ಪ್ರಮುಖ ವರದಿಗಳು

ಎರಡನೆ ಟೆಸ್ಟ್‌ನ ಎರಡನೆ ದಿನ: ಕುಸಿದ ಆಸೀಸ್‌ಗೆ ನಾಯಕ ಸ್ಮಿತ್ ಆಸರೆ: ಹೇಝ್ಲಿವುಡ್‌ಗೆ 5 ವಿಕೆಟ್; ಭಾರತ ಆಲೌಟ್ 408

Pinterest LinkedIn Tumblr

SMI_ಬ್ರಿಸ್ಬೇನ್, ಡಿ.18: ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡ ವೇಗಿ ಉಮೇಶ್ ಯಾದವ್ ದಾಳಿಗೆ ಸಿಲುಕಿ ಅಗ್ರ ಸರದಿಯ ವಿಕೆಟ್‌ಗಳನ್ನು ಕೈಚೆಲ್ಲಿದರೂ ನಾಯಕ ಸ್ಟೀವನ್ ಸ್ಮಿತ್ ತಂಡವನ್ನು ಆಧರಿಸಿದ್ದಾರೆ.

ಎರಡನೆ ಟೆಸ್ಟ್‌ನ ಎರಡನೆ ದಿನ ಆಟ ನಿಂತಾಗ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 52 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 221 ರನ್ ಗಳಿಸಿದೆ. ಉಮೇಶ್ ಯಾದವ್ 48ಕ್ಕೆ 3 ವಿಕೆಟ್ ಉರುಳಿಸಿ ಆಸ್ಟ್ರೇಲಿಯಕ್ಕೆ ತಲೆನೋವುಂಟು ಮಾಡಿದ್ದಾರೆ.

ನಾಯಕ ಸ್ಮಿತ್ ಔಟಾಗದೆ 65 (88ಎ, 6ಬೌ, 2ಸಿ) ಮತ್ತು ಮಿಚೆಲ್ ಮಾರ್ಷ್ ಔಟಾಗದೆ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ 408 ರನ್‌ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯ ಇನಿಂಗ್ಸ್ ಆರಂಭಿಸಿ 47 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಉರುಳಿತ್ತು. ಕಳೆದ ಟೆಸ್ಟ್ ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ್ದಡೇವಿಡ್ ವಾರ್ನರ್(29) ಎರಡಂಕೆಯ ಸ್ಕೋರ್ ದಾಖಲಿಸಿ ಪೆವಿಲಿಯನ್ ಸೇರಿದರು. ವೇಗಿ ಉಮೇಶ್ ಯಾದವ್ ವಾರ್ನರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು

ರೋಜರ್ಸ್‌ ಅರ್ಧಶತಕ:   ಶೇನ್ ವ್ಯಾಟ್ಸನ್ ಮತ್ತೊಮ್ಮೆ ವಿಫಲವಾದರು. ವರುಣ್ ಆ್ಯರೊನ್ ಬೌಲಿಂಗ್‌ನಲ್ಲಿ ಯಶಸ್ಸು ಕಂಡು ಬರದೆ ಇದ್ದಾಗ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರನ್ನು ದಾಳಿಗಿಳಿಸಿದರು. ವ್ಯಾಟ್ಸನ್ 19.4ನೆ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡಿದರು. ಆರಂಭಿಕ ದಾಂಡಿಗ ಕ್ರಿಸ್ ರೋಜರ್ಸ್‌ 79 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 55 ರನ್ ಗಳಿಸಿದರು. ಚೆನ್ನಾಗಿ ಆಡುತ್ತಿದ್ದ ರೋಜರ್ಸ್‌ 25.4ನೆ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು.

