ಪ್ರಮುಖ ವರದಿಗಳು

ಗಿನ್ನೆಸ್ ವಿಶ್ವದಾಖಲೆಗೆ ಸೇರಿದ ಪ್ರಧಾನಿ ಮೋದಿಯವರ ‘ದುಬಾರಿ ಸೂಟ್’ ! ಬರೋಬ್ಬರಿ 4.31 ಕೋಟಿ ರುಪಾಯಿಗೆ ಹರಾಜಾಗಿತ್ತು….

Pinterest LinkedIn Tumblr

modi suit

ನವದೆಹಲಿ: ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ, ಬರೋಬ್ಬರಿ 4.31 ಕೋಟಿ ರುಪಾಯಿಗೆ ಹರಾಜಾಗಿದ್ದ ವಿವಾದಿತ ‘ದುಬಾರಿ ಸೂಟ್’ಇದೀಗ ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ.

‘ನರೇಂದ್ರ ದಾಮೋದರದಾಸ್‌ ಮೋದಿ’ ಎಂಬ ಹೆಸರನ್ನು ಚಿನ್ನದ ಬಣ್ಣದಲ್ಲಿ ಪಟ್ಟಿಯಂತೆ ಹೆಣೆಯಲಾಗಿರುವ ಮೋದಿಯವರ ಸೂಟ್ ಇದೀಗ ವಿಶ್ವದ ಅತ್ಯಂತ ದುಬಾರಿ ಸೂಟ್ ಆಗಿದ್ದು, ಗಿನ್ನೆಸ್ ದಾಖಲೆ ಮಾಡಿದೆ.

10 ಲಕ್ಷ ರೂ. ಮೌಲ್ಯದ್ದು ಎನ್ನಲಾದ ಮೋದಿಯವರ ಸೂಟ್ ಅನ್ನು ಗುಜರಾತಿನ ಸೂರತ್ನ ವಜ್ರದ ವ್ಯಾಪಾರಿ ಲಾಲಜಿಭಾಯಿ ತುಳಸಿಭಾಯಿ ಪಟೇಲ್ ಎಂಬುವರು ಹರಾಜಿನಲ್ಲಿ ಭಾಗವಹಿಸಿದ್ದ 47 ಜನರನ್ನು ಹಿಂದಿಕ್ಕಿ ಸೂಟ್ನ್ನು 4, 31, 31,311 (ನಾಲ್ಕು ಕೋಟಿ ಮೂವತ್ತೊಂದು ಲಕ್ಷದ ಮೂವತ್ತೊಂದು ಸಾವಿರ ಮೂರು ನೂರ ಹನ್ನೊಂದು) ರುಪಾಯಿ ಮೌಲ್ಯಕ್ಕೆ ತಮ್ಮದಾಗಿಸಿಕೊಂಡಿದ್ದರು.

ಮೋದಿ ಈ ಸೂಟ್ ಧರಿಸಿದ ನಂತರ ಪ್ರತಿಪಕ್ಷಗಳಿಂದ ಸೂಟು ಬೂಟು ಸರ್ಕಾರ ಎಂಬ ಟೀಕೆಗೆ ಗುರಿಯಾಗಿದ್ದರು. ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ವಿರಾಣಿ ಅವರು ಈ ಸೂಟನ್ನು ತಮ್ಮ ಮಗಳ ಮದುವೆ ಸಮಾರಂಭದ ವೇಳೆ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.

Comments are closed.