ಪ್ರಮುಖ ವರದಿಗಳು

ಸಾಯಲು ಅನುಮತಿ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದ ದಲಿತ ಐಎಎಸ್ ಅಧಿಕಾರಿ

Pinterest LinkedIn Tumblr

dd

ಭೂಪಾಲ್: ಮಧ್ಯ ಪ್ರದೇಶದಲ್ಲಿ ಅಮಾನತಾದ ಮಹಿಳಾ ಐಎಎಸ್ ಅಧಿಕಾರಿ ಸಾಯಲು ಅನುಮತಿ ಕೋರಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‍ಗೆ ಪತ್ರ ಬರೆದಿದ್ದಾರೆ. ಐಎಎಸ್ ಅಧಿಕಾರಿ ಶಶಿ ಕರ್ನಾವತ್ ಎಂಬುವರು ಸಿಎಂಗೆ ಪತ್ರ ಬರೆದಿದ್ದು, ನಾನು ಹಲವು ಬಾರಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್‍ರನ್ನು ಭೇಟಿಯಾಗಿದ್ದೇನೆ. ಆದರೆ ಭರವಸೆ ಹೊರತಾಗಿ ಬೇರೇನೂ ಪ್ರಯೋಜನವಾಗಿಲ್ಲ. ಹೀಗಾಗಿ ನನಗೆ ಬದುಕಲು ಇಷ್ಟಲ್ಲ. ರಾಜ್ಯ ಸರ್ಕಾರದಿಂದ ನ್ಯಾಯ ಸಿಗುತ್ತೆ ಎಂಬ ಭರವಸೆ ಕೂಡ ಇಲ್ಲ. ಇದಕ್ಕಾಗಿ ನನಗೆ ಸಾಯಲು ಅನುಮತಿ ಕೊಡಿ ಎಂದು ಮನ ಮಾಡಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ದೋಯಾಗಿದ್ದ ದಲಿತ ಐಎಎಸ್ ಅಧಿಕಾರಿ ಶಶಿ ಕರ್ನಾವತ್‍ಗೆ ಮಧ್ಯ ಪ್ರದೇಶದ ಮಾಂಡ್ಲಾ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು 2013ರಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಳಿಕ ಹೈಕೋರ್ಟ್‍ಗೆ ಮೊರೆ ಹೋಗಿ ಜಾಮೀನು ಪಡೆದಿದ್ದರು.

Comments are closed.