121 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಕ್ಕೆ ನೆರವು ನೀಡಿದ ನೂತನ ನಾಯಕ ಸ್ಮಿತ್ ಮತ್ತು ಶಾನ್ ಮಾರ್ಷ್ 87 ರನ್‌ಗಳ ಜೊತೆಯಾಟ ನೀಡಿದರು. ಮಾರ್ಷ್ 32 ರನ್ ಗಳಿಸಿದ್ದಾಗ ಅಜಿಂಕ್ಯ ರಹಾನೆ ಅವರಿಂದ ಜೀವದಾನ ಪಡೆದರು. ಆದರೆ ಉಮೇಶ್ ಯಾದವ್ ಅದೇ ಸ್ಕೋರ್‌ಗೆ ಮಾರ್ಷ್‌ಗೆ ಘಾತ ನೀಡಿದರು. ಆದರೆ ನಾಯಕ ಸ್ಮಿತ್‌ಗೆ ಮಿಚೆಲ್ ಮಾರ್ಷ್ ಜೊತೆಯಾಗಿ ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು.

ಹೇಝ್ಲವುಡ್    ಯಶಸ್ಸು: ಮೊದಲ ದಿನ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟದಲ್ಲಿ 311 ರನ್ ಮಾಡಿದ್ದ ಭಾರತ ತಂಡ ಗುರುವಾರ ಎರಡನೆ ದಿನದಾಟ ಮುಂದುವರಿಸಿ ಈ ಮೊತ್ತಕ್ಕೆ 97 ರನ್ ಸೇರಿಸಿತು. ಜೋಶ್ ಹೇಝ್ಲೆವುಡ್ ಭಾರತದ ದೊಡ್ಡ ಮೊತ್ತ ದಾಖಲಿಸುವ ಪ್ರಯತ್ನವನ್ನು ವಿಫಲಗೊಳಿಸಿದರು. ಅಜಿಂಕ್ಯ ರಹಾನೆ 81 ರನ್ ಗಳಿಸುವ ಮೂಲಕ ಮತ್ತೊಮ್ಮೆ ಶತಕದ ಅಂಚಿನಲ್ಲಿ ಎಡವಿದರು. ಹೇಝ್ಲೆವುಡ್ ಅವರ ಶತಕದ ಕನಸಿಗೆ ಅಡ್ಡಿಪಡಿಸಿದರು. ರೋಹಿತ್ ಶರ್ಮ 32 ರನ್‌ಗಳ ಕೊಡುಗೆ ನೀಡಿ ನಿರ್ಗಮಿಸಿದರು.

ಐದನೆ ವಿಕೆಟ್‌ಗೆ ನಾಯಕ ಧೋನಿ ಮತ್ತು ರವಿಚಂದ್ರನ್ ಅಶ್ವಿನ್ 57 ರನ್‌ಗಳ ಕೊಡುಗೆ ನೀಡಿದರು. ಧೋನಿ 33 ರನ್ ಮತ್ತು ಅಶ್ವಿನ್ 35 ರನ್ ಗಳಿಸಿ ಹೇಝ್ಲಿವುಡ್ ಗೆ ವಿಕೆಟ್ ಒಪ್ಪಿಸಿದರು.

ಉಮೇಶ್ ಯಾದವ್(9), ವರುಣ್ ಆ್ಯರೊನ್(4) ಮತ್ತು ಇಶಾಂತ್ ಶರ್ಮ (ಔಟಾಗದೆ 1) ತಂಡದ ಸ್ಕೋರ್‌ನ್ನು 400ರ ಗಡಿ ದಾಟುವಲ್ಲಿ ನೆರವಾದರು.

ಚೊಚ್ಚಲ ಟೆಸ್ಟ್ ಪಂದ್ಯವನ್ನಾಡು ತ್ತಿರುವ ಆಸ್ಟ್ರೇಲಿಯದ ಮಧ್ಯಮ ವೇಗದ ಬೌಲರ್ ಹೇಝ್ಲಿವುಡ್ 68ಕ್ಕೆ 5 ಮತ್ತು ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದ ನಥನ್ ಲಿನ್ 105ಕ್ಕೆ 3 ವಿಕೆಟ್ ಪಡೆದು ಮತ್ತೊಮ್ಮೆ ಮಿಂಚಿದರು.

ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್109.4 ಓವರ್‌ಗಳಲ್ಲಿ ಆಲೌಟ್ 408
ಮುರಳಿ ವಿಜಯ್ ಸಿ ಹಡಿನ್ ಬಿ ಲಿನ್ 144, ಶಿಖರ್ ಧವನ್ ಸಿ ಹಡಿನ್ ಬಿ ಮಿಚೆಲ್ ಮಾರ್ಷ್ 24, ಚೇತೇಶ್ವರ ಪೂಜಾರ ಸಿ ಹಡಿನ್ ಬಿ ಹೇಝ್ಲವುಡ್ 18, ವಿರಾಟ್ ಕೊಹ್ಲಿ ಸಿ ಹಡಿನ್ ಬಿ ಹೇಝ್ಲಿವುಡ್ 19, ಅಜಿಂಕ್ಯ ರಹಾನೆ ಸಿ ಹಡಿನ್ ಬಿ ಹೇಝ್ಲಿವುಡ್ 81, ರೋಹಿತ್ ಶರ್ಮ ಸಿ ಸ್ಮಿತ್ ಬಿ ವ್ಯಾಟ್ಸನ್ 32, ಎಂಎಸ್ ಧೋನಿ ಸಿ ಹಡಿನ್ ಬಿ ಹೇಝ್ಲಾವುಡ್ 33, ಆರ್.ಅಶ್ವಿನ್ ಸಿ ವ್ಯಾಟ್ಸನ್ ಬಿ ಹೇಝ್ಲಾ ವುಡ್ 35, ಉಮೇಶ್ ಯಾದವ್ ಸಿ ರೋಜರ್ಸ್‌ ಬಿ ಲಿನ್ 9, ವರುಣ್ ಆ್ಯರೊನ್ ಬಿ ಲಿನ್4, ಇಶಾಂತ್ ಶರ್ಮ ಔಟಾಗದೆ 1, ಇತರೆ 8. ವಿಕೆಟ್ ಪತನ: 1-56, 2-100, 3-137, 4-261, 5-321, 6-328, 7-385, 8-394, 9-407, 10-408.

ಬೌಲಿಂಗ್:       ಜಾನ್ಸನ್ 21-4-81-0, ಹೇಝ್ಲವುಡ್ 23.5-6-68-5, ಸ್ಟಾರ್ಕ್ 17-1-83-0, ಮಿಚೆಲ್ ಮಾರ್ಷ್ 6-1-14-1, ಲಿನ್ 25.4-2-105-3, ವ್ಯಾಟ್ಸನ್ 14.4-6-39-1, ವಾರ್ನರ್ 1-0-9-0, ಸ್ಮಿತ್ 1-0-4-0.

ಆಸ್ಟ್ರೇಲಿಯ ಮೊದಲ ಇನಿಂಗ್ಸ್ 52 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್
ಕ್ರಿಸ್ ರೋಜರ್ಸ್‌ ಸಿ ಧೋನಿ ಬಿ ಯಾದವ್ 55, ಡೇವಿಡ್ ವಾರ್ನರ್ ಸಿ ಅಶ್ವಿನ್ ಬಿ ಯಾದವ್ 29, ಶೇನ್ ವ್ಯಾಟ್ಸನ್ ಸಿ ಧವನ್ ಬಿ ಅಶ್ವಿನ್ 25, ಸ್ಟೀವನ್ ಸ್ಮಿತ್ ಔಟಾಗದೆ 65, ಶಾನ್ ಮಾರ್ಷ್ ಸಿ ಅಶ್ವಿನ್ ಬಿ ಯಾದವ್ 32, ಮಿಚೆಲ್ ಮಾರ್ಷ್ ಔಟಾಗದೆ 7, ಇತರೆ 8.
ವಿಕೆಟ್ ಪತನ: 1-47, 2-98, 3-121, 4-208.
ಬೌಲಿಂಗ್ ವಿವರ: ಇಶಾಂತ್ ಶರ್ಮ 9-0-47-0, ವರುಣ್ ಆ್ಯರೊನ್ 12-1-59-0, ಉಮೇಶ್ ಯಾದವ್ 13-2-48-3, ಆರ್.ಅಶ್ವಿನ್ 18-3-66-1.

