ಪ್ರಮುಖ ವರದಿಗಳು

ರಣಜಿ ಟ್ರೋಫಿ: ತಮಿಳುನಾಡು ತಿರುಗೇಟು

Pinterest LinkedIn Tumblr

MUKUNDA

ಬೆಂಗಳೂರು, ಡಿ.8: ಅಭಿನವ್ ಮುಕುಂದ್ (84) ಹಾಗೂ ನಾಯಕ ರಾಮಸ್ವಾಮಿ ಪ್ರಸನ್ನ (ಅಜೇಯ 51) ಅರ್ಧಶತಕದ ಸಹಾಯದಿಂದ ತಮಿಳುನಾಡು ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ತಕ್ಕ ಉತ್ತರ ನೀಡಿದೆ. ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಎರಡನೆ ದಿನದ ಪಂದ್ಯದಲ್ಲಿ ಕರ್ನಾಟಕದ 290 ರನ್‌ಗೆ ಉತ್ತರವಾಗಿ ವಿಕೆಟ್ ನಷ್ಟವಿಲ್ಲದೆ 22 ರನ್‌ನಿಂದ ಆಟ ಮುಂದುವರಿಸಿದ ತಮಿಳುನಾಡು ತಂಡ ದಿನದಾಟದಂತ್ಯಕ್ಕೆ 99 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿದೆ. ಪ್ರಸನ್ನ ಹಾಗೂ ಶಂಕರ್ ಆರನೆ ವಿಕೆಟ್‌ಗೆ ಅಜೇಯ 45 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮೂರನೆ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿದ ಮುಕುಂದ್ (84 ರನ್, 221 ಎ., 9 ಬೌಂ.) ಹಾಗೂ ದಿನೇಶ್ ಕಾರ್ತಿಕ್(38) ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಕಾರ್ತಿಕ್ ಹಾಗೂ ಇಂದ್ರಜಿತ್ ಬೆನ್ನು ಬೆನ್ನಿಗೆ ಔಟಾದಾಗ ಪ್ರಸನ್ನರೊಂದಿಗೆ ಕೈ ಜೋಡಿಸಿದ ಮುಕುಂದ್ 5ನೆ ವಿಕೆಟ್‌ಗೆ 50 ರನ್ ಸೇರಿಸಿದರು. ಶತಕ ವಂಚಿತ ಮುಕುಂದ್ 83ನೆ ಓವರ್‌ನಲ್ಲಿ ಸ್ಪಿನ್ನರ್ ಎಚ್‌ಎಸ್ ಶರತ್‌ಗೆ ವಿಕೆಟ್ ಒಪ್ಪಿಸಿದರು.

ಕರ್ನಾಟಕದ ಪರ ಶರತ್ (2-22) ಯಶಸ್ವಿ ಬೌಲರ್ ಎನಿಸಿಕೊಂಡರೆ, ವಿನಯ್‌ಕುಮಾರ್ (1-62), ಅರವಿಂದ್ (1-48), ಶ್ರೇಯಸ್ ಗೋಪಾಲ್ (1-15) ತಲಾ ಒಂದು ವಿಕೆಟನ್ನು ಪಡೆದುಕೊಂಡರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 290 ರನ್
ತಮಿಳುನಾಡು ಪ್ರಥಮ ಇನಿಂಗ್ಸ್99 ಓವರ್‌ಗಳಲ್ಲಿ 240/5
(ಅಭಿನವ್ ಮುಕುಂದ್ 84, ಪ್ರಸನ್ನ ಅಜೇಯ 51, ದಿನೇಶ್ ಕಾರ್ತಿಕ್ 38, ಶರತ್ 2-22).

Write A Comment