ದು ಪಡಿಸುವಂತೆ 2016ರಿಂದಲೂ ಸರಕಾರವನ್ನು ಆಗ್ರಹಿಸುತ್ತಾ ಬಂದಿದೆ.

ಅನಿಲ್‌ ಬೋಕಿಲ್‌ ಅವರು ತಮ್ಮ ಈ ಕ್ರಾಂತಿಕಾರಕ ಆಲೋಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನದಟ್ಟು ಮಾಡಲು ಮೋದಿಯ ಅಪಾಯಿಂಟ್‌ಮೆಂಟ್‌ಗೆ ಪ್ರಯತ್ನಿಸಿದ್ದರು. ಬೋಕಿಲ್‌ ಅವರಿಗೆ ಮೋದಿ ಕೇವಲ ಎಂಟು ನಿಮಿಷಗಳ ಸಂದರ್ಶನಾವಕಾಶ ನೀಡಿದ್ದರು. ಆದರೆ ಬೋಕಿಲ್‌ ತಮ್ಮ ಕ್ರಾಂತಿಕಾರಕ ಚಿಂತನೆಯನ್ನು ಸಮರ್ಥವಾಗಿ ಮಂಡಿಸುತ್ತಾ ಹೋದಂತೆ ಮೋದಿ, ಬೋಕಿಲ್‌ ಜತೆಗೆ ಎರಡು ತಾಸುಗಳಿಗೂ ಅಧಿಕ ಹೊತ್ತು ಮಾತುಕತೆ, ಚರ್ಚೆ ನಡೆಸಿದರು.

ಅಂತಿಮವಾಗಿ ಪ್ರಧಾನಿ ಮೋದಿ ಅವರು ದೇಶದಲ್ಲಿನ ಹಿಮಾಲಯದಷ್ಟು ಎತ್ತರದ ಗಾತ್ರಕ್ಕೆ ಬೆಳೆದಿರುವ ಭ್ರಷ್ಟಾಚಾರ ಹಾಗೂ ಕಪ್ಪು ಹಣವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅನಿಲ್‌ ಬೋಕಿಲ್‌ ನೀಡಿದ ಕ್ರಾಂತಿಕಾರಕ ಸಲಹೆಯನ್ನು ಬಳಸಿಕೊಂಡು 500 ರೂ. ಮತ್ತು 1,000 ರೂ. ನೋಟುಗಳನ್ನು ರದ್ದು ಪಡಿಸುವ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ದೇಶದ ಆರ್ಥಿಕ ಕ್ಷೇತ್ರದಲ್ಲಿ ಯಶಸ್ವೀ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿಯೇ ಬಿಟ್ಟರು.

Comments are closed.