ಪ್ರಮುಖ ವರದಿಗಳು

ಬಿಯರ್‌ ಕ್ಯಾನ್‌ ಮೇಲೆ ಗಾಂಧಿ ಚಿತ್ರ: ಕಂಪೆನಿ ಕ್ಷಮೆ

Pinterest LinkedIn Tumblr

bear

ಹೈದರಾಬಾದ್/ವಾಷಿಂಗ್ಟನ್: ಬಿಯರ್‌ ಬಾಟಲಿ ಹಾಗೂ ಕ್ಯಾನ್‌ಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರ ಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಕಂಪನಿ ಕ್ಷಮೆ ಕೋರಿದೆ.

ಮಹಾತ್ಮಗಾಂಧಿಗೆ ಕಂಪೆನಿಯು ಅಪ­ಮಾನ ಮಾಡಿದೆ ಎಂದು ಆರೋಪಿಸಿ ಹೈದರಾಬಾದ್‌ನ ಮೆಟ್ರೊಪಾಲಿಟನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣ ವಿಚಾರಣೆಗೆ  ಬರುವ ಮುನ್ನವೇ ಕಂಪೆನಿ ಕ್ಷಮೆ ಕೋರಿದೆ.

ಕನೆಕ್ಟಿಕಟ್‌ ಮೂಲದ ಇಂಗ್ಲೆಂಡ್‌ ಬ್ರಿವಿಂಗ್‌ ಕಂಪೆನಿ ಉದ್ದೇಶಪೂರ್ವ­ವಾ­ಗಿಯೇ ಗಾಂಧಿಗೆ ಅಪಮಾನ ಮಾಡಿದೆ ಎಂದು ಗಾಂಧಿ ಅವರ ಮೊಮ್ಮಗ ಈಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕಂಪೆನಿ ಹೊರ ತಂದಿರುವ ಬೀಯರ್‌ ಕ್ಯಾನ್‌ಗೆ ‘ಗಾಂಧಿ ಬಾಟ್‌’ ಎಂದು ಹೆಸರು ಇಡಲಾಗಿದ್ದು, ಇದು ಆಕ್ಷೇ­ಪರ್ಹಾ ಎಂದು ವಕೀಲ ಶುಂಕಾರಿ ಜನಾರ್ದನ್‌ ಗೌಡ ಅವರು 11ನೇ ಮೆಟ್ರೊಪಾಲಿಟನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ನ್ಯಾಯಾಧೀಶರು ಈ ಪ್ರಕ­ರಣವನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಿದ್ದರು.

ಪ್ರಕರಣದ ಗಂಭೀರತೆ ಅರಿತ ಕಂಪೆ­ನಿಯು ಭಾರತೀಯರ ಮನಸ್ಸಿಗೆ ಇದ­ರಿಂದ ನೋವು ಉಂಟಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕಾಗಿ ಕ್ಷಮೆ ಕೋರುತ್ತೇವೆ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿದ ಕಂಪೆ­ನಿಯ ಪಾಲುದಾರ ಮ್ಯಾಟ್‌ ವೆಸ್ಟ್‌­ಪಾಲ್‌ ಅವರು, ಗಾಂಧಿ ಹಾಗೂ ಭಾರ­ತದ ಬಗ್ಗೆ ಅಪಾರ ಗೌರವ ಇದೆ. ನಮ್ಮ ಹೋಟೆಲ್‌ನಲ್ಲಿ ಸಸ್ಯಹಾರದ ಖಾದ್ಯ­ಗಳು ಹೆಚ್ಚಿನ ಪ್ರಮಾಣದಲ್ಲಿ ತಯಾ­ರಾಗುತ್ತವೆ. ಈ ಲೇಬಲ್‌ ತೆರವು­ಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

Write A Comment