ಮನೋರಂಜನೆ

ಜೊಕೊವಿಕ್, ಸೆರೆನಾಗೆ ಐಟಿಎಫ್ ವಾರ್ಷಿಕ ಗೌರವ

Pinterest LinkedIn Tumblr

serana

ಲಂಡನ್, ಡಿ.18: ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ನೊವಾಕ್ ಜೊಕೊವಿಕ್ ಹಾಗೂ ಸೆರೆನಾ ವಿಲಿಯಮ್ಸ್‌ಗೆ 2014ರ ಸಾಲಿನ ವಿಶ್ವ ಚಾಂಪಿಯನ್ ಗೌರವ ನೀಡಿದೆ. ಟೂರ್ ಹಾಗೂ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಐಟಿಎಫ್ ವಾರ್ಷಿಕ ಪ್ರಶಸ್ತಿಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಋತುವಿನಲ್ಲಿ ಏಳು ಪ್ರಶಸ್ತಿಗಳನ್ನು ಜಯಿಸಿದ್ದ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ ನಾಲ್ಕನೆ ಬಾರಿ ಐಟಿಎಫ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಜೊಕೊವಿಕ್ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂರನೆ ಬಾರಿ ವರ್ಷಾಂತ್ಯದಲ್ಲಿ ಅಗ್ರ ರ್ಯಾಂಕನ್ನು ಪಡೆದಿದ್ದಾರೆ. ಈ ವರ್ಷದ ಯುಎಸ್ ಓಪನ್ ಸಹಿತ ಒಟ್ಟು 18 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸೆರೆನಾ ವಿಲಿಯಮ್ಸ್ ವೃತ್ತಿಜೀವನದಲ್ಲಿ ಐದನೆ ಬಾರಿ ಐಟಿಎಫ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಐದನೆ ಬಾರಿ ಐಟಿಎಫ್ ವಿಶ್ವ ಚಾಂಪಿಯನ್ ಪ್ರಶಸ್ತಿಗೆ ಆಯ್ಕೆಯಾಗಿದ್ದು ದೊಡ್ಡ ಗೌರವ. ಮತ್ತೊಂದು ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ, ವರ್ಷಾಂತ್ಯದಲ್ಲಿ ನಂ.1 ಸ್ಥಾನ ಪಡೆದಿರುವುದು ನನಗೆ ಗೌರವವಾಗಿದೆ ಎಂದು ಸೆರೆನಾ ಹೇಳಿದ್ದಾರೆ.

ಅಮೆರಿಕದ ಸಹೋದರರಾದ ಬಾಬ್ ಹಾಗೂ ಮೈಕ್ ಬ್ರಿಯಾನ್ ಐಟಿಎಫ್ ಪುರುಷರ ಡಬಲ್ಸ್ ಚಾಂಪಿಯನ್‌ಗಳಾಗಿ, ಇಟಲಿಯ ಸಾರಾ ಇರ್ರಾನಿ ಹಾಗೂ ರಾಬರ್ಟ ವಿನ್ಸಿ ವನಿತೆಯರ ಡಬಲ್ಸ್ ಚಾಂಪಿಯನ್ ಪ್ರಶಸ್ತಿ ಪಡೆದರು.

Write A Comment