ಎರಡನೆ ದಿನದ ಹೈಲೈಟ್ಸ್
5:   ಆಸ್ಟ್ರೇಲಿಯದ ಮಧ್ಯಮ ವೇಗಿ ಜೋಶ್ ಹೇಝ್ಲವುಡ್ ಚೊಚ್ಚಲ ಪ್ರವೇಶದಲ್ಲೇ ಟೆಸ್ಟ್‌ನಲ್ಲಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಹಝ್ಲೆವುಡ್ ಈ ಸಾಧನೆ ಮಾಡಿದ ನಾಲ್ಕನೆ ಆಸ್ಟ್ರೇಲಿಯದ ಬೌಲರ್. ಜೇಮ್ಸ್ ಪ್ಯಾಟಿನ್ಸನ್, ಜೇಸನ್ ಕ್ರೇಝಾ ಮತ್ತು ಬ್ರೆಟ್ ಲೀ ಈ ಸಾಧನೆ ಮಾಡಿದ ಬೌಲರ್‌ಗಳು.

6: ಆಸ್ಟ್ರೇಲಿಯ ವಿಕೆಟ್ ಕೀಪರ್ ಬ್ರಾಡ್ ಹಡಿನ್ ಅವರು ಭಾರತದ ಮೊದಲ ಇನಿಂಗ್ಸ್‌ನಲ್ಲಿ 6 ಕ್ಯಾಚ್ ಪಡೆದು ವ್ಯಾಲಿ ಗ್ರೌಟ್, ರಾಡ್ ಮಾರ್ಷ್ ಮತ್ತು ಇಯಾನ್ ಹೀಲಿ ದಾಖಲೆ ಸರಿಗಟ್ಟಿದ್ದಾರೆ.
100: ಶೇನ್ ವ್ಯಾಟ್ಸನ್ 100ನೆ ಇನಿಂಗ್ಸ್ ಆಡಿದ್ದಾರೆ. ಅವರು 100ಕ್ಕಿಂತ ಅಧಿಕ ಇನಿಂಗ್ಸ್ ಆಡಿದ ಆಸ್ಟ್ರೇಲಿಯದ 29ನೆ ಬ್ಯಾಟ್ಸ್‌ಮನ್.

629: ಮಹೇಂದ್ರ ಸಿಂಗ್ ಧೋನಿ 629ನೆ ಬಲಿ ಪಡೆದಿದ್ದಾರೆ. ಆಸ್ಟ್ರೇಲಿಯದ ವಿಕೆಟ್ ಕೀಪರ್ ಇಯಾನ್ ಹೀಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

36: ನಾಯಕತ್ವದ ಚೊಚ್ಚಲ ಟೆಸ್ಟ್ ಆಡುತ್ತಿರುವ ಸ್ಟೀವನ್ ಸ್ಮಿತ್ ಅರ್ಧಶತಕ ದಾಖಲಿಸುವ ಮೂಲಕ ನಾಯಕರಾಗಿ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ದಾಖಲಿಸಿದ 36ನೆ ಆಸ್ಟ್ರೇಲಿಯದ ನಾಯಕರಾಗಿದ್ದಾರೆ.

2.8: ಶಾನ್ ಮಾರ್ಷ್ ಮೊದಲ ಇನಿಂಗ್ಸ್‌ನಲ್ಲಿ 32 ರನ್ ದಾಖಲಿಸಿದ್ದರು. ಈ ಮೊದಲು ಅವರು ಆರು ಇನಿಂಗ್ಸ್‌ಗಳಲ್ಲಿ 2.8 (0,3,0,11,3,0) ಸರಾಸರಿ ರನ್ ದಾಖಲಿಸಿದ್ದರು.

Write A Comment