ಮನೋರಂಜನೆ

ಮೊದಲ ಟೆಸ್ಟ್: ದಕ್ಷಿಣ ಆಫ್ರಿಕ ಬೃಹತ್ ಮೊತ್ತ; ಅಮ್ಲ ದ್ವಿಶತಕ, ವಿಲಿಯರ್ಸ್ ಶತಕ

Pinterest LinkedIn Tumblr

hashim-amla___

ಸೆಂಚೂರಿಯನ್, ಡಿ.19: ನಾಯಕ ಹಾಶೀಮ್ ಅಮ್ಲ ದ್ವಿಶತಕ, ಎಬಿ ಡಿ ವಿಲಿಯರ್ಸ್ ಹಾಗೂ ವ್ಯಾನ್‌ಝಿಲ್ ಶತಕದ ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿದೆ.

ಗುರುವಾರ ಇಲ್ಲಿ ಎರಡನೆ ದಿನದಾಟದಂತ್ಯಕ್ಕೆ ಆಫ್ರಿಕ 140 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 552 ರನ್‌ಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ನಾಯಕ ಅಮ್ಲ ದ್ವಿಶತಕ(208ರನ್), ವಿಲಿಯರ್ಮ್ಸ್ (152 ರನ್) ಹಾಗೂ ವ್ಯಾನ್ ಝಿಲ್ (ಅಜೇಯ 101) ಶತಕ ಗಳಿಸಿದ್ದರು. ಆಫ್ರಿಕ 57 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಅಮ್ಲ ಹಾಗೂ ವಿಲಿಯರ್ಸ್ ನಾಲ್ಕನೆ ವಿಕೆಟ್ ಜೊತೆಯಾಟದಲ್ಲಿ 308 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ವಿಲಿಯರ್ಸ್ ಔಟಾದ ನಂತರ ಅಮ್ಲ ಹಾಗೂ ವ್ಯಾನ್‌ಝಿಲ್ 5ನೆ ವಿಕೆಟ್‌ಗೆ 155 ರನ್ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತ ಸೇರಿಸಲು ನೆರವಾದರು. ವಿಲಿಯರ್ಸ್ 20ನೆ ಟೆಸ್ಟ್ ಶತಕ ಸಿಡಿಸಿದ ಆಫ್ರಿಕದ 5ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಮ್ಲ 359 ಎಸೆತಗಳಲ್ಲಿ 200 ರನ್ ಪೂರೈಸಿದರು.

ಮೋಡ ಕವಿದ ವಾತಾವರಣದಲ್ಲಿ ಆಫ್ರಿಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ಪ್ರವಾಸಿ ವಿಂಡೀಸ್ ಪರಿಸ್ಥಿತಿಯ ಲಾಭವನ್ನು ಪಡೆಯಲು ವಿಫಲವಾಯಿತು. ವಿಂಡೀಸ್‌ನ ಪರ ರೋಚ್ ಹಾಗೂ ಬೆನ್ ತಲಾ ಎರಡು ವಿಕೆಟನ್ನು ಪಡೆದರು.

Write A Comment