
ಟೋಕಿಯೋ: ಹಿಂದೆ ಎಲ್ಲರ ಮನೆಯಲ್ಲಿ ವೀಡಿಯೋ ಕ್ಯಾಸೆಟ್ ಪ್ಲೇಯರ್ (ವಿಸಿಪಿ), ವಿಡಿಯೋ ಕ್ಯಾಸೆಟ್ ರೆಕಾರ್ಡರ್ (ವಿಸಿಆರ್)ಗಳದ್ದೆ ಕಾರುಬಾರು…ಆದರೆ ಕಾಲ ಬದಲಾದಂತೆ ಇವೆಲ್ಲವೂ ಮೂಲೆಗೆ ಸರಿದವು. ಈಗ ಏನಿದ್ದರೂ ಮೈಕ್ರೋ ವರೆಗಿನ ಪ್ಲೇಯರ್ ಗಳದ್ದೇ ಜಮಾನ.
ವಿಸಿಆರ್, ವಿಸಿಪಿ ತಯಾರಿಕೆಯಲ್ಲಿ ಜಪಾನ್ ಕಂಪನಿಗಳದ್ದೇ ಮೇಲುಗೈ. ಅಂಥ ಒಂದು ಕಂಪನಿ ಫ್ಯುನಾನಿ ಎಲೆಕ್ಟ್ರಿಕ್ ಕಂ ಶೀಘ್ರದಲ್ಲೇ ಉತ್ಪಾದನೆ ಸ್ಥಗಿತಗೊಳಿಸಲು ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಎಲ್ಲ ಗ್ರಂಥಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ವಿಡಿಯೋ ಮೂಲಕ ಇರುವ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಬದಲು ಮಾಡಿಸಿಕೊಳ್ಳುತ್ತಿರುವುದರಿಂದ ವಿಸಿಆರ್ಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡುತ್ತೇವೆ. ಶೀಘ್ರದಲ್ಲೇ ವಿಎಚ್ಎಸ್ ಮತ್ತು ಡಿವಿಡಿಗೆ ಕನ್ವರ್ಟ್ ಮಾಡುವ ಬಗೆಗಿನ ಮಾರುಕಟ್ಟೆ ಪ್ರವೇಶಿಸುವುದಾಗಿ ಕಂಪನಿ ವಕ್ತಾರ ತಿಳಿಸಿದ್ದಾರೆ.
ಜಪಾನ್ ಮೂಲದ ಕಂಪನಿಯಾಗಿದ್ದರೂ ಫ್ಯುನಾನಿ ಕಂಪನಿಯ ತಯಾರಿಕ ಘಟಕ ಚೀನಾದಲ್ಲಿದೆ. ೧೯೮೩ರಲ್ಲಿ ಕಂಪನಿ ವಿಸಿಪಿ ತಯಾರಿಕೆ ಆರಂಭಿಸಿದರೆ, ೧೯೮೫ರಲ್ಲಿ ವಿಸಿಆರ್ಗಳ ಉತ್ಪಾದನೆ ಆರಂಭಕ್ಕೆ ಮುನ್ನುಡಿ ಬರೆಯಿತು. ಕಳೆದ ವರ್ಷ ೭೦ ಸಾವಿರ ವಿಎಚ್ಎಸ್ ಯುನಿಟ್ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ೨ ಸಾವಿರನೇ ಇಸ್ವಿಯಲ್ಲಿ ಅದು ೧೫ ದಶಲಕ್ಷ ಯುನಿಟ್ಗಳನ್ನು ಸಿದ್ಧಪಡಿಸಿತ್ತು. ಆ ಪೈಕಿ ಶೇ.೭೦ರಷ್ಟು ಅಮೆರಿಕದಲ್ಲೇ ಬಳಕೆಯಾಗಿತ್ತು. ಪ್ಯಾನಾಸೋನಿಕ್ ಕಾರ್ಪೋರೇಷನ್ ವಿಸಿಆರ್ ಮಾರುಕಟ್ಟೆಯಿಂದ ಹಿಂದಕ್ಕೆ ಸರಿದ ಬಳಿಕ ಫ್ಯುನಾನಿಯೇ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ಹೊಸ ಮಾದರಿ ಬರುವ ವರೆಗೆ ಕಂಪನಿ ತನ್ನ ಸಹವರ್ತಿ ಘಟಕಗಳ ವರಗೆ ವಿಸಿಆರ್ ಅನ್ನು ಮಾರಾಟ ಮಾಡುವುದರ ಜತೆಗೆ ದುರಸ್ತಿ ಮತ್ತು ಇತರ ಸೇವೆಯನ್ನು ಸಾಧ್ಯ ಇರುವ ವರೆಗೆ ನೀಡುವುದಾಗಿ ಕಂಪನಿ ವಕ್ತಾರ ತಿಳಿಸಿದ್ದಾರೆ.
Comments are closed.