ಅಂತರಾಷ್ಟ್ರೀಯ

ಲವ್ ಫೇಲ್ಯೂರ್ ಆದ ಬಳಿಕ ಹುಡುಗ-ಹುಡುಗಿ ಮನಃಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರಿಯಬೇಕೆ… ಈ ಇಂಟರೆಸ್ಟಿಂಗ್ ವಿಚಾರ ಓದಿ…

Pinterest LinkedIn Tumblr

love

ನ್ಯೂಯಾರ್ಕ್: ಹುಡುಗ ಮತ್ತು ಹುಡುಗಿ ಇಬ್ಬರೂ ಮನುಷ್ಯರೇ ಆದರೂ ವಿವಿಧ ವಿಚಾರಗಳಲ್ಲಿ ಇಬ್ಬರ ಆಲೋಚನಾ ಮನಃಸ್ಥಿತಿ ತುಸು ವಿಭಿನ್ನವಾಗಿರುತ್ತದೆ ಎಂಬ ಮಾತಿದೆ.

ಲವ್ ವಿಚಾರದಲ್ಲೂ ಇದು ಅನ್ವಯವಾಗುತ್ತದೆ. ಲವ್ ವೈಫಲ್ಯವಾದಾಗ ಹುಡುಗ ಮತ್ತು ಹುಡುಗಿ ಇಬ್ಬರೂ ದುಃಖತಪ್ತರಾಗುವುದು ನಿಜ. ಆದರೆ, ಲವ್ ಬ್ರೇಕಪ್’ನಿಂದ ಕಲಿತ ಪಾಠವನ್ನು ಹುಡುಗಿ ಮರೆಯುವುದಿಲ್ಲ. ತನ್ನ ಮುಂದಿನ ಅಫೇರ್’ನಲ್ಲಿ ಇನ್ನಷ್ಟು ಹುಷಾರಾಗುತ್ತಾಳೆ.

ಮಾನಸಿಕವಾಗಿ ಹೆಚ್ಚು ಸುದೃಢವಾಗಿರುತ್ತಾಳೆ. ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ ನಿಭಾಯಿಸಲು ಕಲಿಯುತ್ತಾಳೆ. ಹೊಸ ಬಾಯ್’ಫ್ರೆಂಡ್ ತನಗೆ ಕೈಕೊಡುವ ಚಾನ್ಸನ್ ಎಷ್ಟಿದೆ ಎಂಬುದನ್ನು ಸರಿಯಾಗಿ ಅರಿತುಕೊಳ್ಳಲು ಯತ್ನಿಸುತ್ತಾಳೆ. ಹೊಸ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಈ ವಿಚಾರವನ್ನು ಆಕೆ ಕೂಲಂಕಷವಾಗಿ ಪರಿಶೀಲಿಸುತ್ತಾಳೆ. ಹೀಗಾಗಿ, ಆಕೆಯ ಮುಂದಿನ ಅಫೇರ್ ಹೆಚ್ಚು ದೀರ್ಘಕಾಲ ಉಳಿಯಬಲ್ಲುದು. ಇನ್ನೊಂದೆಡೆ, ಹುಡುಗರು ತಮ್ಮ ಹಿಂದಿನ ಲವ್ ವೈಫಲ್ಯದ ಪಾಠವನ್ನು ಕಲಿಯುವಲ್ಲಿ ಹಿಂದುಳಿಯುತ್ತಾರಂತೆ.

ಇಂಗ್ಲೆಂಡ್ ದೇಶದ ಬಿಂಗಾಂಟನ್ ಯೂನಿವರ್ಸಿಟಿ ಹಾಗೂ ಲಂಡನ್ ಯೂನಿವರ್ಸಿಟಿ ಕಾಲೇಜ್’ನ ತಂಡವೊಂದು ಈ ವಿಚಾರವನ್ನು ಅಧ್ಯಯನ ಮಾಡಿದೆ. ಆನ್’ಲೈನ್’ನಲ್ಲಿ 96 ದೇಶಗಳ 5 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಿದೆ.

Comments are closed.