ಅಂತರಾಷ್ಟ್ರೀಯ

ಮದುವೆಯಾದ ಬಳಿಕ ನವದಂಪತಿಗಳು ಇದನ್ನು ತಪ್ಪದೆ ಮಾಡಿ….!

Pinterest LinkedIn Tumblr

Colorful Hindu wedding in India

ಸಂಪ್ರದಾಯಗಳನೆಲ್ಲಾ ನಿಭಾಯಿಸಿ ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಬಳಿಕ ನವ ದಂಪತಿಗಳಿಗೆ ಕೆಲವೊಂದು ಮಹತ್ವದ ಜವಾಬ್ದಾರಿಗಳಿರುತ್ತವೆ. ವೆಡಿಂಗ್ ಪ್ಲಾನ್ ಕುರಿತಾಗಿ ಮದುವೆಯ ಮೊದಲೇ ನಾವು ತಯಾರಿ ಮಾಡಿಕೊಂಡಿರುತ್ತೇವೆ. ಆದರೆ ಮದುವೆಯ ಸಂಭ್ರಮಾಚರಣೆಯ ಬಳಿಕವೂ ನಿಭಾಯಿಸಲೇಬೇಕಾದ ಕೆಲವು ಕಾರ್ಯಗಳಿರುತ್ತವೆ. ನವದಂಪತಿಗಳು ಮದುವೆಯ ಬಳಿಕ ಪೂರೈಸಲೇಬೇಕಾದ ಕೆಲಸಗಳ ಪಟ್ಟಿ ಇಂತಿದೆ.

ಗೆಳೆಯರು ಹಾಗೂ ಸಂಭಂದಿಕರಿಗೆ ತಪ್ಪದೇ ಧನ್ಯವಾದ ತಿಳಿಸಿ:
ನಿಮ್ಮ ಜೀವನದ ಅತಿ ಅಮೂಲ್ಯ ದಿನ, ನಿಮ್ಮ ಮದುವೆ ತೊಡಕಿಲ್ಲದೇ ನೆರವೇರುವಲ್ಲಿ ನಿಮ್ಮ ಮಿತ್ರರು ಹಾಗೂ ಸಂಭಂದಿಕರ ಪಾತ್ರ ಬಹಳಷ್ಟಿರುತ್ತದೆ. ಹೀಗಾಗಿ ಅವರೆಲ್ಲರಿಗೂ ಧನ್ಯವಾದ ಸಲ್ಲಿಸುವುದು ಅತಿ ಅಗತ್ಯ. ಇದರಿಂದ ಅವರಿಗೂ ಮಹತ್ವ ನೀಡಿದ್ದೀರೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಧನ್ಯವಾದ ತಿಳಿಸಲು ಸಣ್ಣದೊಂದು ಲಾಕೆಟ್ ಇಲ್ಲವೇ ಸಿಹಿ ತಿಂಡಿಯನ್ನೂ ನೀಡಬಹುದು. ಇದರಿಂದ ಅವರೂ ನಿಮ್ಮನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಮದುವೆಯ ಉಡುಪುಗಳನ್ನು ಶುಭ್ರಗೊಳಿಸಿ ಜೋಪಾನವಾಗಿಡಿ:
ಮದುವೆಯ ದಿನ ಧರಿಸಿದ ಉಡುಪು ದಂಪತಿಯ ಜೀವನದಲ್ಲಿ ಅತಿ ಮಹತ್ವದ್ದಾಗಿರುತ್ತದೆ. ಹೀಗಾಗಿ ಮದುವೆಯಂದು ಧರಿಸಿದ ವಸ್ತ್ರಗಳನ್ನು ಚೆನ್ನಾಗಿ ತೊಳೆದು ಸುರಕ್ಷಿತವಾಗಿಡಿ.

ಹನಿಮೂನ್’ಗೆ ತಯಾರಿ ಮಾಡಿ:
ಮದುವೆಯ ಬಳಿಕ ಹನಿಮೂನ್ ಕೂಡಾ ಪ್ರಮುಖವಾದದ್ದು. ಹನಿಮೂನ್’ಗೆ ತೆರಳುವಾಗ ಸಾಕಷ್ಟು ತಯಾರಿ ನಡೆಸಿ ತೆರಳಿ. ವಿದೇಶಕ್ಕೆ ತೆರಳುವುದಾದರೆ ಮೊದಲೇ ವೀಸಾ, ಪಾಸ್’ಪೋರ್ಟ್ ಮೊದಲಾದ ಅಗತ್ಯ ದಾಖಲೆಗಳನ್ನು ಮೊದಲೇ ತೆಗೆದಿಟ್ಟುಕೊಳ್ಳಿ.

ಮದುವೆಯ ಆಲ್ಬಂ ಸಾಧ್ಯವಾದಷ್ಟು ಬೇಗ ತರಿಸಿಕೊಳ್ಳಿ:
ನಿಮ್ಮ ಮದುವೆಯ ದಿನ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಿರಬಹುದು. ಆದರೆ ಇವುಗಳಲ್ಲಿ ಕೆಲವು ಫೋಟೋಗಳು ಭಿನ್ನ, ಹಾಗೂ ಮಹತ್ವದ್ದಾಗಿದ್ದು, ಸದಾ ಕಾಲವೂ ನೋಡಲು ಪ್ರೇರೇಪಿಸುವಂತಿರುತ್ತವೆ. ಹೀಗಾಗಿ ಬಿಡುವು ಮಾಡಿಕೊಂಡು ಫೋಟೋಗಳ ರಾಶಿಯಿಂದ ಇಂತಹ ಕೆಲವು ಫೋಟೋಗಳನ್ನು ಆಯ್ಕೆ ಮಾಡಲು ಮರೆಯದಿರಿ.

ಕಾನೂನಾತ್ಮಕವಾಗಿ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಿ:
ಮದುವೆಯ ಬಳಿಕ ನೀವು ನಿಮ್ಮ ಹೆಸರನ್ನು ಬದಲಾಯಿಸಲು ಇಚ್ಛಿಸುತ್ತೀರಾದರೆ, ಮ್ಯಾರೇಜ್ ಸರ್ಟಿಫಿಕೇಟ್ ಮಾಡಲು ಇದು ಉತ್ತಮ ಸಮಯ. ಈ ಸರ್ಟಿಫಿಕೇಟ್’ನ್ನು ಸಾಧ್ಯವಾದಷ್ಟು ಬೇಗ ಮಾಡಿಸಿಕೊಂಡು ನಿಮ್ಮ ಪಾಸ್’ಪೋರ್ಟ್, ವೋಟರ್ ಐಡಿ ಹಾಗೂ ಇನ್ನಿತರ ದಾಖಲೆಗಳಲ್ಲಿರುವ ಹೆಸರನ್ನು ಬದಲಾಯಿಸಿಕೊಳ್ಳಬಹುದು.

ಇವೆಲ್ಲದರ ಬಳಿಕ ಪರಿಶ್ರಮದಿಂದ ಕೂಡಿದ ವೆಡಿಂಗ್ ಪ್ಲಾನಿಂಗ್ ಕೊನೆಗೊಳ್ಳುತ್ತದೆ ಹಾಗೂ ನೀವೂ ರಿಲ್ಯಾಕ್ಸ್ ಆಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.

Comments are closed.