ರಾಷ್ಟ್ರೀಯ

ಮೋದಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಚೀನಾ ….ಪಾಕ್ ಪರ ಸಮರ್ಥನೆ

Pinterest LinkedIn Tumblr

ind-china

ಬೀಜಿಂಗ್: ನಿನ್ನೆಯಷ್ಟೇ ಗೋವಾದಲ್ಲಿ ಅಂತ್ಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಉಗ್ರರ ತವರು ಎಂದಿದ್ದರು. ಇದರ ಮಾರನೆ ದಿನವೇ ಪಾಕಿಸ್ತಾನವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಚೀನಾ, ಪಾಕಿಸ್ತಾನದ ಸರ್ವಋತು ಮಿತ್ರನಾಗಿರುವ ಚೀನಾ, ಯಾವುದೇ ದೇಶವನ್ನು ಭಯೋತ್ಪಾದನೆಯೊಂದಿಗೆ ತಳಕು ಹಾಕುವುದಕ್ಕೆ ತನ್ನ ವಿರೋಧವಿದೆ ಎಂದು ಹೇಳಿದೆ.

ಅಲ್ಲದೆ ಉಗ್ರ ನಿಗ್ರಹ ಕಾರ್ಯದಲ್ಲಿ ಪಾಕಿಸ್ತಾನದ “ಮಹಾನ್‌ ತ್ಯಾಗ’ವನ್ನು ವಿಶ್ವ ಸಮುದಾಯ ಗುರುತಿಸಬೇಕು’ ಎಂದು ಕರೆ ನೀಡಿದೆ.

ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ಉಗ್ರ ದೇಶವೆಂದು ಬಿಂಬಿಸಿರುವ ರೀತಿಯ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಅವರು, ಯಾವುದೇ ದೇಶವನ್ನು ಭಯೋತ್ಪಾದನೆಯೊಂದಿಗೆ ತಳಕು ಹಾಕುವುದನ್ನು ಚೀನಾ ವಿರೋಧಿಸುತ್ತದೆ ಎಂದಿದ್ದಾರೆ.

ಪಾಕಿಸ್ತಾನ ಭಾರತ ವಿರೋಧಿ ಉಗ್ರ ಗುಂಪುಗಳಿಗೆ ನೆರವು ಮತ್ತು ಚಿತಾವಣೆ ನೀಡುತ್ತಿದೆ ಎಂಬ ಪ್ರಧಾನಿ ಮೋದಿಯ ಟೀಕೆಯ ಕುರಿತಾದ ಪ್ರಶ್ನೆಗೆ ಉತ್ತರಿ ಚುನ್ಯಿಂಗ್‌, ಉಗ್ರ ನಿಗ್ರಹ ಕುರಿತಾದ ಚೀನಾದ ನಿಲುವು ಸ್ಪಷ್ಟವಾಗಿದೆ ಮತ್ತು ಯಾವುದೇ ದೇಶ ಅಥವಾ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳಕು ಹಾಕುವುದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.

ನಾವು ಎಲ್ಲ ಬಗೆಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ ಮತ್ತು ಎಲ್ಲ ದೇಶಗಳ ಸ್ಥಿರತೆ ಹಾಗೂ ಭದ್ರತೆಗಾಗಿ ಭಯೋತ್ಪಾದನೆ ವಿರುದ್ಧದ ಸಂಘಟಿತ ಅಂತಾರಾಷ್ಟ್ರೀಯ ಹೋರಾಟಗಳಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Comments are closed.