ಕರಾವಳಿ

60 ದಿನ ಅಧಿವೇಶನ ನಡೆಯದೇ 14 ವರ್ಷ ಆಯಿತು…ವಿವಿಧ ಕಾರಣಗಳಿಗೆ ಬಲಿಯಾಗುತ್ತಿದೆ ಅಧಿವೇಶನ….

Pinterest LinkedIn Tumblr

The repairing and polishing work is going on at Legislative Assembly hall, at Vidhana Soudha in Bangalore on Sunday. The Assembly sessions giong to began on Monday. -Photo/ VS

ಬೆಂಗಳೂರು: ಕಳೆದ 14 ವರ್ಷಗಳಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ 60 ದಿನಗಳ ಕಾಲ ನಡೆದಿಲ್ಲ. ವಾರ್ಷಿಕ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೂ ಕೂಡ ಇದುವರೆಗೂ ನಡೆಯಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೂಡ ಒಂದು ವರ್ಷವೂ ಇಷ್ಟು ಪ್ರಮಾಣದಲ್ಲಿ ಅಧಿವೇಶನ ನಡೆದ ನಿದರ್ಶನಗಳಿಲ್ಲ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷರಾಗಿದ್ದಾಗಲೂ ಮಾಡಿದ ಪ್ರಯತ್ನ 60ದಿನ ಅಧಿವೇಶನ ನಡೆಯಲು ಸಾಧ್ಯವಾಗಲಿಲ್ಲ. ಈ ಸಂಬಂದ ಕಳೆದ 2005ರಲ್ಲಿ ಕಾಯ್ದೆ ಜಾರಿಗೆ ತರಲಾಗಿದೆ . ಆದರೂ ಮೇಲೆ ಒಮ್ಮೆಯೂ ನಡೆದ ನಿದರ್ಶನವಿಲ್ಲ.ಈ ವರ್ಷವೂ ಅಧಿವೇಶನ 60 ದಿನ ನಡೆಯುವ ಲಕ್ಷಣಗಳಿಲ್ಲ.

ಈ ವರ್ಷ ಇದುವರೆಗೂ ಮೂರು ಅಧಿವೇಶನಗಳು ನಡೆದಿವೆ. ಇದುವರೆಗೂ ಕೇವಲ 23ದಿನ ಮಾತ್ರ. ಫೆ.29ರಿಂದ ಮಾರ್ಚ್ 5ರವರೆಗೆ ಆರು ದಿನಗಳ ಕಾಲ ಈ ವರ್ಷದ ಮೊದಲ ಜಂಟಿ ಅಧಿವೇಶನ ನಡೆಯಿತು. ಬಳಿಕ ಮಾರ್ಚ್ 18ರಿಂದ 31ರವರೆಗೆ 9 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಿತು. ಬಜೆಟ್‍ನ ಮುಂದುವರೆದ ಅಧಿವೇಶನವಾದ ಮಳೆಗಾಲದ ಅಧಿವೇಶನ 19 ದಿನಗಳ ಕಾಲ ನಿಗದಿಯಾಗಿತ್ತಾದರೂ ಮಂಗಳೂರು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಪ್ರತಿಧ್ವನಿಸಿ ಇಡೀ ಅಧಿವೇಶನದ ಕಲಾಪ ಬಲಿಯಾಯಿತು.

ಮೊದಲ ಎರಡು ದಿನ ಬಿಡಿಎ ಬದಲಿ ನಿವೇಶನದ ಪ್ರಕರಣ ಪ್ರಸ್ತಾಪಗೊಂಡರೆ, ಮತ್ತೆರಡು ದಿನ ಗಣಪತಿ ಆತ್ಮಹತ್ಯೆ ಪ್ರಕರಣದ ಪ್ರತಿಧ್ವನಿಸಿ ಗಂಭೀರ ಚರ್ಚೆಯೂ ಆಯಿತು. ರೈತರ ಆತ್ಮಹತ್ಯೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಬರ, ನೆರೆಹಾವಳಿ ಸೇರಿದಂತೆ ಯಾವುದೇ ಜ್ವಲಂತ ಸಮಸ್ಯೆಯ ಚರ್ಚೆಗೂ ಅವಕಾಶ ಸಿಗಲಿಲ್ಲ. ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆಗೆ ಬಿಜೆಪಿ, ಜೆಡಿಎಸ ಪಟ್ಟು ಹಿಡಿದು ಆಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ಮಣಿಯಲಿಲ್ಲ, ಇದರಿಂದ ಬಿಕ್ಕಟ್ಟು ಉಲ್ಬಣಗೊಂಡ ನಾಲ್ಕು ದಿನ ಧರಣಿಯೇ ನಡೆಯಿತು. ಉಳಿದ 11ಅಧಿವೇಶನ ನಡೆಯದಂತಾಯಿತು. ಇನ್ನು ಚಳಿಗಾಲದ ಅಧಿವೇಶನ ನಡೆಯಬೇಕಿದೆ. ಇದುವರೆಗೂ ನವೆಂಬರ್, ಡಿಸೆಂಬರ್‍ನಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಸರಾಸರಿ 10 ದಿನ ಮಾತ್ರ ನಡೆದಿದೆ.

ಇನ್ನೂ 37 ದಿನ ಅಧಿವೇಶನ ನಡೆದರೆ ಮಾತ್ರ ವಾರ್ಷಿಕ 60 ದಿನ ಅಧಿವೇಶನ ನಡೆದ ಗುರಿ ತಲುಪ ಬಹುದಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ಲಕ್ಷಣಗಳು ವಿರಳ. ಕಳೆದ 2008ರಲ್ಲಿ 17ದಿನ, 2009ರಲ್ಲಿ 42 ದಿನ, 2010ಹಾಗೂ 2011ರಲ್ಲಿ 31ದಿನ , 2012ರಲ್ಲಿ 57 ದಿನ ಅಧಿವೇಶನ ನಡೆದಿದೆ. 2013 ಬಿಜೆಪಿ ಸರ್ಕಾರ ನಿರ್ಗಮಿಸಿದ ಹಾಗೂ ಕಾಂಗ್ರೆಸ್ ಸರ್ಕಾರ ಆಗಮಿಸಿದ ವರ್ಷವಾಗಿ ಎರಡು ಬಾರಿ ಬಜೆಟ್ ಮಂಡನೆಯಾದರೂ ಅಧಿವೇಶನ ನಡೆದಿರುವುದು ಕೇವಲ 47 ದಿನ ಮಾತ್ರ. ಕಳೆದ 2014ರಲ್ಲಿ 53 ದಿನ ಹಾಗೂ 2015ರಲ್ಲಿ 58 ದಿನ ಮಾತ್ರ ಅಧಿವೇಶನ ನಡೆದಿದೆ. ಈ ವರ್ಷ ಇದುವರೆಗೆ ಕೇಲ 23 ದಿನ ಮಾತ್ರ ಅಧಿವೇಶನ ನಡೆದಿದೆ.

Comments are closed.