ಪ್ರಮುಖ ವರದಿಗಳು

ಡಾ.ರಾಜ್‍ಕುಮಾರ್ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡ ಪುತ್ರ-ಪುತ್ರಿಯರು

Pinterest LinkedIn Tumblr

raj

ಚಾಮರಾಜನಗರ: ವರನಟ ಡಾ.ರಾಜ್‍ಕುಮಾರ್ ಆಸ್ತಿ ಇಂದು ಅಧಿಕೃತವಾಗಿ ವಿಭಜನೆಯಾಗಿದೆ. ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಆಸ್ತಿಯನ್ನು ಹಂಚಿಕೊಂಡಿದ್ದಾರೆ.

ಡಾ. ರಾಜ್ ಅವರ ಹುಟ್ಟೂರು ಚಾಮರಾಜನಗರದಲ್ಲಿರುವ ಗಾಜನೂರಿನಲ್ಲಿ ಇವತ್ತು ಇಡೀ ಕುಟುಂಬ ಸೇರಿತ್ತು. ಗಾಜನೂರಿನಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡು ರಿಜಿಸ್ಟರ್ ಮಾಡಿಸಿಕೊಂಡರು.

ತಾಳವಾಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಹಿರಿಯ ಪುತ್ರಿ ಲಕ್ಷ್ಮೀ, ಪೂರ್ಣಿಮಾ ರಾಜ್‍ಕುಮಾರ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಹಾಜರಿದ್ದರು. ಸ್ಟಾರ್ ಕುಟುಂಬ ಸದಸ್ಯರನ್ನು ನೋಡಲು ಗ್ರಾಮಸ್ಥರು ಸೇರಿದ್ದರು.

ಡಾ. ರಾಜ್‍ಕುಮಾರ್ ಹುಟ್ಟೂರಾದ ಗಾಜನೂರಿನಲ್ಲಿ ಕುಟುಂಬಕ್ಕೆ 50 ಎಕರೆಗೂ ಮಿಕ್ಕಿ ಆಸ್ತಿ ಇದ್ದು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಲು ರಾಜ್ ಕುಟುಂಬ ನಿರಾಕರಿಸಿದೆ.

Comments are closed.